ಪಕ್ಷವಾತ(ಪೆರಾಲಿಸಿಸ್) ರೋಗಿಗಳಿಗೆ 3 ಗಂಟೆಗಳೊಳಗೆ ಈ ಇಂಜೆಕ್ಷನ್ ಕೊಟ್ಟರೆ ಪಕ್ಷವಾತ ಬರುವುದಿಲ್ಲ.

ಪಕ್ಷವಾತ ಲಕ್ಷಣಗಳು ಕಾಣಿಸುತ್ತಲೇ ಪ್ರತಿ ನಿಮಿಷವೂ ಮುಖ್ಯವಾದುದು. ಆದಷ್ಟು ಬೇಗ ಚಿಕಿತ್ಸೆ ನೀಡಿದರೆ ಉತ್ತಮ. ಆಸ್ಪತ್ರಗೆ ಹೋದ ಒಡನೆಯೇ ಮಿದುಳಿನ ‘ಸಿಟಿ ಸ್ಕ್ಯಾನ್’ ಮಾಡಿ ನೋಡುತ್ತಾರೆ. ರಕ್ತನಾಳಗಳಲ್ಲಿ ಉಂಟಾದ ಅಡಚಣೆಯಿಂದ ರಕ್ತ ಪ್ರಸರಣ ನಿಂತುಹೋಗಿ ಇದರಿಂದಾಗಿ ಪಕ್ಷವಾತ ಬಂದಿದ್ರೆ ಆದಷ್ಟು ಬೇಗ ಹೆಪ್ಪು ಕಟ್ಟಿರುವ ರಕ್ತವನ್ನು ಕರಗಿಸಲು ‘ಟಿಷ್ಯೂ ಪ್ಲಾಸ್ಮಿನೋಜೆನ್ ಆಕ್ಟಿವೇಟರ್-ಟಿಪಿಎ’ ಇಂಜಕ್ಷನ್ ಕೊಡುತ್ತಾರೆ. ಇದನ್ನು ಮೂರು ಗಂಟೆಗಳ ಒಳಗೆ ನೀಡಬೇಕಾಗಿರುತ್ತದೆ. ನಾಲಕ್ಕೂವರೆ ಗಂಟೆಗಳವರೆಗೂ ಕೊಡಬಹುದು. ಮುಖ್ಯವಾದ ವಿಷಯವೆಂದರೆ, ಟಿಪಿಎ ಇಂಜಕ್ಷನ್ ಸಾವು ಸಂಭವಿಸುವುದನ್ನು ತಡೆಯುವುದಿಲ್ಲ.

ಸಾಮಾನ್ಯವಾಗಿ ಪಕ್ಷವಾತಕ್ಕೆ ಈಡಾದವರು ಮೂರರಲ್ಲಿ ಒಬ್ಬರು ಮಾತ್ರ ಮರಣಿಸುವ ಸಂಭವವಿದೆ.ಇಂತಹ ಮರಣ ಹೆಚ್ಚಾಗಿ 48-72 ಗಂಟೆಗಳಲ್ಲಿ ಸಂಭವಿಸುತ್ತದೆ. ಆದುದರಿಂದ ಪರಿಸ್ಥಿತಿಯನ್ನು ಹತೋಟಿಯಲ್ಲಿಡಲು ಈ ಸಮಯದಲ್ಲಿ ಸೂಕ್ತ ಚಿಕಿತ್ಸೆ ನೀಡುವುದು ಅತ್ಯವಶ್ಯಕ.

ಮಿದುಳಿನ ಸ್ವಲ್ಪ ಭಾಗಕ್ಕೆ ಹಾನಿಯಾಗಿದ್ದರೆ ಅವಶ್ಯವಿದ್ದಲ್ಲಿ ಮೊದಲಿಗೆ ಆಕ್ಸಿಜನ್ ನೀಡಬೇಕಾಗುತ್ತದೆ. ಮಿದುಳಿಗೆ ರಕ್ತಪ್ರಸಾರ ಕುಂಠಿತವಾದರೆ ಅಲ್ಲಿ ನೀರು ತುಂಬಿಕೊಳ್ಳುತ್ತದೆ. ಇದರಿಂದಾಗಿ ಮಿದುಳು ಬಾತುಕೊಳ್ಳುತ್ತದೆ.ಈ ಬಾವನ್ನು ಕಡಿಮೆಮಾಡಲು ಔಷದಗಳನ್ನು ನೀಡುತ್ತಾರೆ.ಹೀಗೆ ಸೂಕ್ತ ಸಮಯದಲ್ಲಿ’ಟಿಪಿಎ’ ಕೊಡುವುದರೊಂದಿಗೆ ಪರಿಸ್ಥಿತಿಗೆ ಅನುಗುಣವಾಗಿ ಉಪಶಮನ ಚಿಕಿತ್ಸೆಯನ್ನೂ ನೀಡಬೇಕಾಗುತ್ತದೆ.

ಪಕ್ಷವಾತ ಲಕ್ಷಣಗಳು ಕಾಣಿಸಿಕೊಂಡ 3 ಗಂಟೆಗಳ ಒಳಗೆ ‘ಟಿಪಿಎ’ ಪ್ರಾರಂಭಿಸಿದರೆ, ಬೇಗ ಗುಣವಾಗಬಹುದು. ಒಂದು ವೇಳೆ ನಾಲಕ್ಕು ಗಂಟೆಗಳ ನಂತರ ಆಸ್ಪತ್ರೆಗೆ ಬಂದಲ್ಲಿ ರಕ್ತ ಹೆಪ್ಪುಕಟ್ಟಿರುವುದು ‘ಸಿಟಿ ಸ್ಕ್ಯಾನ್ ಮೂಲಕ’ತಿಳಿದು ಬಂದಲ್ಲಿ ಒಡನೆಯೇ ‘ಆಂಜಿಯೋಗ್ರಾಮ್’ ಮೂಲಕ ಹೆಪ್ಪುಕಟ್ಟಿದ ಭಾಗವನ್ನು ತೆಗೆಯುತ್ತಾರೆ .ಒಂದು ವೇಳೆ ಅದು ವಿಫಲವಾದಲ್ಲಿ ‘ಎಂಈಆರ್ಸೀಐ'(MERCI) ಇಲ್ಲವೇ ‘ಪೆನಂಬ್ರಾ’ ಮೊದಲಾದ ಸೂಕ್ಷ್ಮ ಸಲಕರಣೆಗಳಿಂದ ಆ ಗಡ್ಡೆಯನ್ನು ಹೊರಗೆ ತೆಗೆಯುತ್ತಾರೆ.

ಇದರಿಂದಾಗಿ ಮಿದುಳಿಗೆ ರಕ್ತ ಪ್ರಸಾರ ಪುನ: ಪ್ರಾರಂಭವಾಗುತ್ತದೆ. ಇದನ್ನು ಪಕ್ಷವಾತ ಬಂದ 6-8 ಗಂಟೆಗಳವರೆಗೂ ಮಾಡಬಹುದಾಗಿದೆ. ಒಂದು ವೇಳೆ ಮಿದುಳಿನ ರಕ್ತನಾಳ ಒಡೆದುಹೋಗಿ ಸಮಸ್ಯೆ ಎದುರಾದರೆ- ಮಿದುಳಿನಲ್ಲಿ ಒತ್ತಡ ಹೆಚ್ಚಾಗದಂತೆ ನೋಡಿಕೊಳ್ಳಲು ಒಡೆದ ರಕ್ತನಾಳವನ್ನು ಮುಚ್ಚಿ ಮತ್ತೆ ಸರಿಪಡಿಸಲು ಶಸ್ತ್ರಚಿಕಿತ್ಸೆಯ ಅಗತ್ಯವಿರುತ್ತದೆ


Click Here To Download Kannada AP2TG App From PlayStore!

Share this post

scroll to top