ಈ ಜ್ಯೂಸ್ ಯಾವುದೇ ರೋಗವನ್ನಾದರೂ ಕೂಡಲೆ ಕಡಿಮೆ ಮಾಡುತ್ತದೆ..! ಸರ್ವರೋಗ ನಿವಾರಿಣಿ..! ಹೇಗೆ ತಯಾರಿಸಬೇಕು ಗೊತ್ತಾ..?

ನಮಗೆ ಯಾವುದೇ ರೀತಿಯ ಅನಾರೋಗ್ಯ ಸಮಸ್ಯೆಗಳಿದ್ದರೂ ಸರ್ವರೋಗ ನಿವಾರಣಿ ಆಯುರ್ವೇದದಲ್ಲೊಂದು ಇದೆ. ಇದನ್ನು ನೀವೇ ಮನೆಯಲ್ಲಿ ತಯಾರಿಸಿಕೊಳ್ಳಬಹುದು. ಇದನ್ನು ತಯಾರಿಸುವುದು ತುಂಬಾ ಸುಲಭ. ತುಂಬಾ ಕಡಿಮೆ ವೆಚ್ಚದಲ್ಲಿ ಕೂಡಿರುವ ಕೆಲಸ. ಇದು ಸಂಪೂರ್ಣ ಆಯುರ್ವೇದ ಆದಕಾರಣ, ಸೈಡ್ ಎಫೆಕ್ಟ್ಸ್ ಸಹ ಇದರಿಂದ ಆಗಲ್ಲ. ಈ ಮಿಶ್ರಣವನ್ನು ಹೇಗೆ ತಯಾರಿಸಿಕೊಳ್ಳಬೇಕೆಂದರೆ…

ಬೇಕಾದ ಪದಾರ್ಥಗಳು:
250 ಗ್ರಾಮ್ ಮೆಂತ್ಯೆ
100 ಗ್ರಾಮ್ ಓಂಕಾಳು
50 ಗ್ರಾಮ್ ಕಪ್ಪು ಜೀರಿಗೆ

ತಯಾರಿಸುವ ವಿಧಾನ:
ಮೊದಲು ಮೇಲೆ ತಿಳಿಸಿದ ಮೂರು ಪದಾರ್ಥಗಳನ್ನು ಸ್ವಚ್ಛಗೊಳಿಸಿಕೊಳ್ಳಬೇಕು. ಇವನ್ನು ಬೇರೆಬೇರೆಯಾಗಿ ಹೆಂಚಿನ ಮೇಲೆ ಹಾಕಿ ಸ್ವಲ್ಪ ಬಿಸಿ ಮಾಡಿಕೊಳ್ಳಬೇಕು. ಮೆಂತ್ಯೆ, ಓಂಕಾಳು, ಕಪ್ಪು ಜೀರಿಗೆ ಬೆರೆಸಿ ಪುಡಿ ತಯಾರಿಸಿಕೊಳ್ಳಬೇಕು. ಈ ಪುಡಿಯನ್ನು ಗಾಳಿಯಾಡದ ಜಾಡಿಗೆ ಹಾಕಿ ಸಂಗ್ರಹಿಸಿಡಬೇಕು.

ಹೇಗೆ ಬಳಸಬೇಕೆಂದರೆ…
ಪ್ರತಿ ದಿನ ರಾತ್ರಿ ಊಟದ ಬಳಿಕ 1 ಗ್ಲಾಸ್ ಬಿಸಿ ನೀರಿನಲ್ಲಿ 1 ಸ್ಫೂನ್ ಚೂರ್ಣ (ಪುಡಿ) ಬೆರೆಸಿಕೊಂಡು ಕುಡಿಯಬೇಕು. ಬಿಸಿ ನೀರಿನಲ್ಲಿ ಮಾತ್ರ ಈ ಪುಡಿಯನ್ನು ಹಾಕಿಕೊಂಡು ಕುಡಿಯಬೇಕು. ಈ ಚೂರ್ಣ ಕುಡಿದ ಬಳಿಕ ಯಾವುದೇ ಆಹಾರ ತೆಗೆದುಕೊಳ್ಳಬಾರದು. ಎಲ್ಲಾ ವಯಸ್ಸಿನ ಮಹಿಳೆಯರು, ವೃದ್ಧರು ಈ ಚೂರ್ಣವನ್ನು ಕುಡಿಯಬಹುದು. ಪ್ರತಿನಿತ್ಯ ಈ ಚೂರ್ಣವನ್ನು ಸೇವಿಸುವುದರಿಂದ ದೇಹದಲ್ಲಿ ಸಂಗ್ರಹವಾಗಿರುವ ವಿಷ ಪದಾರ್ಥಗಳು ಮಲ, ಮೂತ್ರದ ಮೂಲಕ ಹೊರಗೆ ಹೋಗುತ್ತವೆ. 80-90 ದಿನಗಳ ಕಾಲ ಬಳಸಿದ ಬಳಿಕ ನಿಮಗೆ ಉತ್ತಮ ಫಲಿತಾಂಶ ಸಿಗುತ್ತದೆ. ಅಷ್ಟೊತ್ತಿಗೆ ಅಧಿಕವಾಗಿರುವ ಕೊಬ್ಬು ಸಹ ಕರಗುತ್ತದೆ. ರಕ್ತ ಶುದ್ಧವಾಗುತ್ತದೆ. ಒಳ್ಳೆಯ ರಕ್ತ ದೇಹದಲ್ಲಿ ಪ್ರವಹಿಸುತ್ತದೆ. ದೇಹದಲ್ಲಿನ ಸುಕ್ಕುಗಳು ಕಡಿಮೆಯಾಗುತ್ತವೆ. ದೇಹ ಬಲವಾಗಿ, ಚುರುಕಾಗಿ ಪ್ರಕಾಶವಂತವಾಗಿ ಬದಲಾಗುತ್ತದೆ. ಎರಡು ಅಥವಾ ಮೂರು ತಿಂಗಳ ಬಳಿಕ ಫಲಿತಾಂಶವನ್ನು ನೀವೇ ಗಮನಿಸುತ್ತೀರ.

ಇದರಿಂದ ಆಗುವ ಪ್ರಯೋಜನಗಳು:
1. ಕೀಲು ನೋವು, ಮೊಳಕಾಲ ನೋವು ಕಡಿಮೆಯಾಗುತ್ತದೆ.
2. ಮೂಳೆಗಳು ಬಲವಾಗಿ ಬದಲಾಗುತ್ತವೆ.
3. ಕಣ್ಣಿನ ದೃಷ್ಟಿ ಉತ್ತಮಗೊಳ್ಳುತ್ತದೆ
4. ಕೂದಲ ಬೆಣವಣಿಗೆ ಸುಧಾರಿಸುತ್ತದೆ.
5. ಮಲಬದ್ಧತೆ ಶಾಶ್ವತವಾಗಿ ನಿವಾರಣೆಯಾಗುತ್ತದೆ.
6. ರಕ್ತ ಸಂಚಲನೆ ಉತ್ತಮವಾಗುತ್ತದೆ.
7. ದೀರ್ಘ ಕಾಲದ ಕೆಮ್ಮನ್ನು ನಿವಾರಿಸುತ್ತದೆ.
8. ಹೃದಯ ಕೆಲಸ ಉತ್ತಮಗೊಳ್ಳುತ್ತದೆ
9. ನೀವು ತುಂಬಾ ಹುಷಾರಾಗುತ್ತೀರ.
10. ಜ್ಞಾಪಕಶಕ್ತಿ ಹೆಚ್ಚುತ್ತದೆ.
11. ಈ ಹಿಂದೆ ತೆಗೆದುಕೊಂಡ ಅಲೋಪತಿ ಔಷಧಿಗಳ ದುಷ್ಪರಿಣಾಮಗಳನ್ನು ಇದು ನಿವಾರಿಸುತ್ತದೆ
12. ರಕ್ತ ಶುದ್ಧಿ ಮಾಡುತ್ತದೆ.
13 ಎಲ್ಲಾ ರಕ್ತನಾಳಗಳು ಶುದ್ಧವಾಗುತ್ತವೆ.
14. ವಸಡುಗಳು ಬಲಗೊಳ್ಳುತ್ತವೆ.
15. ಮಧುಮೇಹವನ್ನು ಇದು ನಿಯಂತ್ರಿಸುತ್ತದೆ.


Click Here To Download Kannada AP2TG App From PlayStore!