M.A ಓದಿದ ಈ ಯುವಕ ಊರಿನಲ್ಲಿ ಕಸವನ್ನು ಶೇಖರಿಸುತ್ತಾನೆ. ಆತನ ಸಮಾಜಸೇವೆಗೆ ಹ್ಯಾಟ್ಸಪ್

ಅಬ್ಬಾ ವಾಸನೆ ಎಷ್ಟು ದುರ್ವಾಸನೆ ಬರುತ್ತಿದೆ ಎಂದು ಕಸದ ಪಕ್ಕ ಹೋಗುತ್ತಿದ್ದಾಗ ನಮ್ಮ ರಿಯಾಕ್ಷನ್ ಈ ರೀತಿ ಇರುತ್ತೆ. ಆ ಸಂದರ್ಭದಲ್ಲಿ ಮೂಗಿಗೆ ಬಟ್ಟೆ ಅಥವಾ ಕೈಯನ್ನು ಅಡ್ಡವಾಗಿರಿಸಿಕೊಳ್ಳುತ್ತಾ ಆ ವಾಸನೆಯನ್ನು ಹಾಗೆ ಭರಿಸಿಕೋಳ್ಳುತ್ತಾ ಹೊಗ್ತೀವಿ ಸರಿ ಹೇಗೋ ಅದನ್ನು ಮುನ್ಸಿಪಾಲಿಟಿನವರು ತೆಗೆದುಕೊಂಡು ಹೋಗ್ತಾರಲ್ವಾ ಆಗ ಆ ಪ್ರದೆಶ ಸ್ವಲ್ಪ ಶುಚಿಯಾಗಿಯೂ ಇರುತ್ತೇ, ಮತ್ತೆ ಅಲ್ಲೇ ಕಸ ಹಾಕುವುದು ಮಾಮುಲಿ ಯಾಗುತ್ತದೆ. ಮತ್ತೆ ಆ ಕಸವನ್ನು ಮುನ್ಸಿಪಾಲಿಟಿಯವರು ಯವಾಗ ತೆಗೆದುಕೊಂಡುಹೊಗ್ತಾರೆ ಎಂದು ಕಾಯುತ್ತಾ ಇರುತ್ತೇವೆ. ಇಲ್ಲಿಯವರೆಗೂ ಚೆನ್ನಾಗಿದೆ. ಮುನ್ಸಿಪಾಲಿಟಿಯವರು ಇದ್ದು ಕಸವನ್ನು ತೆಗೆಯುತ್ತಾ ಇದ್ದರೆ ಚೆನ್ನಾಗಿರುತ್ತೆ, ಅದೇ ಅವರು ಇದ್ದೂ ಸರಿಯಾಗಿ ಕೆಲಸ ಮಾಡದಿದ್ದರೆ? ಇಲ್ಲದ್ದಿದ್ದರೆ ಅಲ್ಲಿ ಮುನ್ಸಿಪಾಲಿಟಿ ಸಿಬ್ಬಂದಿ ಇಲ್ಲವಾದರೆ? ಇನ್ನೇನಿದೆ ಆ ಪ್ರದೇಶದಲ್ಲಿ ಇರುವವರು ನಿತ್ಯವೂ ರೋಗಗಳೂ, ಅನಾರೋಗ್ಯದಿಂದ ನರಳಬೇಕಾಗುತ್ತದೆ. ಹೀಗಿದ್ದರೂ ಅತಂಹ ಪ್ರದೇಶಗಳಲ್ಲಿನ ಕಸದ ಬಗ್ಗೆ ಯಾರೂ ಗಮನ ಕೋಡುವುದಿಲ್ಲ. ನಮಗ್ಯಾಕೆ ಬಿಡು ಅಂತಾ ಮೂಗು ಮುಚ್ಚಿಕೊಂಡು ಹೋಗಿಬಿಡ್ತಾರೆ . ಆದರೆ ಆ ಯುವಕ ಹಾಗೆ ಹೋಗಲಿಲ್ಲ ಕಸವನ್ನು ಶೇಖರಿಸಿ ಅದನ್ನು ಕ್ರಮಬದ್ದವಾಗಿ ಮರುಬಳಕೆ (ರೀಸೈಕಿಲ್) ಮಾಡುತ್ತಾ ಸುಮಾರು 100% ರಷ್ಟು ಮರುಪಯೋಗಿಸಿಕೊಳ್ಳುವಂತೆ ಮಾಡಿದ್ದಾನೆ. ಬಡಕುಟುಂಬದಲ್ಲಿ ಹುಟ್ಟಿದರೂ, ಸಮಾಜಕ್ಕೆ ಏನೋ ಒಂದು ಮಾಡಬೇಕೆಂಬ ಆಲೋಚನೆಯಿಂದ ಕಸವನ್ನು ಯಶಸ್ವಿಯಾಗಿ ಮರುಬಳಕೆ ಮಾಡುತ್ತಾ ತನ್ನ ಊರಿಗೆ ಒಳಿತನ್ನು ಮಾಡಲು ಪ್ರಯತ್ನಿಸುತ್ತಿದ್ದಾನೆ.

ಆತನ ಹೆಸರು ಜಬೀರ್ ಕಾರತ್, ಕೇರಳಾದಲ್ಲಿನ ಕೋಜಿಕೋಡ್ ನಗರಕ್ಕೆ 45 ಕಿಲೋಮಿಟರ್ ದೂರದಲ್ಲಿರುವ ಪೂತುಪ್ಪಡಿ ಗ್ರಾಮದಲ್ಲಿ ಒಂದು ಬಡಕುಟುಂಬದಲ್ಲಿ ಜನಿಸಿದ್ದಾನೆ. ತಮ್ಮ ಗ್ರಾಮಕ್ಕೆ ಹತ್ತಿರದಲ್ಲಿನ ಸರ್ಕಾರಿ ಪಾಠಶಾಲೆಯಲ್ಲಿ 10ನೇ ತರಗತಿಯವರೆಗೂ ಓದಿದ ನಂತರ ವಿದ್ಯಾರ್ಥಿ ವೇತನ ಸಹಾಯದಿಂದ ಡೆಲ್ಲಿಯಲ್ಲಿ ಪಿಯುಸಿ, ಡಿಗ್ರಿಗಳನ್ನು ಪೂರ್ತಿ ಮಾಡಿದನು. ಅನಂತರ ದೆಹಲಿ ಯೂನಿವರ್ಸಿಟಿಯಲ್ಲಿ ಎಂ.ಎ ಓದಿದನು. ಆದರೆ ಚಿಕ್ಕವಯಸ್ಸಿನಿಂದ ಜಬೀರ್‍ಗೆ ಸಾಮಾಜಿಕ ಸೇವೆ ಎಂದರೂ, ಸೇವಾ ಕಾರ್ಯಕ್ರಮಗಳೆಂದರೂ, ತುಂಬಾ ಆಸಕ್ತಿ ಇತ್ತು. ವಿದ್ಯಾಭ್ಯಾಸ ಮುಗಿಸಿದ ನಂತರ ಸಮಾಜಕ್ಕೆ, ಮುಖ್ಯವಾಗಿ ತಾನು ಹುಟ್ಟಿ ಬೆಳೆದು ಊರಿಗೆ ಏನೋ ಒಂದು ಮಾಡಿಬೇಕೆಂದುಕೊಂಡನು ಹೀಗೆ ಎಂ.ಎ ಆದಮೇಲೆ ಗಾಂಧಿ ಫೆಲೋಶಿಪ್’ಗೆ ಅಪ್ಲಿಕೇಷನ್‌ ಹಾಕಿ ಸುಮಾರು 5 ವರ್ಷಗಳು ಅದರಲ್ಲಿ ಕೆಲಸಮಾಡಿದನು. ಇದರಲ್ಲಿನ ಒಂದು ಭಾಗವಾಗಿ ಮುಂಬೈಗೆ ಹೋಗಿ ಕೆಲವು ಸಾಮಾಜಿಕ ಸೇವಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡನು. ಆದರೆ ತನ್ನ ಫೆಲೋಷಿಪ್ ಆದನಂತರ ಮತ್ತೆ ತನ್ನ ಸ್ವಂತ ಊರಿಗೆ ಹಿಂತಿರುಗಿ ಬಂದನು. ಅಲ್ಲೇ ತನ್ನ ಊರಿಗಾಗಿ ಏನಾದರೂ ಮಾಡಬೇಕೆಂದುಕೊಂಡನು.

ಹೀಗೆ ಜಬೀರ್ ತನ್ನ ಗ್ರಾಮದಲ್ಲಿ ಕಸ ಹೆಚ್ಚಾಗಿ ಬೆಳೆದು ನಿಂತಿರುವುದನ್ನು ಕಂಡು ಅದರಿಂದ ಪ್ರಜೆಗಳು ಎಷ್ಟು ತೊಂದರೆ ಅನುಭವಿಸುತ್ತಿದ್ದಾರೆಂದು ಗಮನಿಸಿದನು. ಮುಖ್ಯವಾಗಿ ಅಲ್ಲಿನ ವ್ಯಾಪರಿಗಳು ತಮ್ಮ ಅಂಗಡಿಗಳಲ್ಲಿ ಉಳಿದಂತಹ ವ್ಯರ್ಥ ಪದಾರ್ಥಗಳನ್ನು, ಕಸವನ್ನು ರಸ್ತೆಯಲ್ಲಿ ಬಿಸಾಡುವುದನ್ನು ಆರಂಭಿಸಿದರು. ಇದನ್ನು ನೋಡಿದ ಜಬೀರ್ ಇದನ್ನೂ ಹೇಗಾದರೂ ಮಾಡಿ ತೊಲಗಿಸಿ ಮತ್ತೇ ಉಪಯೋಗಿಸಿಕೊಳ್ಳುವಂತೆ 100% ರಷ್ಟು ರೀಸೈಕಿಲ್(ಪುನರ್ಬಳಕೆ) ಮಾಡಬೇಕೆಂದುಕೊಂಡನು. ಆದರೆ ಅದರಲ್ಲಿ ಜಬೀರ್ ಗೆ ಅನುಭವವಿಲ್ಲ.ಹಾಗಾಗಿ ಕಸವನ್ನು ರೀಸೈಕಿಲ್ ಮಾಡುವ ಒಂದು ಸಂಸ್ಥೆಯಲ್ಲಿ ಆತನು ಕೆಲಸಕ್ಕಾಗಿ ಸೇರಿದನು. ಆ ಪ್ರಕ್ರಿಯೆ ಎಲ್ಲವೂ ಹೇಗೆ ನಡೆಯುತ್ತದೆ ಎಂದು ಪೂರ್ಣವಾಗಿ ತಿಳಿದುಕೊಳ್ಳಲು ಕೆಲವು ಪ್ರದೇಶಗಳಿಗೆ ನಿತ್ಯವೂ ತಾನೇ ಸ್ವತಃ ಭೇಟಿ ನೀಡಿ ಕಸವನ್ನು ಸಂಗ್ರಹಿಸಿ ಅದನ್ನು ರೀಸೈಕ್ಲಿಂಗ್’ಗಾಗಿ ತೆಗೆದುಕೊಂಡು ಹೋಗುವುದನ್ನು, ಹಾಗೇಯೆ ಜಬೀರ್ ಆ ಕೆಲಸವನ್ನು 3 ತಿಂಗಳುಗಳ ಕಾಲ ಮಾಡಿದ ನಂತರ ಆತನ ತನ್ನ ಸ್ವಂತ ಗ್ರಾಮದಲ್ಲಿ ಅಂತಹ ಒಂದು ಸಣ್ಣ ಕಂಪನಿಯನ್ನು ಸ್ಥಾಪಿಸಬೇಕೆಂದುಕೊಂಡನು.
ಹಾಗೆ ಸಂಕಲ್ಪ ಮಾಡಿದ್ದೆ ತಡ ಆತನು ಗ್ರಾಮದಲ್ಲಿನ ಎನ್.ಜಿ.ಓ ಸಂಸ್ಥೆಗಳ ಸಹಕಾರದಿಂದ ಒಂದು ರೀಸೈಕಿಲ್ ಕಂಪನಿ ಸ್ಥಾಪಿಸಿದನು. ತನ್ನ ಗ್ರಾಮದಲ್ಲಿ ಉತ್ಪತ್ತಿಯಾಗುವ ಕಸವನ್ನು ಆತ ಸಂಗ್ರಹಿಸಿ ಅದನ್ನು 90% ರಷ್ಟು ರೀಸೈಕಿಲ್ ಮಾಡುತ್ತಿದ್ದನು. ಅಷ್ಟೆ ಅಲ್ಲ, ಕಸವನ್ನು ಎಲ್ಲೆಂದರಲ್ಲಿ ಹಾಕದಂತೆ ವ್ಯಾಪಾರಿಗಳಿಗೆ , ಪ್ರಜೆಗಳಿಗೆ ಕೌನ್ಸಿಲಿಂಗ್ ಸಹ ಕೋಡುತ್ತಿದ್ದಾನೆ. ಜಬಿರ್ ಮಾಡಿದ ರೀಸೈಕಿಲ್ ಕಸದಿಂದ, ಪ್ಲಾಸ್ಟಿಕ್ ಮೆಟೀರಿಯಲ್ಸ್ ನಿಂದ ಪ್ಲೇಟ್, ಪಿಂಗಾಣಿ ವಸ್ತುಗಳು ಮಾಡುವುದು ಹಾಗೂ ತರಕಾರಿಗಳಂತಹ ವಸ್ತುಗಳಿಂದ ಸಾವಯವ ಗೊಬ್ಬರ ಮಾಡಲು ಪ್ರಾರಂಭಿಸಿದರು. ಇದರಿಂದ 100% ರಷ್ಟು ಕಸದಲ್ಲಿ ಸುಮಾರು 90% ರಷ್ಟು ಕಸ ಮರುಬಳಕೆಗೆ ಸಾಧ್ಯವಾಗುತ್ತದೆ. ಇದರಿಂದ ವಾತಾವರಣಕ್ಕೆ ಮಾತ್ರವಲ್ಲ ತಮ್ಮ ಊರಿನ ಜನರಿಗೂ ಎಷ್ಟೋ ಅನೂಕೂಲವಾಗುತ್ತದೆ ಎಂದು ಹೇಳುವ ಜಬೀರ್’ನಂತಹ ವ್ಯಕ್ತಿಗಳಿದ್ದರೆ ಆಗ ಕಸವಿಲ್ಲದ ಸ್ವಚ್ಚ ಭಾರತ್ ಆಗಿ ನಮ್ಮ ದೇಶವನ್ನು ನೋಡಬಹುದು ಅಲ್ವಾ..?


Click Here To Download Kannada AP2TG App From PlayStore!

Share this post

scroll to top