ಎಂತಹ ಕೀಲು ನೋವನ್ನಾದರೂ (ಆರ್ಥರೈಟಿಸ್) ಮೂರು ತಿಂಗಳಲ್ಲೇ ಕಡಿಮೆ ಮಾಡುವ ಅದ್ಭುತವಾದ ಔಷಧಿ…!

ಕೂತರೂ, ನಿಂತರೂ, ಬಗ್ಗಿದರೂ…. ಕೀಲು, ಮೂಳೆಗಳ ನೋವು….. ಒಂದು ಹೆಜ್ಜೆ ತೆಗೆದು ಇನ್ನೊಂದು ಹೆಜ್ಜೆ ಹಾಕಬೆಕೆಂದರೇನೆ  ತೀವ್ರವಾದ ನೊವು ಅನುಭವಿಸಬೇಕಾಗುತ್ತದೆ. ಅಂತಹ ನೋವನ್ನು ಉಂಟುಮಾಡುತ್ತವೆ ಈ ರುಮಾಟಾಯಿಡ್, ಅರ್ಥರೈಟಿಸ್ ನೋವುಗಳು. ನಿಜವಾಗಲೂ ಎರಡು  ಕೀಲುಗಳು, ಮೂಳೆಗಳಿಗೆ ಸಂಬಂದಿಸಿದ ನೋವುಗಳೇ ಆದರೂ ಹೆಚ್ಚು ಕಡಿಮೆ ಒಂದೇ ಕಾಯಿಲೆಯ ಲಕ್ಷಣಗಳನ್ನು ಹೊಂದಿರುತ್ತವೆ. ಆದರೆ ಕೆಳಗೆ ಕೊಟ್ಟಿರುವ ಎರಡು ಪವರ್ ಫುಲ್ ಎಫೆಕ್ಟೀವ್ ಟಿಪ್ಸ್’ಗಳನ್ನು ಆಚರಿಸಿದರೆ ಕೇವಲ 3 ತಿಂಗಳಲ್ಲಿ ಎಂತಹ ಅರ್ಥರೈಟಿಸ್ ನೋವುಗಳಾದರೂ, ಕ್ಷಣದಲ್ಲಿ ಕಡಿಮೆಯಾಗುತ್ತವೆ. ಆ ಟಿಪ್ಸ್ ಗಳಾವುವು ಎಂದು  ಈಗ ನಾವು ತಿಳಿದುಕೊಳ್ಳೊಣ ಬನ್ನಿ..

1.ಮೆಂತ್ಯೆ ಕಾಳು…..

ಒಂದು ಟೀ ಸ್ಪೂನಷ್ಟು ಮೆಂತೆಕಾಳನ್ನು ತೆಗೆದುಕೊಂಡು, ಅವುಗಳನ್ನು ಒಂದು ಗ್ಲಾಸ್ ಉಗುರು ಬೆಚ್ಚಗಿನ ನೀರಿನಲ್ಲಿ ಹಾಕಿ ರಾತ್ರಿಯೆಲ್ಲ ನೆನೆಯಲು ಬಿಡಬೇಕು. ಬೆಳಿಗ್ಗೆ ಖಾಲಿ ಹೊಟ್ಟೆಗೆ  ಆ ನೀರನ್ನು ಕುಡಿಯಬೇಕು. ಇದರಿಂದ ಎಂತಹ ಆರ್ಥರೈಟಿಸ್ ನೋವಾದರೂ ಕ್ಷಣಮಾತ್ರದಲ್ಲಿ ವಾಸಿಯಾಗುತ್ತದೆ. ಆದರೆ ಈ ವಿಧಾನವನ್ನು ಕನಿಷ್ಟ 3 ತಿಂಗಳು ಮಾಡಬೇಕು. ನೋವು ಸ್ವಲ್ಪ ಕಡಿಮೆ ಇದ್ದವರಾದರೆ  30 ರಿಂದ 40 ದಿನಗಳಲ್ಲೇ ಫಲಿತಾಂಶವನ್ನು ಕಾಣಬಹುದು.

2.ಪಾರಿಜಾತ ಎಲೆಗಳು…..

ಪಾರಿಜಾತ ಗಿಡ ನಿಮಗೆ ತಿಳಿದಿರುತ್ತದೆ. ಅದರ ಹೂ ಬಿಳಿಯ ಬಣ್ಣದಲ್ಲಿರುತ್ತದೆ. ರಾತ್ರಿ ಹೊತ್ತಿನಲ್ಲಿ ಈ ಹೂಗಳು ಬಿಡುತ್ತವೆ. ಸುಮಾರು ದೂರದವರೆಗೂ ಈ ಹೂವಿನ ಪರಿಮಳ ವಿರುತ್ತದೆ. ದೇವಾಲಯಗಳಲ್ಲಿ ಹೆಚ್ಚಾಗಿ ಈ ಗಿಡಗಳೇ ಇರುತ್ತವೆ. ಇದರ ಎಲೆಗಳನ್ನು 6, 7 ರಷ್ಟು ತೆಗೆದುಕೊಂಡು ನುಣ್ಣಗೆ ಫೇಸ್ಟ್ ಮಾಡಿಕೊಳ್ಳಬೇಕು. ಅದನ್ನು ಒಂದು ಗ್ಲಾಸ್ ನೀರಿನಲ್ಲಿ  ಚೆನ್ನಾಗಿ ಕುದಿಸಬೇಕು. ಆ ನೀರು ಅರ್ಧ ಆಗುವವರೆಗೂ ಕಷಾಯದಂತೆ ಮಾಡಿಕೊಳ್ಳಬೇಕು. ಆ ಕಷಾಯವನ್ನು ರಾತ್ರಿಯೆಲ್ಲ ಹಾಗೆಯೇ ಇಟ್ಟು ಬೆಳಿಗ್ಗೆ ತಣ್ಣಗೆ ಇರುವಾಗಲೇ ಕುಡಿಯಬೇಕು.

ಮೇಲೆ ಹೇಳಿರುವ ಪಾರಿಜಾತ ಎಲೆಗಳ ಕಷಾಯವು, ರುಮಟಾಯಿಡ್, ಅರ್ಥರೈಟಿಸ್ ನೋವುಗಳಿಗೆ ಅದ್ಭುತವಾದ ಔಷಧವಾಗಿ ಕೆಲಸ ಮಾಡುತ್ತದೆ. ಇದನ್ನು ತಯಾರಿಮಾಡಿಕೊಂಡು ಪ್ರತಿದಿನ ತೆಗೆದುಕೊಂಡರೆ  ಕೇವಲ 30 ರಿಂದ 40 ದಿನಗಳಲ್ಲೇ ಎಂತಹ ಕೀಲು ನೋವಾದರೂ ವಾಸಿಯಾಗುತ್ತದೆ. ಮೂಳೆಗಳಲ್ಲಿ ಸವೆದುಹೋಗಿರುವ ಕಾರ್ಟಿಲೆಜ್ ಎಂಬ ಅಂಶ ಮತ್ತೆ ಉತ್ಪತ್ತಿಯಾಗುತ್ತದೆ. ಜೊತೆಗೆ ಈ ಔಷಧವು ಡೆಂಗಿ ಜ್ವರಕ್ಕೂ ಸಹ ಉಪಯುಕ್ತವಾದದ್ದು. ಡೆಂಗಿ ಕಾರಣವಾಗಿ ಬರುವ ಮೈ ನೋವುಗಳು ಗುಣಮುಖವಾಗಬೇಕೆಂದರೆ ಈ ಔಷಧವನ್ನು ಕುಡಿಯಬೇಕು.

ಮೇಲೆ ಸೂಚಿಸಿರುವ ಎರಡು ಪದ್ದತಿಗಳಲ್ಲಿ ಯಾವುದಾದರೂ ಒಂದನ್ನು ಮಾತ್ರ ಪ್ರಯತ್ನಮಾಡಬೇಕು. ಇಲ್ಲವಾದರೆ ಬೇರೆ  ಅನಾರೋಗ್ಯಗಳು, ಸಮಸ್ಯೆಗಳು ಬರುವುದಕ್ಕೆ ಅವಕಾಶವಾಗುತ್ತದೆ.


Click Here To Download Kannada AP2TG App From PlayStore!

Share this post

scroll to top