ಈ ಸಣ್ಣ ಟ್ರಿಕ್ ಪಾಲಿಸಿದರೆ ಕನ್ನಡಕ ಬಳಸಬೇಕಾದ ಅಗತ್ಯ ಬರಲ್ಲ. ಕಣ್ಣಿನ ದೃಷ್ಟಿ ಶೇ.100 ಹೆಚ್ಚಾಗುತ್ತದೆ.

ಇಂದು ಬಹಳಷ್ಟು ಮಂದಿಯನ್ನು ಕಾಡುತ್ತಿರುವ ಸಮಸ್ಯೆಗಳಲ್ಲಿ ಕಣ್ಣಿನ ದೃಷ್ಟಿಯೂ ಒಂದು. ಹಿರಿಯ ಕಿರಿಯ ಎಂಬ ಬೇಧಭಾವ ಇಲ್ಲದೆ ಬಹಳಷ್ಟು ಮಂದಿಗೆ ಈ ಸಮಸ್ಯೆ ಇದೆ. ಈ ಹಿನ್ನೆಲೆಯಲ್ಲಿ ದಿನದಿಂದ ದಿನಕ್ಕೆ ಕನ್ನಡಕ ಬಳಸುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಆದರೆ ಕಣ್ಣಿನ ಸಮಸ್ಯೆಗಳು ಬರಲು ಮುಖ್ಯ ಕಾರಣ ಪೋಷಕ ಆಹಾರ ಲೋಪ. ಇದರಿಂದಲೇ ಆ ಸಮಸ್ಯೆ ಬರುತ್ತಿದೆ ಎಂದು ವೈದ್ಯರು ಹೇಳುತ್ತಿದ್ದಾರೆ. ಯಾರೇ ಆಗಲಿ ನಿತ್ಯ ಸೂಕ್ತ ಪೌಷ್ಠಿಕ ಆಹಾರ ಸೇವಿಸುವುದು ಕಡ್ಡಾಯವಾಗಿದೆ. ಆದರೆ ಇದರ ಜತೆಗೆ ಕೆಳಗೆ ನೀಡಲಾಗಿರುವ ಸಲಹೆಗಳನ್ನು ಪಾಲಿಸಿದರೆ ಕಣ್ಣೀನ ಆರೋಗ್ಯ ಇನ್ನೂ ಉತ್ತಮವಾಗುತ್ತದೆ. ಇದರ ಜತೆಗೆ ಕಣ್ಣಿನ ಸಮಸ್ಯೆಗಳೂ ನಿವಾರಣೆಯಾಗುತ್ತವೆ. ದೃಷ್ಟಿ ಉತ್ತಮಗೊಳ್ಳುತ್ತದೆ. ಹಾಗಿದ್ದರೆ ಆ ಸಲಹೆಗಳು ಏನು ಎಂದು ನೋಡೋಣವೇ..!

ಬೇಕಾದ ಪದಾರ್ಥಗಳು..
1. ಬಾದಾಮಿ
2. ಸೋಂಪು
3. ಕಲ್ಲು ಸಕ್ಕರೆ

ತಯಾರಿಸುವ ವಿಧಾನ:
ಈ ಮೂರನ್ನು ಬೇರೆಬೇರೆಯಾಗಿ ಸಮಾನ ಭಾಗಗಳಲ್ಲಿ ತೆಗೆದುಕೊಳ್ಳಬೇಕು. ಸೋಂಪು, ಬಾದಾಮಿಯನ್ನು ಬೇರೆ ಬೇರೆಯಾಗಿ ಮೀಡಿಯಂ ಆಗಿ ಹುರಿದುಕೊಳ್ಳಬೇಕು. ಮೂರನ್ನೂ ಬೆರೆಸಿ ಪುಡಿ ಮಾಡಿಕೊಂಡು ಒಂದು ಗಾಜಿನ ಶೀಶೆಯಲ್ಲಿ ಹಾಕಿಡಬೇಕು. ಈ ರೀತಿ ತಯಾರಿಸಿದ ಪುಡಿಯನ್ನು ಹಿರಿಯರಾದರೆ ಎರಡು ಸ್ಫೂನ್ ಪುಡಿ, ಮಕ್ಕಳಾದರೆ ಒಂದು ಟೀ ಸ್ಫೂನ್ ಹುಡಿಯನ್ನು ಒಂದು ಗ್ಲಾಸ್ ಹಾಲಿನಲ್ಲಿ ಬೆರೆಸಿಕೊಂಡು ಕುಡಿಯಬೇಕು. ಈ ರೀತಿ ನಿತ್ಯ ಎರಡು ಸಲ ತೆಗೆದುಕೊಳ್ಳಬೇಕು. ಇದನ್ನು ರೆಗ್ಯುಲರ್ ಆಗಿ ತೆಗೆದುಕೊಂಡರೆ ಮೂರು ತಿಂಗಳಲ್ಲಿ ಕಣ್ಣಿನ ದೃಷ್ಟಿ ಉತ್ತಮಗೊಳ್ಳುತ್ತದೆ. ಇದೇ ರೀತಿ ಆರು ತಿಂಗಳ ಕಾಲ ಈ ಪುಡಿಯನ್ನು ಬಳಸಿದರೆ ಕಣ್ಣಿನ ದೃಷ್ಟಿ ಚೆನ್ನಾಗಿರುತ್ತದೆ. ಅಷ್ಟೇ ಅಲ್ಲ ಕಣ್ಣಿನ ಸಮಸ್ಯೆಗಳು ಬರಲ್ಲ. ಕನ್ನಡಕ ಬಳಸಬೇಕಾದ ಅಗತ್ಯವೂ ಬರಲ್ಲ.

ಮೇಲೆ ತಿಳಿಸಿದ ಪುಡಿಯನ್ನು ಕುಡಿಯುವುದರಿಂದ ಕೇವಲ ಕಣ್ಣಿನ ಸಮಸ್ಯೆ ಮಾತ್ರವಲ್ಲ. ಹಲವು ಇತರೆ ಅನಾರೋಗ್ಯ ಸಮಸ್ಯೆಗಳೂ ಸಹ ಗುಣವಾಗುತ್ತವೆ. ಇದರ ಜತೆಗೆ ಮೂಳೆಗಳು, ಸ್ನಾಯುಗಳು ಬಲಗೊಳ್ಳುತ್ತವೆ. ದೇಹದಲ್ಲಿನ ಬಿಸಿ ಕಡಿಮೆಯಾಗುತ್ತದೆ. ಈ ಪುಡಿಯ ಜತೆಗೆ ಹಸಿರು ತರಕಾರಿ, ಸೊಪ್ಪು, ನಟ್ಸ್, ಕ್ಯಾರೆಟ್, ಕ್ಯಾಬೇಜ್, ಬೀಟ್ ರೂಟ್, ನಿಂಬೆಹಣ್ಣು, ತೃಣಧಾನ್ಯಗಳು, ಬ್ರೊಕೋಲಿ, ಮೀನು, ಟಮೋಟೋದಂತಹ ಆಹಾರ ನಿತ್ಯ ತೆಗೆದುಕೊಂಡರೆ ಕಣ್ಣಿನ ದೃಷ್ಟಿ ಉತ್ತಮಗೊಳ್ಳುತ್ತದೆ.


Click Here To Download Kannada AP2TG App From PlayStore!