ವಾಟರ್ ಕ್ಯಾನ್‌ನಿಂದ ಟಾಯ್ಲೆಟ್ ತಯಾರಿಸಿದ 8ನೇ ಕ್ಲಾಸ್ ವಿದ್ಯಾರ್ಥಿ..!

ನಮ್ಮ ದೇಶದ ಸರಕಾರಿ ಪಾಠಶಾಲೆಗಳಲ್ಲಿನ ಸೌಲಭ್ಯಗಳು ಹೇಗಿವೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಶಿಕ್ಷಕರು ಇರೋದೆ ಇಲ್ಲ. ಇದ್ದರೂ ಶಾಲೆಗೆ ಬರಲ್ಲ. ಒಂದು ವೇಳೆ ಬಂದರೂ ಪಾಠ ಮಾಡುವುದರಲ್ಲಿ ನಿರ್ಲಕ್ಷ್ಯ ಧೋರಣೆ. ಅದಕ್ಕಿಂತ ಹೆಚ್ಚಾಗಿ ವಿದ್ಯಾರ್ಥಿಗಳಿಂದ ಕೆಲಸ ಮಾಡಿಸಿಕೊಳ್ಳುತ್ತಾರೆ. ಶಿಥಿಲಾವಸ್ಥೆಯಲ್ಲಿರುವ ತರಗತಿ ಕೊಠಡಿಗಳು. ಯಾವಾಗ ಮೈಮೇಲೆ ಬೀಳುತ್ತವೋ ಹೇಳಲಿಕ್ಕಾಗಲ್ಲ. ಇನ್ನು ಕುಡಿಯುವ ನೀರು ಮನೆಯಿಂದ ತಂದುಕೊಳ್ಳಬೇಕು. ಶೌಚಾಲಯದ ಬಗ್ಗೆ ಹೇಳದಿರುವುದೇ ಒಳ್ಳೆಯದು. ಒಂದು, ಎರಡು ಏನೇ ಬಂದರೂ ಮಕ್ಕಳು ಶಾಲೆಯ ಹಿಂದಕ್ಕೆ ಓಡಬೇಕು. ಇದನ್ನೆಲ್ಲಾ ನೋಡಿದ ಒಬ್ಬ ವಿದ್ಯಾರ್ಥಿ ತಾನು ಓದಿಕೊಳ್ಳುತ್ತಿರುವ ಸರಕಾರಿ ಪಾಠಶಾಲೆಯಲ್ಲಿ ಒಂದು ಸಣ್ಣ ಐಡಿಯಾದೊಂದಿಗೆ ಮಕ್ಕಳಿಗೆ ಶೌಚಾಲಯ ವ್ಯವಸ್ಥೆ ಮಾಡಿದ. ಶಾಲೆ ಮುಖ್ಯಸ್ಥರಿಗೆ ಅಂದರೆ ಸರಕಾರಕ್ಕೆ ಆದ ಖರ್ಚು ಎಷ್ಟು ಗೊತ್ತಾ..? ರೂ.1 ಸಾವಿರ ಮಾತ್ರ. ಹೌದು, ಇದು ಅಕ್ಶರಶಃ ನಿಜ.

student made toilet

ಆ ಹುಡುಗನ ಹೆಸರು ಸುಬಿಕ್ ಪಾಂಡ್ಯನ್. ತಮಿಳುನಾಡಿನ ಟ್ರಿಕಿಯಲ್ಲಿ ವಾಸ. ಸರಕಾರಿ ಶಾಲೆಯಲ್ಲಿ 8ನೇ ಕ್ಲಾಸ್ ಓದುತ್ತಿದ್ದಾನೆ. ಆದರೂ ಪ್ರತಿಭಾವಂತ ವಿದ್ಯಾರ್ಥಿ. ಆದರೆ ತಾನು ಓದಿಕೊಳ್ಳುತ್ತಿರುವ ಶಾಲೆಯಲ್ಲಿ ಶೌಚಾಲಯ ವ್ಯವಸ್ಥೆ ಇಲ್ಲ. ಮಕ್ಕಳು ಹೊರಗೆ ಓಡಿಹೋಗುತ್ತಿದ್ದನ್ನು ಪಾಂಡ್ಯನ್ ಗಮನಿಸುತ್ತಿದ್ದ. ಹೀಗಿರಬೆಕಾದರೆ ಸ್ಥಳೀಯ ಅಂಗಡಿಯೊಂದರಲ್ಲಿ ವಾಟರ್ ಕ್ಯಾನ್‌ಗಳು ಕಾಣಿಸಿದವು. ಅವು 20 ಲೀಟರ್ ಸಾಮರ್ಥ್ಯದವು. ಪಾಂಡ್ಯನ್‌ಗೆ ಹೊಸ ಐಡಿಯಾ ಹೊಳೆಯಿತು. ಅದನ್ನು ಜಾರಿಗೆ ತಂದೇಬಿಟ್ಟ. ತನ್ನ ಆಲೋಚನೆಯನ್ನು ಆ ಪಾಠಶಾಲೆಯ ಉಪಾಧ್ಯಯರಿಗೆ ತಿಳಿಸಿದ, ಅವರು ಕೂಡಲೆ ಅದನ್ನು ಆಚರಣೆಗೆ ತಂದರು.

ಆ ಪಾಠಶಾಲೆ ಉಪಾಧ್ಯಾಯರು ಪಾಂಡ್ಯನ್‌ಗೆ ಬೇಕಾಗಿರುವಂತಹ ವಸ್ತುಗಳನ್ನು ಕಲ್ಪಿಸಿದರು. ಅವುಗಳಲ್ಲಿ 20 ಲೀಟರ್‌ಗಳ ವಾಟರ್ ಕ್ಯಾನ್‌ಗಳು, ಕೆಲವು ಪಿವಿಸಿ ಪೈಪ್‌ಗಳು, ಪ್ಲಾಸ್ಟಿಕ್ ನಂತಹ ಸಾಮಗ್ರಿ. ಅವುಗಳನ್ನೆಲ್ಲಾ ಪಾಂಡ್ಯನ್ ಏನ್ಮಾಡಿದಾ ಗೊತ್ತಾ..? ವಾಟರ್ ಕ್ಯಾನ್‌ಗಳನ್ನು ತಲೆಕೆಳಗಾಗಿಟ್ಟು ಅವುಗಳ ಮಧ್ಯದಲ್ಲಿ ಕಟ್ ಮಾಡಿ ಮುಚ್ಚಳಕ್ಕೆ ಪಿವಿಸಿ ಪೈಪ್‌ಗಳನ್ನು ಅಳವಡಿಸಿ, ಆ ಬಳಿಕ ಆ ಕ್ಯಾನ್‌ಗಳನ್ನೆಲ್ಲಾ ಒಂದು ಕೊಠಡಿಯಲ್ಲಿ ಜೋಡಿಸಿದ. ಇದರಿಂದ ಆ ಕೊಠಡಿ ಶೌಚಾಲಯವಾಗಿ ಬದಲಾಯಿತು. ಅಷ್ಟೇ, ಪಾಂಡ್ಯನ್ ಐಡಿಯಾದಿಂದ ಈಗ ಆ ಶಾಲಾ ಮಕ್ಕಳು ಟಾಯ್ಲೆಟ್‍ಗಾಗಿ ಹೊರಗಡೆ ಹೋಗುತ್ತಿಲ್ಲ. ಸುಸಜ್ಜಿತ ಶೌಚಾಲಯವನ್ನೇ ಬಳಸುತ್ತಿದ್ದಾರೆ. ಈ ಶೌಚಾಲಯ ನಿರ್ಮಿಸಲು ಆದ ಖರ್ಚು ಕೇವಲ ರೂ.1 ಸಾವಿರ ಮಾತ್ರ. ತನ್ನ ಶಾಲಾ ಸಮೀಪದ 4 ಶಾಲೆಗಳಲ್ಲೂ ಸಹ ಇದೇ ರೀತಿ ಶೌಚಾಲಯ ನಿರ್ಮಿಸಿದರು. ಪಾಂಡ್ಯನ್‌ಗೆ ಡಿಸೈನ್ ಫಾರ್ ಚೇಂಜ್ ಪ್ರಶಸ್ತಿಯನ್ನೂ ಪ್ರದಾನ ಮಾಡಲಾಯಿತು. ಏನೇ ಇರಲಿ..ಈ ರೀತಿಯ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವುದು ನಮ್ಮೆಲ್ಲರ ಕರ್ತವ್ಯ ಅಲ್ಲವೆ.. ಇದೇ ತರಹ ಸರಕಾರಿ ಶಾಲೆಗಳಲ್ಲಿ ಮೇಲಿನ ವಿಧದಂತೆ ಶೌಚಾಲಯಗಳನ್ನು ನಿರ್ಮಿಸಬಹುದು. ಇದರಿಂದ ಅದೆಷ್ಟೋ ಶಾಲಾ ಮಕ್ಕಳಿಗೆ ಅನುಕೂಲ ಆಗುತ್ತೆ..!


Click Here To Download Kannada AP2TG App From PlayStore!

Share this post

scroll to top