ಪತ್ನಿಯನ್ನು ಕಳೆದುಕೊಂಡ ಪತಿಯ ಆವೇದನೆ… ನನ್ನ ಮಡದಿಯೊಡನೆ ತೆಗೆಸಿಕೊಂಡ ಕೊನೆಯ ‘ಸೆಲ್ಫೀ’ ಎಂದು ಬರೆದಿದ್ದ ಆತನ ಪೋಸ್ಟನ್ನು ನೋಡಿದರೆ ಹೃದಯ ಕರಗುತ್ತದೆ.

ಇದು…ಪತ್ನಿಯನ್ನು ಕಳೆದುಕೊಂಡ ಒಬ್ಬ ಪತಿಯ ನೋವು,14 ದಿನಗಳ ನರಕಯಾತನೆ…ಈ ಘಟನೆಯ ಕುರಿತು ಆತನ ಮಾತುಗಳಲ್ಲೇ ಕೇಳೋಣ.”ಜನವರಿ 7 ನೇ ತಾರೀಕು ಸಂಜೆ ಸುಮಾರು 6 ಗಂಟೆ…ನಾನು ನನ್ನ ಮಡದಿ ಬೈಕಿನಲ್ಲಿ ಹೋಗುತ್ತಿದ್ದೇವೆ. ತಮಿಳುಳುನಾಡಿನ ಅಣ್ಣಾನಗರದ ಬಳಿ ನನ್ನ ಮಡದಿ ಬೈಕಿನಿಂದ ಕೆಳಗೆ ಬಿದ್ದು ಸ್ಮೃತಿ ತಪ್ಪಿದಳು. ಒಡನೆಯೇ ಹತ್ತಿರದ ಆಸ್ಪತ್ರೆಗೆ ತೆಗೆದುಕೊಂಡು ಹೋದೆ. ಸೀಟಿ ಸ್ಕ್ಯಾನ್ ಮಾಡಿದ ಡಾಕ್ಟರ್ ಗಳು ಮೆದುಳಿನ ಎಡಭಾಗ ಗಾಯಗೊಂಡಿದೆ,ಬದುಕುವುದು ಕಷ್ಟ ಎಂದರು. ಅಲ್ಲಿಂದ ಕಾರಿನಲ್ಲಿ ಹೋಗಿ ಒಂದು ಕಾರ್ಪೊರೇಟ್ ಆಸ್ಪತ್ರೆಗೆ ಸೇರಿಸಿದೆ.

ಸರ್ಜರಿ ಮಾಡಿದನಂತರ… ಕ್ರಮೇಣ ಅವಳ ಮೆದುಳು ಸ್ಪಂಧಿಸುವುದನ್ನು ನಿಲ್ಲಿಸಿತು. ಆ ವೇಳೆಗಾಗಲೇ ನನ್ನ ಮಡದಿ 6 ತಿಂಗಳ ಗರ್ಭಿಣಿ…. ತಾಯಿ ಕೋಮಾದಲ್ಲಿದ್ದರೆ, ಮಗು ಹೊಟ್ಟೆಯಲ್ಲಿದೆ…ಇಬ್ಬರೂ ಬದುಕಿಗಾಗಿ ಹೋರಾಡುತ್ತಿದ್ದಾರೆ. ಆದರೆ,5 ದಿನಗಳ ನಂತರ ನನ್ನ ಮಡದಿಯ ಹೊಟ್ಟೆಯಲ್ಲಿದ್ದ ನನ್ನ ಮಗ ಈ ಲೋಕವನ್ನು ನೋಡದೆಯೇ ಇಹಲೋಹ ತ್ಯಜಿಸಿದ.

ನಿಮ್ಮ ಮಡದಿಯ ಮೆದುಳು ನಿಷ್ಕ್ರಿಯವಾಗಿದೆ ಎಂದು ವೈದ್ಯರು ದೃಢಪಡಿಸಿದರು…ಅಂಗಾಂಗ ದಾನದ ಕುರಿತು ನಾವಿಬ್ಬರೂ ಈ ಹಿಂದೆಯೆ ಮಾತನಾಡಿಕೊಂಡಿದ್ದೆವು. ಅಳುತ್ತಲೇ ಅಂಗಾಗ ದಾನ ಪತ್ರಕ್ಕೆ ಸಹಿಮಾಡಿದೆ….ಜನವರಿ 13 ರಂದು ನನ್ನ ಮಡದಿ ನನ್ನನ್ನು ಅಗಲಿದಳು. ಇದು ಜನವರಿ 1 ರಂದು ನನ್ನ ಮಡದಿಯೊಡನೆ ತೆಗೆಸಿಕೊಂಡ ‘ಸೆಲ್ಫೀ’. ಇಷ್ಟು ಬಾಧೆಯಲ್ಲೂ ಈ ವಿಷಯವನ್ನು ನಾನು ನಿಮಗೆ ಯಾಕೆ ಹೇಳುತ್ತಿದ್ದೀನೆಂದರೆ… ಬೈಕ್ ಓಡಿಸುವಾಗ ನಾನು ಹೆಲ್ಮೆಟ್ ಧರಿಸಿದ್ದೆ,ಆದರೆ,ನನ್ನ ಹೆಂಡತಿ ಧರಿಸಿರಲಿಲ್ಲ… ಒಂದು ವೇಳೆ ನನ್ನ ಮಡದಿಗೂ ಹೆಲ್ಮೆಟ್ ಕೊಡಿಸಿದ್ದರೆ…ನನ್ನ ಪ್ರಾಣಕ್ಕೆ ಪ್ರಾಣವಾಗಿದ್ದ ನನ್ನ ಉಮ(ನನ್ನ ಮಡದಿ) ಳನ್ನು ಕಳೆದುಕೊಳ್ಳುತ್ತಿರಲಿಲ್ಲ. ಅದಕ್ಕೇ ಸುರಕ್ಷತೆ ಮುಖ್ಯ.ಒಂದು ಸಣ್ಣ ಅಜಾಗರೂಕತೆ ನನ್ನ ಜೀವನವನ್ನೇ ನನ್ನಿಂದ ದೂರಮಾಡಿದೆ…..ಉಮಾ. ..I miss you.


Click Here To Download Kannada AP2TG App From PlayStore!

Share this post

scroll to top