ಗಯ್ಯಾಳಿ ಸೊಸೆ ಕಳುಹಿಸಿದ ಈ ವಾಟ್ಸಾಪ್ ಮೆಸೇಜ್‌ನಿಂದಾಗಿ ಪಾಪ ಅತ್ತೆ ಆಸ್ಪತ್ರೆ ಪಾಲಾದಳು!! ವಾಟ್ಸಾಪ್‌ನಲ್ಲಿ ವೈರಲ್ ಮೆಸೇಜ್..!!

ತೀರ್ಥರೂಪು ಸಮಾನರಾದ ಪ್ರೀತಿಯ ಅತ್ತೆಯವರ ಪಾದಕಮಲಗಳಿಗೆ ಆಪಾದಮಸ್ತಕ ನಮಸ್ಕಾರಗಳು. ನಾವು ಕ್ಷೇಮವಾಗಿದ್ದೇನೆ, ನೀವೂ ಕ್ಷೇಮ ಎಂದು ತಿಳಿಯುತ್ತಾ ಬರೆಯುತ್ತಿರುವ ಪತ್ರ.ನಾವು ಸಂಸಾರ ಮಾಡಲು ಬರುತ್ತಿದ್ದಾಗ ನನಗೆ ಹೇಳಿದ ಎಲ್ಲವನ್ನೂ ಚಾಚೂತಪ್ಪದೆ ಪಾಲಿಸುತ್ತಿದ್ದೇನೆ.
ಹೊಸ ಸಂಸಾರ ಹಾಲು ಉಕ್ಕಿದಂತೆ ಉಕ್ಕಿ ಹರಿಯಬೇಕು ಎಂದಿದ್ದೀರಿ. ಹಾಗಾಗಿಯೇ ದಿನಕ್ಕೆ ಎರಡು ಲೀಟರ್ ಹಾಲು ಉಕ್ಕಿಸುತ್ತಿದ್ದೇನೆ. ಉಕ್ಕಿ ಹರಿದ ಮೇಲೆ ಉಳಿದ ಹಾಲಿನಲ್ಲಿ ಟೀ ಮಾಡಿಕೊಂಡು ಕುಡಿಯುತ್ತಿದ್ದೇವೆ, ಆದರೆ ಎರಡು ತಿಂಗಳಿಗೇ ಸ್ಟವ್ ಕಮರಿ ಕಂಪು ವಾಸನೆ ಹೊಡೆಯುತ್ತಿರುವ ಕಾರಣ ಹೊಸ ಸ್ಟವ್ ಖರೀದಿಸಿದ್ದೇವೆ.

ಸ್ವಲ್ಪ ಅದು ಇದೂ ಕೆಲಸ ಕಲಿತುಕೋ ಎಂಬ ನಿಮ್ಮ ಮಾತಿನ ಮೇಲಿನ ಗೌರವದಿಂದ ನಿತ್ಯ 5 ಗಂಟೆಗಳು, ಎ ಆರ್ ರೆಹಮಾನ್ ಹಾಡುಗಳನ್ನು ಕೇಳುತ್ತಾ ಪ್ರಾಕ್ಟೀಸ್ ಮಾಡುತ್ತಿದ್ದೇನೆ. ಹಾಡು ಕಲಿಯುವುದು ಪೂರ್ಣವಾದ ಕೂಡಲೆ ಕೆಲಸ ಮಾಡುವುದನ್ನು ಪ್ರಾರಂಭಿಸುತ್ತೇನೆ.

ನಿಮ್ಮ ಮಗನ ಆರೋಗ್ಯದ ಬಗ್ಗೆ ಎಚ್ಚರ ವಹಿಸಲು ಹೇಳಿದಿರಿ ಅಲ್ಲವೇ, ಹಾಗಾಗಿ ಅವರ ಆರೋಗ್ಯದ ದೃಷ್ಟಿಯಿಂದ ನಿತ್ಯ ಒಂದು ಸಲ ಮಾತ್ರ ಊಟ ಇಡುತ್ತಿದ್ದೇನೆ.

ಗಂಡನಿಗೆ ಕಷ್ಟ ಕೊಡಬಾರದು ಎಂಬ ನಿಮ್ಮ ಮಾತು ನೆನಪಾಗಿ ಬೆಳಗ್ಗೆ ಮಾತ್ರ ಅಡುಗೆ ಮಾಡಿಸುತ್ತಿದ್ದೇನೆ.
ಅಕ್ಕಪಕ್ಕದವರ ಬಳಿ ಎಚ್ಚರ ಎಂದು ಹೇಳಿದಿರಿ ಅಲ್ಲವೇ ಅತ್ತೆ, ಹಾಗಾಗಿ ನಿನ್ನೆ ಎದುರು ಮನೆಯಾಕೆ ಮಾತನಾಡಲು ಬಂದಾಗ ಮುಖಕ್ಕೆ ಹೊಡೆದಂತೆ ಬಾಗಿಲು ಹಾಕಿದೆ. ಆಕೆ ಮುಖ ನೀವು ಮಾಡಿದ ಚಪಾತಿಯಂತೆ ಸುಟ್ಟು ಕರಕಲಾಗಿದೆ.

ಉಳಿತಾಯ ಮಾಡು ಎಂಬ ನಿಮ್ಮ ಮಾತಿನಿಂದ ವಾರಕ್ಕೆ ಒಂದು ಡ್ರೆಸ್ ಮಾತ್ರ ಹಾಕಿಕೊಳ್ಳುತ್ತಿದ್ದೇನೆ. ಅದೇ ರೀತಿ ಎರಡು ಸಿನಿಮಾಗಳನ್ನು ಮಾತ್ರ ನೋಡುತ್ತಿದ್ದೇವೆ. ಈ ತಿಂಗಳಲ್ಲಿ ಉಳಿತಾಯ ಮಾಡಿದ ಹಣದಿಂದ ನಿಮ್ಮ ಮಗನಿಗೆ ಹೊಸ ಕರ್ಚೀಫ್ ಕೊಡಿಸಿದ್ದೇನೆ.
ಪತಿಯೇ ಪ್ರತ್ಯಕ್ಷ ದೇವರು ಎಂದು ಹೇಳಿದಿರಲ್ಲವೇ ಹಾಗಾಗಿ ನಿನ್ನೆ ವೈಕುಂಠ ಏಕಾದಶಿ ಎಂದು ಪೂಜೆ ಮಾಡಿ ನಿಮ್ಮ ಮಗನ ಕಾಲುಗಳ ಮೇಲೆ ತೆಂಗಿನಕಾಯಿ ಹೊಡೆದೆ. ಪಾಪ ಕಾಲಿನ ಬೆರಳು ಜಜ್ಜಿಹೋಗಿ ರಕ್ತ ಬಂತು, ಕಟ್ಟನ್ನೂ ಕಟ್ಟಿದ್ದೇನೆ. ಶೀಘ್ರದಲ್ಲೇ ಗುಣಮುಖನಾಗುತ್ತಾನೆ ಬಿಡಿ..

ನೀವು ಇನ್ನೂ ನನಗೆ ಏನಾದರೂ ಸಲಹೆಗಳನ್ನು ನೀಡಬೇಕೆಂದರೆ ವಿವರವಾಗಿ ಪತ್ರ ಬರೆಯಿರಿ…
ಇಂತಿ
ನಿಮ್ಮ ಪ್ರೀತಿಯ
ಕುಮಾರನ ಪಾದ ದಾಸಿ
ನಿಮ್ಮ ಸೊಸೆ

ಈ ಮೆಸೇಜ್ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿ ಬದಲಾಗಿದೆ.


Click Here To Download Kannada AP2TG App From PlayStore!