ಆಕೆ ನೋಡಿದರೆ ಸಾಮಾನ್ಯ ಯುವತಿಯಂತೆ ಕಾಣುತ್ತಾಳೆ. ಆದರೆ ಭಾರಿ ಟ್ರಕ್‌ಗಳನ್ನು ಪರ್ವತಗಳ ಮೇಲೆ ಓಡಿಸುತ್ತಾರೆ..!

ಅದು ಒಂದು ಎತ್ತರವಾದ ಬೆಟ್ಟದ ಮೇಲಿನ ಹೆದ್ದಾರಿ. ಅಂಕುಡೊಂಕಾಗಿರುತ್ತದಷ್ಟೇ ಅಲ್ಲ, ತಿರುವುಗಳು ತುಂಬಾ ಇರುತ್ತವೆ. ಇದರಿಂದ ಆ ರಸ್ತೆ ಮೇಲೆ ಸಾಮಾನ್ಯವಾಗಿ ಕಾರಿನಂತಹ ವಾಹಗಳಲ್ಲಿ ಪ್ರಯಾಣಿಸಬೇಕಾದರೂ, ಯಾವುದೇ ರೀತಿಯ ವಾಹನ ಓಡಿಸಬೇಕೆಂದರೂ ಗುಂಡಿಗೆ ಗಟ್ಟಿ ಇರಬೇಕು. ಯಾಕೆಂದರೆ ತುಂಬಾ ಎಚ್ಚರಿಕೆಯಿಂದ ವಾಹನ ನಡೆಸಬೇಕು. ಸ್ವಲ್ಪ ಯಾಮಾರಿದರೂ ಸಾವಿರಾರು ಅಡಿಗಳ ಕಂದಕಕ್ಕೆ ಉರುಳಿ ಬೀಳುವ ಸಾಧ್ಯತೆಗಳಿರುತ್ತವೆ. ಹಾಗಾಗಿ ಅಲ್ಲಿ ವಾಹನ ಸವಾರರು ದಾರಿಯುದ್ದಕ್ಕೂ ಸಾಕಷ್ಟು ಸಾಹಸ ಮಾಡಬೇಕಾಗಿರುತ್ತದೆ. ಅಂತಹ ರಸ್ತೆ ಮೇಲೆ ಭಾರಿ ವಾಹನಗಳನ್ನು ನಡೆಸುವುದೆಂದರೆ…ಅಂತಹವರಿಗೆ ಎರಡು ಗುಂಡಿಗೆ ಇರಬೇಕು. ಆದರೂ ಯಾವುದೇ ಹಿಂಜರಿಕೆ ಇಲ್ಲದೆ ಆ ಮಹಿಳೆ ಭಾರಿ ಟ್ರಕ್ ಓಡಿಸುತ್ತಾರೆ. ಅಲ್ಲಿನ ಪುರುಷ ಡ್ರೈವರ್‌ಗಳೇ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದ್ದಾರೆ.

ಆಕೆ ಹೆಸರು ಪೂನಂ ನೆಗಿ. ವಯಸ್ಸು 23 ವರ್ಷಗಳು ಮಾತ್ರ. ಆದರೆ ಟ್ರಕ್ ಡ್ರೈವಿಂಗ್‌ನಲ್ಲಿ ಮಾತ್ರ ಬಹಳ ಪರ್ಫೆಕ್ಟ್. ಎಷ್ಟೋ ವರ್ಷಗಳಿಂದ ಟ್ರಕ್ ನಡೆಸುತ್ತಿರುವ ಚಾಲಕರಿಗೆ ಸವಾಲಾಗಿದ್ದಾರೆ. ಯಾಕೆಂದರೆ ಆಕೆ ಇರುವ ಹಿಮಾಚಲ ಪ್ರದೇಶದಲ್ಲಿ ಖಾರ್‌ದುಂಗ್ ಲಾ ಪಸ್ ಎಂಬ ಪರ್ವತ ಶ್ರೇಣಿಗಳ ಹೆದ್ದಾರಿ 17,582 ಅಡಿ ಎತ್ತರದಲ್ಲಿರುತ್ತದೆ. ಆ ಹೆದ್ದಾರಿ ಹೇಗಿರುತ್ತದೆ ಎಂದು ಮೇಲೆ ತಿಳಿಸಿದೆವಲ್ಲವೇ. ಬಹಳ ಭಯಂಕರವಾಗಿರುತ್ತದೆ. ಟ್ರಕ್ ಡ್ರೈವರ್‌ಗಳಾದರೆ ಆ ಹೆದ್ದಾರಿ ಮೇಲೆ ಹೋಗಲು ಸಾಮಾನ್ಯವಾಗಿ ಸಾಹಸ ಮಾಡಲ್ಲ. ಆದರೆ ಪೂನಂ ನೆಗಿ ಮಾತ್ರ ಆ ರೀತಿ ಅಲ್ಲ. ಆ ಹೆದ್ದಾರಿಯಲ್ಲಿ ತುಂಬಾ ಸುಲಭವಾಗಿ ಹೋಗುತ್ತಾರೆ. ಅಷ್ಟು ಡ್ರೈವಿಂಗ್ ಸ್ಕಿಲ್ ಆಕೆಗಿದೆ. ಅದೂ ಸಹ ಭಾರಿ ಟ್ರಕ್‌ಗಳನ್ನು ಆಕೆ ಓಡಿಸುತ್ತಾರೆ. ಇದರಿಂದ ಆಕೆ ಧೈರ್ಯಕ್ಕೆ, ಡ್ರೈವಿಂಗ್ ಸ್ಕಿಲ್‌ಗೆ ಪುರುಷರು ಮೂಕವಿಸ್ಮಿತರಾಗುತ್ತಾರೆ.ಏನೇ ಆಗಲಿ ಪೂನಂ ಧೈರ್ಯಕ್ಕೆ, ಟ್ರಕ್ ಡ್ರೈವಿಂಗ್ ಸ್ಕಿಲ್‌ಗೆ ಹ್ಯಾಟ್ಸಾಪ್ ಹೇಳಲೇಬೇಕು.

ಪೂನಂ ನೆಗಿ ಈಗ ಭಾರಿ ಟ್ರಕ್‌ಗಳನ್ನು ಪರ್ವತಗಳ ಮೇಲೆ ಓಡಿಸುತ್ತಾ ಹೆಸರು ತಂದುಕೊಂಡಿದ್ದರೂ ಒಂದು ಕಾಲದಲ್ಲಿ ಆಕೆಯನ್ನು ನೋಡಿದವರು ನಗುತ್ತಿದ್ದರು. ಯಾಕೆಂದರೆ ಸಾಮಾನ್ಯವಾಗಿ ಟ್ರಕ್ ಡ್ರೈವಿಂಗ್ ಎಂದರೆ ನಮ್ಮ ದೇಶದಲ್ಲಿ ಹೆಚ್ಚಾಗಿ ಪುರುಷರು ಮಾಡುವ ಕೆಲಸ. ಮಹಿಳೆಯರು ಅಪರೂಪಕ್ಕೆ ಮಾಡುತ್ತಾರೆ. ಅಂತಹ ಮಹಿಳೆಯೊಬ್ಬರು ಹೆವಿ ಮೋಟಾರ್ ವೆಹಿಕಲ್ ಡ್ರೈವಿಂಗ್ ಲೈಸೆನ್ಸ್ ಪಡೆದು, ಭಾರಿ ಟ್ರಕ್ ಡ್ರೈವಿಂಗ್ ಕೆರಿಯರನ್ನು ಆಯ್ಕೆ ಮಾಡಿಕೊಂಡಿದ್ದನ್ನು ಕೆಲವರು ಲೇವಡಿ ಮಾಡಿದ್ದರು. ಕೊನೆಗೆ ಆಕೆಯ ಡ್ರೈವಿಂಗ್ ಸ್ಕಿಲ್ ನೋಡಿ ಈಗ ಅವರೇ ಹೊಗಳುವಂತಾಗಿದೆ. ಇನ್ನು ಪೂನಂ ಅಪಘಾತಗಳು ಹೆಚ್ಚಾಗಿ ಅಗುವ ಸಿಮ್ಲಾ-ಕಿನ್ನರ್ ಹೈವೇ ಮೇಲೆ ಸಹ ಬಹಳ ಸುಲಭವಾಗಿ ಟ್ರಕ್ ಓಡಿಸುತ್ತಾರೆ. ಅಲ್ಲಿ ಪಕ್ಕದಲ್ಲೇ ಸಟ್ಲೇಜ್ ನದಿ ಪ್ರವಾಹ ಸಹ ಹೆಚ್ಚಾಗಿಯೇ ಇರುತ್ತದೆ. ಆದರೂ ಪೂನಂ ಟ್ರಕ್ ನುಗ್ಗಿಹೋಗುತ್ತದೆ. ಇದರಿಂದ ಆಕೆ ಈಗ ಅಲ್ಲಿ ಒಬ್ಬ ಸೆಲೆಬ್ರಿಟಿಯಾಗಿದ್ದಾರೆ. ಏನೇ ಆಗಲಿ ಪೂನಂ ಧೈರ್ಯಕ್ಕೆ, ಟ್ರಕ್ ಡ್ರೈವಿಂಗ್ ಸ್ಕಿಲ್‌ಗೆ ಹ್ಯಾಟ್ಸಾಪ್ ಹೇಳಲೇಬೇಕು.


Click Here To Download Kannada AP2TG App From PlayStore!