ಇನ್ನು ಮುಂದೆ ಪ್ರತಿದಿನ ಪೆಟ್ರೋಲ್ ಬೆಲೆ ಬದಲಾಗುತ್ತದೆ, ಆ ದಿನದ ರೇಟ್ ತಿಳಿದುಕೊಳ್ಳುವುದು ಹೇಗೆ?

ಈವತ್ತಿನಿಂದ ಅಂದರೆ ಜೂ.6ರಿಂದ ಪೆಟ್ರೋಲ್, ಡೀಸೆಲ್ ಬೆಲೆಗಳು ಪ್ರತಿದಿನ ಬದಲಾಗುತ್ತಿರುತ್ತದೆ. ಬೆಳಗ್ಗೆ 6ರಿಂದ ಮರುದಿನ ಬೆಳಗ್ಗೆ 6ರವರೆಗೆ ಆ ದಿನದ ಬೆಲೆಗಳು ಜಾರಿಯಲ್ಲಿರುತ್ತವೆ. ಈ ಹಿಂದೆ ಬೇರೆ ವಿಧಾನ ಇತ್ತು. ಪ್ರತಿ ತಿಂಗಳು 1ನೇ ತಾರೀಖು ಮತ್ತು 16ರಂದು ಅಂತಾರಾಷ್ಟ್ರೀಯ ಮಾರುಕಟ್ಟೆ ಬೆಲೆಗಳಿಗೆ ಅನುಗುಣವಾಗಿ ಇಂಧನ ಬೆಲೆ ನಿರ್ಧರಿಸಲಾಗುತ್ತಿತ್ತು. ಈಗ ನಿತ್ಯ ಇಂಧನ ದರ ಬದಲಾಗುತ್ತಿರುತ್ತದೆ. ಪೆಟ್ರೋಲ್ ಬಂಕ್‌ಗೆ ಹೋಗುವ ಮುನ್ನ ಇಂದಿನ ಬೆಲೆಯನ್ನು ತಿಳಿದುಕೊಳ್ಳುವುದು ಹೇಗೆ? ಅದಕ್ಕಾಗಿ ಕೆಲವು ಪದ್ಧತಿಗಳಿವೆ.

1. ಮೊಬೈಲ್ ಆ್ಯಪ್‌ ಮೂಲಕ
ಆಂಡ್ರಾಯ್ಡ್ ಮೊಬೈಲ್ ಬಳಕೆದಾರರಿಗೆ ಗೂಗಲ್ ಪ್ಲೇಸ್ಟೋರ್‌ನಲ್ಲಿ fueal@ioc-indialiol ಎಂಬ ಆ್ಯಪ್‌ ಇನ್‌ಸ್ಟಾಲ್ ಮಾಡಿಕೊಂಡರೆ ಅದರಲ್ಲಿ ನೀವಿರುವ ಪ್ರದೇಶದ ಐದು ಕಿ.ಮೀ ವ್ಯಾಪ್ತಿಯೊಳಗೆ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್‌ಗಳಲ್ಲಿ ಆ ದಿನದ ಬೆಲೆ ಏನು ಎಂದು ತಿಳಿದುಕೊಳ್ಳಬಹುದು. ಇದೇ ತರಹ ಹೆಚ್‍ಪಿ myhpcl, ಭಾರತ್ ಪೆಟ್ರೋಲಿಯಂ ಕಂಪೆನಿಗಳ smartdrive ಎಂಬ ಆ್ಯಪ್‌ಗಳ ಮೂಲಕ ಆ ದಿನದ ಬೆಲೆ ತಿಳಿದುಕೊಳ್ಳಬಹುದು.

2. ಎಸ್‍ಎಂಎಸ್ ಮೂಲಕ
ಇಂಡಿಯನ್ ಆಯಿಲ್ ಕಂಪೆನಿ ಬಂಕ್‌ಗಳಲ್ಲಿ ಬೆಲೆ ತಿಳಿದುಕೊಳ್ಳಬೇಕೆಂದರೆ 92249 92249 ಎಂಬ ನಂಬರ್‌ಗೆ ರೀಟೈಲ್ ಸೇಲ್ ಪ್ರೈಸ್ – RSP(SPACE)DELERCODE ಮಾದರಿಯಲ್ಲಿ ಮೆಸೇಜ್ ಕಳುಹಿಸಬೇಕು. ಭಾರತ ಪೆಟ್ರೋಲಿಯಂ ಕಂಪೆನಿ ಬೆಲೆಗಾಗಿ 92231 12222, ಹೆಚ್‌ಪಿ ಕಂಪೆನಿ ಆದರೆ 92222 01122 ಮೆಸೇಜ್ ಕಳುಹಿಸಿ ಆ ದಿನದ ಬೆಲೆ ತಿಳಿದುಕೊಳ್ಳಬಹುದು ಆದರೆ ಫಾರ್ಮ್ಯಾಟ್ ಮಾತ್ರ HPPRICEDEALERCODE ಎಂದಿರಬೇಕು. ಡೀಲರ್ ಕೋಡನ್ನು ಆಯಾ ಪೆಟ್ರೋಲ್ ಬಂಕ್‌ ಬಳಿ ಪ್ರದರ್ಶಿಸಿರುತ್ತಾರೆ.

3. ವೆಬ್‌ಸೈಟ್ ಮೂಲಕ
ಇಂಡಿಯನ್ ಆಯಿಲ್ ವೆಬ್‌ಸೈಟ್ www. iocl.comನಲ್ಲಿ ಆರ್‍ಓ ಲೊಕೇಟರ್ ಮೂಲಕ ನೀವು ಯಾವ ಪ್ರದೇಶದಲ್ಲಿನ ಪೆಟ್ರೋಲ್ ಬಂಕ್ ಬೆಲೆ ತಿಳಿದುಕೊಳ್ಳಬೇಕೆಂದಿರುವಿರೋ ಅದನ್ನು ತಿಳಿದುಕೊಳ್ಳಬಹುದು. ದೇಶದಲ್ಲಿನ ಒಟ್ಟಾರೆ ಪೆಟ್ರೋಲ್ ಬಂಕ್‌ಗಳಲ್ಲಿ ಶೇ.20ರವರೆಗೂ ಮಾತ್ರ ಆಟೋಮೇಟೆಡ್ ವಿಧಾನದಲ್ಲಿ ಬದಲಾಗುತ್ತದೆ ಎಂಬುದನ್ನು ಗಮನಿಸತಕ್ಕದ್ದು.