ಥೈರಾಯಿಡ್’ಗೆ ಸೂಕ್ತ ಮದ್ದು ಹಸಿ ಕೊಬ್ಬರಿಯ ಪೀಸ್…


ಹಸಿ ಕೊಬ್ಬರಿ ತಿಂದ್ದರೆ ಕೆಮ್ಮು ಬರುತ್ತದೆ ಎಂದು ಚಟ್ನಿ, ಸಾಂಬಾರ್’ನಲ್ಲಿ ಸೇರಿಸಿಕೊಂಡು ಬಳಸುತ್ತಾರೆ. ಹೆಚ್ಚು ತಿಂದ್ದರೆ ಕೆಮ್ಮು ಬರುತ್ತದೆಯಾದರೂ ನಿಯಮಿತ ಪ್ರಮಾಣದಲ್ಲಿ ಸೇವಿಸಿದರೆ ಅನೇಕ ಲಾಭಗಳಿವೆ. ಅದನ್ನು ದಿನಲೂ ಆಗದಿದ್ದರೂ ವಾರಕ್ಕೆ ಎರಡು ಮೂರು ಸಾರಿ ತಿಂದರೆ ಚರ್ಮದ ಕಾಂತಿ ಹೆಚ್ಚುತ್ತದೆ. ಹಸಿ ಕೊಬ್ಬರಿಯನ್ನು ಎರಡು ದಿನಕ್ಕೊಮ್ಮೆ ತಿನ್ನುವುದು ಅಭ್ಯಾಸ ಮಾಡಿಕೊಳ್ಳಿ. ಇದು ಚರ್ಮ ಸುಕ್ಕಾಗುವುದನ್ನು ತಡೆಗಟ್ಟುತ್ತದೆ.

ದೇಹದಲ್ಲಿ ವ್ಯರ್ಥ ಪದಾರ್ಥಗಳನ್ನು ಹೊರ ಕಳುಹಿಸುತ್ತದೆ. ಮುಪ್ಪುನ್ನು ತಡೆಯುವ ನಿಯಂತ್ರಿಸುತ್ತದೆ. ಇದರಲ್ಲಿ ಯ್ಯಾಂಟಿ ವೈರಸ್, ಯ್ಯಾಂಟಿ ಬ್ಯಾಕ್ಟೀರಿಯಲ್, ಯ್ಯಾಂಟಿ ಫಂಗಲ್ ಲಕ್ಷಣಗಳು ಹೆಚ್ಚು. ಇದನ್ನು ದಿನಕ್ಕೆ ಒಂದು ತುಂಡು ತಿನ್ನುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಮಕ್ಕಳಿಗೆ ಸಹ ಒಳ್ಳೆಯದು.

ಕೊಬ್ಬರಿಯಲ್ಲಿ ಒಳ್ಳೆಯ ಕೊಲೆಸ್ಟರಾಲ್‌ ಇದೆ. ಇದನ್ನು ತಿನ್ನುವುದು ಹೃದಯಕ್ಕೆ ತುಂಬಾ ಒಳ್ಳೆಯದು. ಹಾಗಾಗಿ ಹೃದಯ ಸಂಬಂಧಿ ಕಾಯಿಲೆಗಳಿರುವವರು ದಿನಕ್ಕೊಂದು ತುಂಡು(ಪೀಸ್‌) ತಿನ್ನುವುದು ಅಭ್ಯಾಸ ಮಾಡಿಕೊಳ್ಳಿ. ಮುಖ್ಯವಾಗಿ ಥೈರಾಯ್ಡ್ ಅನ್ನು ನಿಯಂತ್ರಿಸುವ ಒಳ್ಳೆಯ ಔಷಧ ಹಸಿ ಕೊಬ್ಬರಿ. ಇದರಲ್ಲಿ ಕಬ್ಬಿಣ, ಮ್ಯಾಂಗನೀಸ್, ಜಿಂಕ್’ನಂತಹ ಪೋಷಕಾಂಶಗಳಿವೆ. ಬಾಯಿ ಹುಣ್ಣಿಗೆ ಕೊಬ್ಬರಿ ಹಾಲು ಅದ್ಭುತವಾಗಿ ಕೆಲಸ ಮಾಡುತ್ತದೆ. ಇದರಲ್ಲಿ ಬಿ ಕಾಂಪ್ಲೆಕ್ಸ್ ಜೊತೆಗೆ ವಿಟಮಿನ್‌ಗಳು, ಪೋಲೆಟ್ಗಳು, ರೈಬೋ ಫ್ಲೆವಿನ್, ಮಿಯಾಸಿಸ್, ಥಯಾಮಿನ್ ಲಭಿಸುತ್ತವೆ.