ಇಂದು (ಡಿಸೆಂಬರ್ 21) ಅತ್ಯಂತ ಅಪಾಯಕಾರಿ ದಿನ… ಯಾವ ಕೆಲಸ ಆರಂಭಿಸಿದರೂ ಮಟಾಷ್..! ಯಾಕೆ ಗೊತ್ತಾ?

ಹೊರಡುತ್ತಾ ಹೊರಡುತ್ತಾ…2017ನೇ ವರ್ಷ ಅತಿ ಭಯಂಕರವಾದ ದಿನವನ್ನು ಬಿಟ್ಟು ಹೋಗುತ್ತಿದೆಯಾ? ಡಿಸೆಂಬರ್ 21ರಂದು ಯಾವ ಕೆಲಸ ಮಾಡಿದರೂ ಮಟಾಷ್ ಆಗುತ್ತದಾ? ಯಾವ ಹೊಸ ನಿರ್ಧಾರ ತೆಗೆದುಕೊಂಡರೂ ದುರದೃಷ್ಟ ಬೆನ್ನತ್ತುತ್ತದಾ? ಅದರ ಪ್ರಭಾವ 2018ರಲ್ಲೂ ಮುಂದುವರೆಯುತ್ತದಾ? ಹೌದು ಎನ್ನುತ್ತಿದ್ದಾರೆ ಪಾಶ್ಚಿಮಾತ್ಯ ಜ್ಯೋತಿಷಿಗಳು!

ನಿಜವಾಗಿ ಈ ವರ್ಷದಲ್ಲೇ ಅತ್ಯಂತ ಕಡಿಮೆ ಹಗಲು ಡಿಸೆಂಬರ್ 21ರಂದು ದಾಖಲಾಗುತ್ತಿದೆ. ಆದರೆ ಇದರಲ್ಲಿ ದೊಡ್ಡ ವಿಶೇಷವೇನು ಇಲ್ಲ. ಆದರೆ 350 ವರ್ಷಗಳಲ್ಲಿ ಮೊದಲ ಸಲ ಸೂರ್ಯ, ಶನಿ ಒಂದೇ ರಾಶಿಯಲ್ಲಿ ಬರುತ್ತಿರುವುದು ಪ್ರಳಯದ ಸಂಕೇತ ಎಂದು ನೀಲ್ ಸ್ಪೆನ್ಸರ್ ಎಂಬ ಜ್ಯೋತಿಷಿ ಆತಂಕ ವ್ಯಕ್ತಪಡಿಸಿದ್ದಾರೆ. ಕ್ರಿ.ಶ.1664ರ ಬಳಿಕ ಅಂತಹ ಖಗೋಳ ಬದಲಾವಣೆ ಗುರುವಾರ ಸಂಭವಿಸುತ್ತದೆ ಎಂದು ವಿವರಿಸಿದ್ದಾರೆ.

“ವ್ಯಕ್ತಿಗಳ ಜಾತಕದಲ್ಲಿ ಮಕರದಲ್ಲಿ ಪ್ರವೇಶಿಸಿದರೆ ಲಾಭಕರ! ಆದರೆ ಖಗೋಳ ಪರವಾಗಿ ಸ್ಥೂಲ ಪ್ರಮಾಣದಲ್ಲಿ ಇದು ಅಪಾಯಕಾರಿ ವಿಷಯ! ಪ್ರಳಯಕಾರಕ ಕೂಡ!” ಎಂದು ಸ್ಪೆನ್ಸರ್ ಹೇಳಿದ್ದಾರೆ. ಅಷ್ಟೇ ಅಲ್ಲ ಗುರುವಾರ ಯಾವುದೇ ಹೊಸ ನಿರ್ಧಾರ ತೆಗೆದುಕೊಳ್ಳಬೇಡಿ ಎಂದು ಅನೇಕ ಅಸ್ಟ್ರಾಲಜಿ ವೆಬ್‌ಸೈಟ್‌ಗಳು ಸಹ ಸೂಚಿಸುತ್ತಿವೆ. “ಡಿಸೆಂಬರ್ 21ರಂದು ಹಗಲು ಕಡಿಮೆ ಇರುತ್ತದೆ. ಎಲ್ಲರಲ್ಲೂ ಶಕ್ತಿ ಕಡಿಮೆ ಇರುತ್ತದೆ. ಆ ದಿನ ಯಾವುದೇ ಸಭೆ ಸಮಾರಂಭಕ್ಕೆ ಹೋಗಬೇಡಿ. ಯಾವ ಹೊಸ ಕೆಲಸಗಳನ್ನೂ ಆರಂಭಿಸಬೇಡಿ. ಇದನ್ನು ಕಡೆಗಣಿಸಿದರೆ 2018ರಲ್ಲೂ ತೊಂದರೆ ತಪ್ಪಿದ್ದಲ್ಲ” ಎಂದು ಲೂನಾರ್ ಲಿವಿಂಗ್ ಎಂಬ ವೆಬ್‌ಸೈಟ್ ಎಚ್ಚರಿಸಿದೆ.


Click Here To Download Kannada AP2TG App From PlayStore!