ಇಂದಿನ ಭವಿಷ್ಯ: 12-04-2018

ಮೇಷ ರಾಶಿ
ಸರಕಾರಿ ಕೆಲಸದಲ್ಲಿ ಅನ್ಯರ ಹಸ್ತಕ್ಷೇಪದಿಂದ ತೊಂದರೆ ಎದುರಾಗುವುದು. ಹೀಗಾಗಿ ಯಾರೊಡನೆಯೂ ಗುಟ್ಟು ಬಿಟ್ಟುಕೊಡದಿರಿ. ವಾಹನದಲ್ಲಿ ಸಂಚರಿಸುವಾಗ ದುರ್ಗಾದೇವಿಯ ಸ್ತೋತ್ರವನ್ನು ಪಠಿಸಿರಿ. ಹಣಕಾಸು ಉತ್ತಮವಾಗಿರುವುದು.

ವೃಷಭ ರಾಶಿ
ಹಣಕಾಸು ವ್ಯವಹಾರದಲ್ಲಿ ಎಚ್ಚರಿಕೆಯಿಂದ ಇರಿ. ಬ್ಯಾಂಕಿನಲ್ಲಿ ವ್ಯವಹರಿಸುವಾಗ ಬ್ಯಾಂಕಿಗೆ ಸಂಬಂಧಪಟ್ಟ ದಾಖಲೆಗಳನ್ನು ಸರಿಯಾಗಿಟ್ಟುಕೊಳ್ಳಿರಿ. ನಿಮ್ಮ ಗಮನವನ್ನು ಬೇರೆಡೆ ಸೆಳೆದು ಹಣ ದೋಚುವವರಿಂದ ಎಚ್ಚರದಿಂದಿರಿ.

ಮಿಥುನ ರಾಶಿ
ಹೆಚ್ಚಿನ ವೇಗದಿಂದ ಅಥವಾ ನಿರ್ಲಕ್ಷ್ಯದೊಂದಿಗೆ ವಾಹನ ಚಾಲನೆಯು ಅಪಘಾತವನ್ನು ಉಂಟು ಮಾಡುತ್ತದೆ. ಪ್ರಯಾಣದಲ್ಲಿ ರಸ್ತೆ ನಿಯಮಗಳನ್ನು ಪಾಲಿಸಿರಿ ಮತ್ತು ಸಂಗಾತಿಯ ಜತೆ ಇಂದು ವಾದ-ವಿವಾದವನ್ನು ಮಾಡಿಕೊಳ್ಳದಿರಿ.

ಕಟಕ ರಾಶಿ
ಹಳೆಯ ಕಡತಗಳನ್ನು ಸೂಕ್ಷ ್ಮವಾಗಿಯೇ ಪರಿಶೀಲಿಸಿ ವಿಲೇವಾರಿ ಮಾಡಿರಿ. ಸ್ನೇಹಿತರ ಇಲ್ಲವೇ ಬಂಧುಗಳ ಸಹಕಾರವನ್ನು ಪಡೆಯಿರಿ. ಹಣಕಾಸಿನ ಪರಿಸ್ಥಿತಿ ಅಷ್ಟೇನೂ ಆಶಾದಾಯಕವಾಗಿಲ್ಲದ ಕಾರಣ ಹಣವನ್ನು ಮಿತವಾಗಿ ಬಳಸಿರಿ.

ಸಿಂಹ ರಾಶಿ
ಪ್ರತಿದಿನದಂತೆ ಈದಿನವೂ ಎಲ್ಲ ಸರಿಯಾಗಿದೆ ಎಂದುಕೊಳ್ಳತ್ತಿರುವಾಗಲೇ ಮನೆಯ ಕೆಲಸಗಾರರು ಇಲ್ಲವೇ ನಿಮ್ಮ ಕೈ ಕೆಳಗೆ ಕೆಲಸ ಮಾಡುವವರು ದಿಢೀರನೆ ರಜ ಹಾಕುವುದರಿಂದ ಎಲ್ಲ ಕೆಲಸವೂ ಒಟ್ಟಿಗೆ ಮೈಮೇಲೆ ಬಂದಂತೆ ಆಗುವುದು.

ಕನ್ಯಾ ರಾಶಿ
ನಿಮ್ಮ ಕಾರ್ಯಕ್ರಮಗಳ ಸಫಲತೆಗೆ ಅನಿರೀಕ್ಷಿತ ವಲಯದಿಂದ ಭಾರಿ ಸಹಾಯ ದೊರೆಯುವುದು. ಇದರಿಂದ ಮನಸ್ಸಿಗೆ ಆನಂದ ಉಂಟಾಗುವುದು. ಸಾಮಾಜಿಕ ಕಾರ್ಯಕ್ಷೇತ್ರದಲ್ಲಿ ಗೌರವ ಆದರಗಳು ದೊರೆಯುವುದು.

ತುಲಾ ರಾಶಿ
ನಿಮ್ಮನ್ನು ಬರಿ ಸುಮ್ಮನೆ ಒತ್ತಡದಲ್ಲಿರಿಸುವ ಕಾರ್ಯತಂತ್ರವನ್ನು ರೂಪಿಸುವ ಗೆಳೆಯರಿಂದ ದೂರವಿರಿ. ಸಂಗಾತಿಯ ಸಕಾಲಿಕ ಎಚ್ಚರಿಕೆಯಿಂದ ಈದಿನ ಅಧಿಕ ಲಾಭ ಅಥವಾ ನೆಮ್ಮದಿ ಉಂಟಾಗುವುದು. ಗುರುರಾಯರನ್ನು ಸ್ಮರಿಸಿ.

ವೃಶ್ಚಿಕ ರಾಶಿ
ಬಹುಮುಖ ಪ್ರತಿಭೆಯುಳ್ಳ ವ್ಯಕ್ತಿಗಳ ದರ್ಶನಕ್ಕೆ ಜಾತಕಪಕ್ಷಿಯಂತೆ ಕಾಯುವಿರಿ. ಆದರೆ ಗ್ರಹಸ್ಥಿತಿಯು ಇಂದು ಕೂಡ ನಿರಾಸೆಯನ್ನುಂಟು ಮಾಡುವುದು. ಹಾಗಾಗಿ ಈದಿನ ಪ್ರಮುಖರ ಭೇಟಿಯು ರದ್ದಾಗಲಿದೆ.

ಧನಸ್ಸು ರಾಶಿ
ಕಾಡಿನಲ್ಲಿ ಹುಡುಕುತ್ತಿದ್ದ ಬಳ್ಳಿ ಕಾಲಿಗೆ ತೊಡರಿಕೊಂಡಂತೆ ಈದಿನ ನಿಮ್ಮ ಪ್ರಯತ್ನಕ್ಕೆ ಭಗವಂತನು ಒಲಿದು ಬರುವನು. ಮನೆ ಬಾಗಿಲಿಗೆಯೇ ನಿಮ್ಮ ಕಾರ್ಯಗಳ ಸಫಲತೆಯ ಬಗ್ಗೆ ವಾರ್ತೆ ಬರುವುದು.

ಮಕರ ರಾಶಿ
ಕಟ್ಟಡ ಮೇಲುಸ್ತುವಾರಿಕೆ ಮಾಡುವವರು ಅಥವಾ ಕಟ್ಟಡ ವಿನ್ಯಾಸಕಾರರಿಗೆ ಉತ್ತಮ ದಿನ. ಬಹು ಪ್ರಮುಖವಾದ ಮತ್ತು ಬೃಹತ್ತಾದ ಕಾರ್ಯ ನಿರ್ವಹಿಸಲು ನಿಮಗೆ ಕರೆ ಬರುವ ಸಾಧ್ಯತೆ ಇರುತ್ತದೆ.

ಕುಂಭ ರಾಶಿ
ದಿನದಿಂದ ದಿನಕ್ಕೆ ಅಭಿವೃದ್ಧಿಯನ್ನು ಹೊಂದುತ್ತಿರುವ ನಿಮ್ಮನ್ನು ಕಂಡರೆ ಇತರರಿಗೂ ಅಸೂಯೆ ಹುಟ್ಟಿಸುವುದು. ಆ ಬಗ್ಗೆ ತಲೆ ಕೆಡಿಸಿಕೊಳ್ಳದೆ ನಿಮ್ಮ ಕಾರ್ಯದಲ್ಲಿ ತಲ್ಲೀನರಾಗಿರಿ.

ಮೀನ ರಾಶಿ
ಕೇವಲ ಹಗಲು ಕನಸು ಕಾಣುವುದನ್ನು ಬಿಡಿರಿ. ನಿಮಗೆ ಮಾಡಲು ಸಾಧ್ಯವಾದುದನ್ನೇ ಇಂದು ಆಯ್ಕೆ ಮಾಡಿಕೊಂಡು ಕೆಲಸ ಪೂರೈಸಿರಿ. ಗೆಳೆಯರ ಒತ್ತಾಯದ ಮೇರೆಗೆ ಬಹುಪ್ರಮುಖ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕಾಗುವುದು.


Click Here To Download Kannada AP2TG App From PlayStore!