ಇಂದಿನ ಭವಿಷ್ಯ: 13-03-2018

ಮೇಷ ರಾಶಿ
ಉದ್ಯೋಗಕ್ಕಾಗಿ ನಡೆದ ತೀವ್ರ ಪ್ರಯತ್ನ ಇಂದು ಫಲ ನೀಡಲಿದೆ. ಸಂಸ್ಥೆಯೊಂದರ ಪಾಲುದಾರಿಕೆ ಪಡೆಯುವಿರಿ. ಜೀವನ ಯಶಸ್ಸಿನತ್ತ ಸಾಗುವುದರಿಂದ ಮನಸು ಪ್ರಫುಲ್ಲವಾಗುವುದು. ಆರ್ಥಿಕ ಸ್ಥಿತಿ ಉತ್ತಮ.

ವೃಷಭ ರಾಶಿ
ಬಂಧುಗಳ ಆಗಮನ, ಸ್ವತ್ತು ತಗಾದೆಗಳು ಮಧ್ಯಸ್ಥಿಕೆಯಿಂದ ಇತ್ಯರ್ಥವಾಗುವುದು. ಹಿರಿಯ ಸಹೋದರನು ನಿಮಗೆ ಇಂದು ಅನುಕೂಲಕರನಾಗಿದ್ದು ನಿಮ್ಮ ಕಾರ್ಯ ಯೋಜನೆಗಳಿಗೆ ಬೆಂಬಲ ನೀಡುವರು.

ಮಿಥುನ ರಾಶಿ
ಮನೆ ಕೊಳ್ಳಲು ಅಥವಾ ನಿವೇಶನ ಖರೀದಿಸಲು ಮುಂದಾಗುವಿರಿ. ಇದಕ್ಕಾಗಿ ಬ್ಯಾಂಕಿನಲ್ಲಿ ಹಣಕಾಸಿನ ನೆರವು ದೊರೆಯುವ ಆಶ್ವಾಸನೆ ಸಿಗುವುದು. ಶೈಕ್ಷ ಣಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವವರಿಗೆ ಉತ್ತಮ ದಿನವಾಗಿರುತ್ತದೆ.

ಕಟಕ ರಾಶಿ
ಮನೆಗೆದ್ದು ಮಾರುಗೆಲ್ಲು ಎಂದರು ಹಿರಿಯರು. ಅಂತೆಯೇ ಈದಿನ ನಿಮ್ಮ ಆರೋಗ್ಯದ ಕಡೆ ಮತ್ತು ಮನೆಯಲ್ಲಿನ ಬಾಕಿ ಕೆಲಸಗಳತ್ತ ಗಮನ ಹರಿಸಿರಿ. ಇದರಿಂದ ಕುಟುಂಬದ ಜನರು ನಿಮ್ಮನ್ನು ಆದರಿಸುವರು.

ಸಿಂಹ ರಾಶಿ
ಅನಗತ್ಯ ಚಿಂತೆ ದೂರವಾಗಲಿದೆ. ಪರಾಕ್ರಮ ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಂವಹನದ ಮೂಲಕ ಬಂಧುಗಳಲ್ಲಿ ಇದ್ದ ಮನಸ್ತಾಪಗಳು ಕಡಿಮೆ ಆಗುವುದು. ಕುಲದೇವರನ್ನು ನೆನೆಸಿಕೊಳ್ಳಿ.

ಕನ್ಯಾ ರಾಶಿ
ಸಹವರ್ತಿಗಳ ಜೊತೆ ವ್ಯವಹರಿಸುವಾಗ ಮೃದು ಧೋರಣೆ ತೋರುವುದು ಒಳ್ಳೆಯದು. ಕಲ್ಲಿನಂತೆ ಕುಳಿತು ಗಡಿಯಾರದಂತೆ ಕೆಲಸ ಮಾಡುವ ನಿಮಗೆ ಇತರರಿಂದ ಸಿಗಬೇಕಾದ ಗೌರವ ದೊರೆಯಲಿದೆ.

ತುಲಾ ರಾಶಿ
ನೀವೀಗ ಹೆಚ್ಚು ಶಕ್ತಿಶಾಲಿ. ನಿಮ್ಮ ಕಠಿಣ ಪರಿಶ್ರಮದಿಂದ ಬಾಕಿಯಿದ್ದ ಹಳೆಯ ಕೆಲಸಗಳು ಮುಗಿಯಲಿವೆ. ಹಾಗಂತ ದುಡುಕಿ ನಿರ್ಧಾರ ತೆಗೆದುಕೊಳ್ಳದಿರಿ. ಹಳೆಯ ಸಾಲಗಳನ್ನು ಪೂರೈಸುವತ್ತ ಗಮನ ಕೊಡಿರಿ.

ವೃಶ್ಚಿಕ ರಾಶಿ
ಉದ್ಯೋಗಕ್ಕಾಗಿ ನಡೆದ ತೀವ್ರ ಪ್ರಯತ್ನವೂ ಸಫಲವಾಗುವುದಿಲ್ಲ. ಮನೆ ದೇವರ ಪ್ರಾರ್ಥನೆ ಮಾಡುವುದರಿಂದ ಒಳಿತಾಗುವುದು. ಜೀವನ ನಿರ್ವಹಣೆಗೆ ತೊಂದರೆ ಆಗುವುದಿಲ್ಲ. ತಾಂತ್ರಿಕ ವರ್ಗದವರಿಗೆ ಉತ್ತಮ ದಿನ.

ಧನಸ್ಸು ರಾಶಿ
ಖರ್ಚಿನ ಮೇಲೆ ಹಿಡಿತವಿರಲಿ. ದೂರದಲ್ಲಿರುವ ಮಕ್ಕಳಿಂದ ಶುಭ ವಾರ್ತೆ ಬರುವುದು. ಧಾರ್ಮಿಕ ಕೆಲಸ ಕಾರ್ಯಗಳಲ್ಲಿ ಭಾಗವಹಿಸುವಿರಿ. ಸಂಗಾತಿಯ ಸಲಹೆಯನ್ನು ಸ್ವೀಕರಿಸಿ. ಸಾಮಾಜಿಕ ಕೆಲಸದಲ್ಲಿ ತೊಡಗಿಕೊಳ್ಳಿರಿ.

ಮಕರ
ನಿಮ್ಮ ಸಾಮರ್ಥ್ಯ‌ದ ಬಗ್ಗೆ ನಿಮ್ಮ ಸುತ್ತಲಿನವರಿಗೆ ತಿಳಿಯಲಿದೆ. ಉದ್ಯೋಗಸ್ಥರಿಗೆ ಕೆಲಸದಲ್ಲಿ ಪ್ರಗತಿ ಕಂಡು ಬರುವುದು. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಮಂಡಿ ನೋವು ಅಥವಾ ಸೊಂಟ ನೋವು ಕಾಡುವ ಸಾಧ್ಯತೆ ಇರುತ್ತದೆ.

ಕುಂಭ ರಾಶಿ
ಖುಷಿಯ ಸುದ್ದಿಯೊಂದು ತಿಳಿಯಲಿದೆ ಇಂದು. ಇದರಿಂದ ಮನಸ್ಸಿಗೆ ನೆಮ್ಮದಿ ದೊರೆಯಲಿದೆ. ನಿಮ್ಮ ಸಹೋದ್ಯೋಗಿಗಳು ನಿಮ್ಮ ಯಶಸ್ಸಿಗೆ ಅಭಿನಂದನೆ ಸಲ್ಲಿಸುವರು. ಇದರಿಂದ ಮುಂದಿನ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವುದು.

ಮೀನ ರಾಶಿ
ಗಂಡ ಹೆಂಡತಿಯರಲ್ಲಿನ ಮನಸ್ತಾಪ ಕಡಿಮೆ ಆಗುವುದು. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಂಡು ಬರುವುದು. ಸಾಮಾಜಿಕ ಕ್ಷೇತ್ರದಲ್ಲಿ ಮನ್ನಣೆ ಗಳಿಸಲು ಗುರುವಿನ ಆಶೀರ್ವಾದ ಪಡೆಯಿರಿ. ಆರ್ಥಿಕ ಸ್ಥಿತಿ ಸಾಧಾರಣವಾಗಿರುತ್ತದೆ.


Click Here To Download Kannada AP2TG App From PlayStore!