ಇಂದಿನ ಭವಿಷ್ಯ: 14-02-2018

ಮೇಷ ರಾಶಿ
ಮನಸ್ಸಿಗೆ ಖುಷಿ ಕೊಡುವ ಕೆಲಸಗಳಲ್ಲಿ ತೊಡಗಿಕೊಳ್ಳುವಿರಿ. ಕಚೇರಿಯಲ್ಲಿ ನಿಮ್ಮ ದುಡಿಮೆಗೆ ತಕ್ಕ ಮನ್ನಣೆ ದೊರೆಯುವುದು. ವೃತ್ತಿ ಸಂಬಂಧ ದೂರ ಪ್ರಯಾಣದ ಸಾಧ್ಯತೆ ಉಂಟಾಗುವುದು. ಹಣಕಾಸಿನ ಪರಿಸ್ಥಿತಿ ಉತ್ತಮಗೊಳ್ಳುವುದು.

ವೃಷಭ ರಾಶಿ
ಕೆಲವರು ಬೇಕಂತಲೇ ನಿಮ್ಮನ್ನು ಉದ್ರೇಕಿಸುವರು. ಅಂತಹ ಹುನ್ನಾರಗಳ ಬಗ್ಗೆ ಎಚ್ಚರ ಇರಲಿ. ಕಠೋರವಾಗಿ ಮಾತನಾಡುವ ಸಂದರ್ಭ ಬಂದರೆ ಹೆದರಬೇಡಿ. ಕಟು ಮಾತುಗಳ ಮೂಲಕವೇ ಕೆಲವರಿಗೆ ಸ್ಪಷ್ಟ ಸಂದೇಶ ರವಾನೆ ಮಾಡುವಿರಿ.

ಮಿಥುನ ರಾಶಿ
ಜೀವನ ಸರಿಯಾದ ದಿಕ್ಕಿನಲ್ಲಿಯೇ ಸಾಗುತ್ತಿದೆ ಎಂದು ನಿರ್ಲಿಪ್ತರಾಗಬೇಡಿ. ಇದೇ ಅಂತಿಮವಲ್ಲ. ಇನ್ನಷ್ಟು ಯೋಜಿತ ರೀತಿಯಲ್ಲಿ ಬದುಕು ರೂಪಿಸಿಕೊಳ್ಳಲು ಸಾಧ್ಯವಿದೆ. ಸ್ನೇಹಿತರೊಂದಿಗೆ ಬೆರೆಯಿರಿ ಮತ್ತು ಹೊಸ ವಿಷಯವನ್ನು ಅರಿಯಿರಿ.

 

ಕಟಕ ರಾಶಿ
ಎಲ್ಲವೂ ನೀವು ಅಂದುಕೊಂಡಂತೆಯೇ ನಡೆಯುವುದರಿಂದ ಮನಸ್ಸಿಗೆ ಸಂತೋಷ. ಉದ್ಯೋಗ ಬದಲಾವಣೆ ಬಗ್ಗೆ ಯೋಚನೆ ಮಾಡುತ್ತಿರುವವರು ಧೈರ್ಯದಿಂದ ಮುನ್ನಡಿ ಇಡಬಹುದು. ಸಂಬಂಧಗಳ ನಿರ್ವಹಣೆಯಲ್ಲಿ ಎಚ್ಚರ ಅಗತ್ಯ.

ಸಿಂಹ ರಾಶಿ
ಈದಿನ ನಿಮ್ಮ ವರ್ತನೆ ಸಹೋದ್ಯೋಗಿಗಳಿಗೆ ಅಚ್ಚರಿ ಮೂಡಿಸುವುದು. ಸದಾ ದೂರ್ವಾಸ ಮುನಿಯಂತಿರುವ ವ್ಯಕ್ತಿ ಶಾಂತಮೂರ್ತಿಯಾದದ್ದು ಹೇಗೆ ಎಂಬ ಪ್ರಶ್ನೆ ಕಾಡುವುದು. ಆದರೆ ಈದಿನ ಹಲವು ವಿಚಾರಗಳು ನಿಮ್ಮ ಎಣಿಕೆಯಂತೆ ಆಗುತ್ತಿರುವುದೇ ಈ ಬದಲಾವಣೆಗೆ ಕಾರಣ.

ಕನ್ಯಾ ರಾಶಿ
ಕೆಲವು ಸಂಗತಿಗಳು ನಿಮ್ನನ್ನು ಗಾಢವಾಗಿ ಕಾಡುತ್ತಿವೆ. ಅವುಗಳನ್ನು ಈದಿನ ಬಗೆಹರಿಸಿಕೊಳ್ಳಿರಿ. ಅನಿವಾರ್ಯವಾಗಿ ನಿರ್ವಹಿಸುತ್ತಿದ್ದ ಜವಾಬ್ದಾರಿಯಿಂದ ಮುಕ್ತರಾಗುವಿರಿ. ನಿಮ್ಮ ಕೈಯಲ್ಲಿ ಆಗುವ ಕೆಲಸದ ಕಡೆ ಗಮನ ಹರಿಸಿದರೆ ಸಾಕು.

ತುಲಾ ರಾಶಿ
ಸಾಮಾಜಿಕ ಕ್ಷೇತ್ರಗಳಲ್ಲಿ ಮನ್ನಣೆ. ಕಚೇರಿಯಲ್ಲೂ ನಿಮ್ಮ ಸಾಮರ್ಥ್ಯ‌ಕ್ಕೆ ತಕ್ಕ ಸ್ಥಾನಮಾನ ದೊರೆಯುವುದು. ನಿಮ್ಮಲ್ಲಿ ಕಾರ್ಯ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸುವಿರಿ. ಹಣಕಾಸು ಕೂಡ ಇದಕ್ಕೆ ಪೂರಕವಾಗಿ ಹರಿದು ಬರುವುದು.

ವೃಶ್ಚಿಕ ರಾಶಿ
ಸಂಕಷ್ಟ ಸಂದರ್ಭವನ್ನು ಬಹು ಜಾಣ್ಮೆಯಿಂದ ನಿಭಾಯಿಸುವಿರಿ. ವೃತ್ತಿಯಲ್ಲಿ ಮಹತ್ತರ ಬದಲಾವಣೆಗಳು ಆಗುತ್ತಿರುವುದರಿಂದ ಅದನ್ನು ಸ್ವೀಕರಿಸಲು ಮನಸು ಅಧೈರ‍್ಯಪಡುತ್ತಿರುವುದು. ಆದರೆ ಅದರಿಂದ ಒಳಿತಾಗುವುದು. ಬದಲಾವಣೆಯನ್ನು ಒಪ್ಪಿಕೊಳ್ಳಿರಿ.

ಧನಸ್ಸು ರಾಶಿ
ಕಚೇರಿಯಲ್ಲಿ ವಿಪರೀತ ಒತ್ತಡದ ಸಂದರ್ಭ ಎದುರಾಗುವುದು. ಕ್ರಮವರಿತ ಫೈಲುಗಳ ತಪಾಸಣೆಯಿಂದ ಒಳಿತಾಗುವುದು. ಮೇಲಧಿಕಾರಿಗಳ ಮುಲಾಜಿಗೆ ಒಳಗಾಗಿ ಇಲ್ಲವೇ ಮತ್ತೊಬ್ಬರ ಆಮಿಷಕ್ಕೆ ಒಳಗಾಗಿ ಕೆಲಸ ಮಾಡಬೇಡಿರಿ.

ಮಕರ ರಾಶಿ
ನೀವು ಜಾಮೀನು ನೀಡಿದ್ದ ವ್ಯಕ್ತಿ ಸಾಲದ ಕಂತು ಪಾವತಿಸದ ಕಾರಣ ನಿಮಗೆ ನೋಟೀಸು ಬರುವ ಸಾಧ್ಯತೆ. ಸಾಲ ವಸೂಲಿಗೆ ನಾಜೂಕಿನಿಂದ ವ್ಯವಹರಿಸಿರಿ. ಭಗವಂತನ ಮೊರೆ ಹೋಗಿರಿ. ನಿಮ್ಮ ಕೆಲಸಗಳು ಸುಗಮವಾಗಿ ಆಗುವುದು.

ಕುಂಭ ರಾಶಿ
ಒತ್ತಡದಿಂದ ಬಿಡುಗಡೆ ಮತ್ತು ನಿರಾಳತೆಯ ಭಾವ. ಕೆಲವರು ನಿಮ್ಮ ಮೂಡ್‌ ಹಾಳು ಮಾಡಬೇಕೆಂದು ಉದ್ದೇಶಪೂರ್ವಕ ಗಾಸಿಪ್‌ಗಳನ್ನು ಹರಡಿಸಬಹುದು. ಆದರೆ ಅವುಗಳ ಬಗ್ಗೆ ಗಮನ ಕೊಡದಿರುವುದು ಒಳ್ಳೆಯದು.

ಮೀನ ರಾಶಿ
ಮನೆ ಮತ್ತು ಕಚೇರಿ ಎರಡೂ ಕಡೆ ನಡೆಯುವ ಕೆಲ ಬೆಳವಣಿಗೆಗಳು ನಿಮ್ಮನ್ನು ಹೈರಾಣಾಗಿಸಬಹುದು. ಆರೋಗ್ಯದ ಬಗ್ಗೆ ಕೊಂಚ ನಿಗಾ ಇರಲಿ. ವಿಶೇಷವಾಗಿ ಆಹಾರದ ವಿಚಾರದಲ್ಲಿ ಎಚ್ಚರಿಕೆ ಇರಲಿ.


Click Here To Download Kannada AP2TG App From PlayStore!