ಇಂದಿನ ಭವಿಷ್ಯ: 15-11-2017

ಮೇಷ ರಾಶಿ
ಇಂದಿನ ವ್ಯಾಪಾರ, ವ್ಯವಹಾರದಲ್ಲಿ ಅಧಿಕ ಲಾಭಾಂಶ ಕಂಡುಬರುವುದು. ನಿಮ್ಮ ಕ್ರಿಯಾಶೀಲ ಮತ್ತು ಯೋಜನಾಬದ್ಧ ಪ್ರಾವೀಣ್ಯವು ನಿಮಗೆ ಗೌರವ ಆದರಗಳನ್ನು ತಂದು ಕೊಡುವುದು. ಹಿತಶತ್ರುಗಳ ಬಗ್ಗೆ ಎಚ್ಚರದಿಂದ ಇರಿ.

ವೃಷಭ ರಾಶಿ
ಮನೆಯ ವಿಚಾರಗಳಲ್ಲಿ ಕಾಳಜಿಯನ್ನು ವಹಿಸಲು ಮುಂದಾಗುವಿರಿ. ಇದು ನಿಮ್ಮ ಸಂಗಾತಿಯ ಹರ್ಷಕ್ಕೆ ಕಾರಣವಾಗುವುದು. ಅನೇಕ ದಿನಗಳಿಂದ ನಿಶ್ಚಯಿಸಿದ್ದ ಕಾರ‍್ಯಗಳಿಗೆ ಚಾಲನೆ ದೊರೆಯುವುದು.

ಮಿಥುನ ರಾಶಿ
ಸ್ಟಾಕ್‌ ಮಾರ್ಕೆಟ್‌ನ ವ್ಯವಹಾರದಲ್ಲಿ ಹಣ ತೊಡಗಿಸುವುದರಿಂದ ಸದ್ಯಕ್ಕೆ ಅನುಕೂಲಕ್ಕಿಂತ ಅನನುಕೂಲವೇ ಹೆಚ್ಚಾಗುವುದು. ಎರಡು ಬಾರಿ ಯೋಚಿಸಿ ಹಣ ಹೂಡಿಕೆಯನ್ನು ಮಾಡಿರಿ. ಸದ್ಯದ ಪರಿಸ್ಥಿತಿಯಲ್ಲಿ ತಟಸ್ಥರಾಗಿರುವುದು ಒಳ್ಳೆಯದು.

ಕಟಕ ರಾಶಿ
ಕಿರು ಪರಿಚಯದೊಂದಿಗೆ ಬೆಳೆದ ಆತ್ಮೀಯತೆಯೇ ಪ್ರಣಯಕ್ಕೆ ತಿರುಗುವ ಸಂಭವ. ಆದರೆ ಈ ಪ್ರೇಮ ಪ್ರಕರಣವು ಹಿರಿಯರ ಒಪ್ಪಿಗೆ ಇಲ್ಲದೆ ಮುರಿದು ಬೀಳುವುದು. ಕುಲದೇವತಾ ಪ್ರಾರ್ಥನೆ ಮಾಡಿರಿ.

ಸಿಂಹ ರಾಶಿ
ಉತ್ಸಾಹ ಹಾಗೂ ಸಮರ್ಪಕ ನಡೆ-ನುಡಿಗಳಿಂದಲೇ ಜನರನ್ನು ಆಕರ್ಷಿಸುವಿರಿ. ಪ್ರಶಂಸೆಗಳ ಸುರಿಮಳೆಯಾಗುವುದು. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ. ಕೌಟುಂಬಿಕ ಜೀವನದಲ್ಲಿ ಮಾನಸಿಕ ನೆಮ್ಮದಿ ದೊರೆಯುವುದು.

ಕನ್ಯಾ ರಾಶಿ
ನಿಮ್ಮ ವಿಚಾರಧಾರೆಗಳು ಇತರರ ಮೇಲೆ ಪರಿಣಾಮ ಬೀರುವುದು. ನಿಮ್ಮನ್ನು ವಿರೋಧಿಸುತ್ತಿದ್ದವರು ಇಂದು ನಿಮ್ಮ ನಿಲುವನ್ನು ಸಮರ್ಥಿಸುವರು. ವೈಜ್ಞಾನಿಕ ವಿಚಾರಗಳು ನಿಮ್ಮನ್ನು ಸಮಾಜದಲ್ಲಿ ಅತಿ ಎತ್ತರಕ್ಕೆ ನಿಲ್ಲಿಸುವವು.

ತುಲಾ ರಾಶಿ
ಕುಟುಂಬಕ್ಕೆ ಸಂಬಂಧಿಸಿದ ಆಸ್ತಿಯ ವಿಚಾರದಲ್ಲಿ ಬಂಧುಗಳೊಬ್ಬರು ಪರಿಹಾರ ಸೂಚಿಸುವರು. ಮನೆಯಲ್ಲಿ ಸಂತಸದ ವಾತಾವರಣ ಇರಲಿದೆ. ಮಕ್ಕಳ ಕಲರವು ಮನೆಯಲ್ಲಿ ಸಂತಸವನ್ನು ಹರಡುವುದು. ಗುರುವಿನ ಸ್ತೋತ್ರ ಪಠಿಸಿರಿ.

ವೃಶ್ಚಿಕ ರಾಶಿ
ಈ ದಿನ ಬರುವ ಅಡೆ-ತಡೆಗಳನ್ನು ಧೈರ್ಯವಾಗಿ ಎದುರಿಸುವಿರಿ. ಗುರುವು ನಿಮ್ಮ ಬೆಂಗಾವಲಿಗೆ ನಿಲ್ಲುವರು. ಹಲವು ಬದಲಾವಣೆಗಳಿಗೆ ಇಂದು ಸಾಕ್ಷಿಯಾಗುವ ಸಂಭವವಿದೆ. ಆಂಜನೇಯ ಸ್ತೋತ್ರವನ್ನು ಪಠಿಸಿರಿ. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.

ಧನಸ್ಸು ರಾಶಿ
ಕೆಟ್ಟ ಸ್ನೇಹಿತರು ಬೆಟ್ಟಿಂಗ್‌ಗೆ ಒತ್ತಡ ತಂದುಬಿಡಬಹುದು. ಅದಕ್ಕೆ ಮನಸೋಲದಿರಿ. ಜೂಜು ಎಂದಿಗೂ ಶುಭ ತರದು. ಗಳಿಸಿದ ಹಣವೂ ನೀರಿನಂತೆ ಕರಗುವುದು. ಹಾಗಾಗಿ ಈ ದಿನ ಉತ್ತಮ ಸ್ನೇಹಿತರ ಜೊತೆ ವಿಚಾರ ವಿನಿಮಯ ಮಾಡಿಕೊಳ್ಳಿರಿ.

ಮಕರ ರಾಶಿ
ಬಹುತೇಕ ಘನತೆ ತರುವ ಕಾರ್ಯವು ಇಂದು ನಿಮ್ಮಿಂದ ಆಗುವುದು. ಇದರಿಂದ ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಗುರುತಿಸಿಕೊಳ್ಳುವಿರಿ. ಹಿತೈಷಿಗಳು ನಿಮ್ಮನ್ನು ಕೊಂಡಾಡುವರು.

ಕುಂಭ ರಾಶಿ
ನಿಮ್ಮ ವಿರೋಧಿಗಳೇ ನಿಮ್ಮನ್ನು ಆರಾಧಿಸುವ ಅನಿರೀಕ್ಷಿತ ಬೆಳವಣಿಗೆ ಉಂಟಾಗುವುದು. ಇದರಿಂದ ನಿಮಗೆ ಸೋಜಿಗವಾದರೂ ಭಗವಂತನ ಸಂಕಲ್ಪಕ್ಕೆ ನೀವು ತಲೆಬಾಗಬೇಕಾಗುವುದು.

ಮೀನ ರಾಶಿ
ಹಲವು ದಿನಗಳಿಂದ ಭೇಟಿಯಾಗಿರದ ಆಪ್ತರು ಭೇಟಿಯಾಗಲಿದ್ದಾರೆ. ನಿಮ್ಮ ಪ್ರತಿಭೆಗೆ ಸಾಮಾಜಿಕ ಮನ್ನಣೆ ಗೌರವ ದೊರೆಯಲಿದೆ. ಈ ದಿನ ಯೋಜಿಸಿದ ಕಾರ್ಯಗಳಲ್ಲಿ ಗೆಲುವು ಸಿಗಲಿದೆ. ಹಣಕಾಸಿನ ಸ್ಥಿತಿಯು ಉತ್ತಮವಾಗಿರುತ್ತದೆ.


Click Here To Download Kannada AP2TG App From PlayStore!