ಇಂದಿನ ಭವಿಷ್ಯ: 24-03-2018

ಮೇಷ ರಾಶಿ
ಮಕ್ಕಳು ವಿದ್ಯಾಭ್ಯಾಸದಲ್ಲಿ ಕೊಂಚ ಹಿನ್ನಡೆಯನ್ನು ಕಾಣುವರು. ಇದಕ್ಕಾಗಿ ನಿಮಗೆ ಬೇಸರವಾಗುವ ಸಂದರ್ಭ. ಆದರೆ ಅವರನ್ನು ಕುಳ್ಳಿರಿಸಿಕೊಂಡು ಬುದ್ಧಿವಾದ ಹೇಳಿರಿ. ನಿಮಗೆ ಗುರುಬಲವಿರುವುದರಿಂದ ನಿಮ್ಮ ಮಾತನ್ನು ಅವರು ಗೌರವಿಸುವರು.

ವೃಷಭ ರಾಶಿ
‘ಮಾತು ಬಲ್ಲವಗೆ ಜಗಳವಿಲ್ಲ’ ಎನ್ನುವಂತೆ ವಿನಾಕಾರಣ ಯಾವುದೋ ಹಿಂದಿನ ವಿಷಯವನ್ನು ಕೆದಕಿ ಮಾತನಾಡದಿರಿ. ಇದರಿಂದ ನಿಮ್ಮ ಮನಸ್ಸಿಗೂ ನೋವಾಗುವುದು ಮತ್ತು ಇತರರಿಗೂ ತೊಂದರೆ ಆಗುವುದು. ಶಿವ ಪಂಚಾಕ್ಷ ರಿ ಮಂತ್ರ ಪಠಿಸಿರಿ.

ಮಿಥುನ ರಾಶಿ
ಈದಿನ ತಾಳ್ಮೆಯೇ ನಿಮ್ಮ ಮಂತ್ರವಾಗಿರಲಿ. ಸಂಗಾತಿಯ ಕೋಪ-ತಾಪಗಳಿಗೆ ವಿಪರೀತ ಅರ್ಥ ಕಲ್ಪಿಸಿಕೊಂಡು ಕೂಗಾಡದಿರಿ. ಸಂಜೆಯ ವೇಳೆಗೆ ನಿಜ ಸ್ಥಿತಿಯು ಅರಿವಾಗಿ ಪಶ್ಚಾತ್ತಾಪ ಪಡಬೇಕಾಗುವುದು. ಕುಲದೇವರನ್ನು ಮನಸಾ ಸ್ಮರಿಸಿರಿ.

ಕಟಕ ರಾಶಿ
ಹವಾಮಾನದ ವೈಪರೀತ್ಯದಿಂದ ಆರೋಗ್ಯದಲ್ಲಿ ಅಲ್ಪ ವ್ಯತ್ಯಯವಾಗುವುದು. ಮನೆ ವೈದ್ಯರನ್ನು ಭೇಟಿ ಮಾಡಿ ಸೂಕ್ತ ಔಷಧೋಪಚಾರ ನಡೆಸಿರಿ. ವಾಹನ ಖರೀದಿಯ ಬಗ್ಗೆ ಚಿಂತಿಸುವಿರಿ ಮತ್ತು ನೂತನ ವಾಹನ ಖರೀದಿ ಮಾಡುವಿರಿ.

ಸಿಂಹ ರಾಶಿ
ಈಗಿರುವ ಒತ್ತಡಗಳನ್ನು ನಿಭಾಯಿಸಲು ಕಷ್ಟವಿರುವಾಗ ಮನೆಯ ಸದಸ್ಯರ ಅಜಾಗರೂಕತೆಯಿಂದ ಮಾಡಿದ ತಪ್ಪು ನಿಮ್ಮನ್ನು ಇನ್ನಷ್ಟು ಒತ್ತಡಕ್ಕೆ ನೂಕುವುದು. ಗುರುವಿನ ಪ್ರಾರ್ಥನೆ ಮಾಡಿರಿ. ಗುರುವಿನ ಮಾರ್ಗದರ್ಶನ ಪಡೆಯಿರಿ.

ಕನ್ಯಾ ರಾಶಿ
ನಿಮ್ಮ ಮಾತಿನ ಜಾಣ್ಮೆ, ಸರಳವಾದ ನಡೆ ನುಡಿಗಳಿಂದ ಜನರ ಪ್ರಶಂಸೆಯನ್ನು ಪಡೆಯುವಿರಿ. ಸಮಾಜದಲ್ಲಿ ಎಲ್ಲರೂ ನಿಮ್ಮ ಮಾತಿಗೆ ತಲೆಬಾಗುವರು. ಹಮ್ಮಿಕೊಂಡ ಕಾರ್ಯಗಳು ಸುಲಲಿತವಾಗುವುದರಿಂದ ತೊಂದರೆ ಇಲ್ಲ.

ತುಲಾ ರಾಶಿ
ಅನೇಕ ಒತ್ತಡಗಳ ನಡುವೆಯೂ ಜೀವನದಲ್ಲಿ ಒಂದು ಆಶಾದಾಯಕ ಕಿರಣವೊಂದು ಮೂಡುವುದು. ಇದರಿಂದ ಹೊಸ ಹುರುಪು, ಹೊಸ ಉತ್ಸಾಹದಿಂದ ಕಾರ್ಯಪ್ರವೃತ್ತರಾಗುವಿರಿ. ಹಣಕಾಸಿನ ಸ್ಥಿತಿ ಸಾಧಾರಣವಾಗಿರುತ್ತದೆ.

ವೃಶ್ಚಿಕ ರಾಶಿ
ನೀವು ಎಷ್ಟೇ ಚಾಣಾಕ್ಷ ರಿದ್ದರೂ ಬೆಣ್ಣೆಯಲ್ಲಿ ಕೂದಲನ್ನು ಹುಡುಕುವ ಜನರು ಇದ್ದೇ ಇರುತ್ತಾರೆ. ಆದರೆ ಅದಕ್ಕಾಗಿ ತಲೆ ಕೆಡಿಸಿಕೊಳ್ಳದೆ ನಿಮ್ಮ ಕಾರ್ಯದಲ್ಲಿ ತಲ್ಲೀನರಾಗಿರಿ. ಆಗ ಮಾತ್ರ ನೀವು ಯಶಸ್ಸು ಹೊಂದಬಹುದು.

ಧನಸ್ಸು ರಾಶಿ
ಸಣ್ಣ ಕೆಲಸವೆಂದು ಉದಾಸೀನ ಮಾಡದೆ ಅದನ್ನು ನೀವು ಬಹು ಶ್ರದ್ಧೆಯಿಂದ ಮಾಡಿದಲ್ಲಿ ಉನ್ನತವಾದ ಹುದ್ದೆಯನ್ನು ಸಹ ಲೀಲಾಜಾಲವಾಗಿ ಮುಗಿಸಬಲ್ಲಿರಿ. ನಿಮ್ಮಲ್ಲಿ ನೀವು ಮೊದಲು ಆತ್ಮವಿಶ್ವಾಸವನ್ನು ಸಂಪಾದಿಸಿಕೊಳ್ಳಿರಿ. ಕೆಲಸದಲ್ಲಿ ಜಯಶೀಲರಾಗುವಿರಿ.

ಮಕರ ರಾಶಿ
ಗ್ರಹಗತಿಗಳು ಉತ್ತಮವಾಗಿಲ್ಲದ ಕಾರಣ ಕೆಲವು ವಿಷಯಗಳಲ್ಲಿ ಸ್ವತಂತ್ರ ನಿರ್ಣಯ ತೆಗೆದುಕೊಳ್ಳುವುದು ಸೂಕ್ತವಲ್ಲ. ಹಾಗಾಗಿ ಗುರು-ಹಿರಿಯರ ಸಲಹೆ ಪಡೆದು ಅದನ್ನು ಚಾಚೂ ತಪ್ಪದೆ ಪಾಲಿಸಿದಲ್ಲಿ ಇಂದು ಅನುಕೂಲವಾಗುವುದು.

ಕುಂಭ ರಾಶಿ
ನಿಮ್ಮ ಚಾಣಾಕ್ಷ ಮತಿತನವನ್ನು ಎಲ್ಲರೂ ಒಪ್ಪುವರು. ಮತ್ತು ನಿಮ್ಮ ಕೆಲವು ಹಿತೈಷಿಗಳ ಪ್ರಯತ್ನದಿಂದ ನಿಮ್ಮ ಮನಸ್ಸಿಗೊಪ್ಪುವ ಹೊಸದೇ ಆದ ಜವಾಬ್ದಾರಿಯನ್ನು ನೀವು ತೆಗೆದುಕೊಳ್ಳಬೇಕಾಗುವುದು.

ಮೀನ ರಾಶಿ
ಮನಸ್ಸಿಗೆ ಹಲವಾರು ರೀತಿಯ ಕಿರಿಕಿರಿಗಳಿದ್ದರೂ ಹಣಕಾಸಿನ ವಿಷಯದಲ್ಲಿ ಮಾತ್ರ ಹೆಚ್ಚಿನ ಅನನುಕೂಲತೆ ಉಂಟಾಗುವುದು. ಅನಿವಾರ್ಯವಾಗಿ ಈದಿನ ಸಾಲವನ್ನು ಅನ್ಯರಿಂದ ಪಡೆಯಬೇಕಾಗುವುದು.


Click Here To Download Kannada AP2TG App From PlayStore!