ಇಂದಿನ ಭವಿಷ್ಯ: 28-04-2018

ಮೇಷ ರಾಶಿ
ಉತ್ತಮ ಆರೋಗ್ಯ ಇರುವುದು. ಹಣಕಾಸು ವ್ಯವಹಾರದಲ್ಲಿ ಯಶಸ್ಸು ದೊರೆಯುವುದು. ಇಂದು ಸಂತೋಷ, ಸಂಭ್ರಮದಿಂದ ದಿನವನ್ನು ಕಳೆಯುವಿರಿ. ದೂರದಿಂದ ಬರುವ ವಾರ್ತೆಯು ನಿಮ್ಮ ಉತ್ಸಾಹವನ್ನು ಹೆಚ್ಚಿಸುವುದು. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.

ವೃಷಭ ರಾಶಿ
ಕುಟುಂಬದಲ್ಲಿ ಉತ್ತಮ ಪ್ರಗತಿ ಕಾಣುವಿರಿ. ಕಚೇರಿಯಲ್ಲಿನ ಬಿಕ್ಕಟ್ಟು ನಿವಾರಣೆ ಅಗಲಿದೆ. ಮೊಮ್ಮಗುವಿನ ಹುಟ್ಟಿದ ಹಬ್ಬಕ್ಕೆ ಬೆಲೆಬಾಳುವ ವಸ್ತು ಖರೀದಿಸುವಿರಿ. ಕೌಟುಂಬಿಕವಾಗಿ ನೆಮ್ಮದಿಯ ದಿನ.

ಮಿಥುನ ರಾಶಿ
ಆರ್ಥಿಕ ಅಭಿವೃದ್ಧಿ ಕುಂಠಿತವಾದರೂ ಸಂತೃಪ್ತಿಯ ಬದುಕು ಕಾಣುವಿರಿ. ಹೊಸ ಯೋಚನೆಗಳು, ಹೊಸ ಆವಿಷ್ಕಾರಗಳಿಂದ ಸಮಾಜದ ಗಣ್ಯರಿಂದ ಪ್ರಶಂಸೆಗೆ ಒಳಗಾಗುವಿರಿ.

ಕಟಕ ರಾಶಿ
ಗುರಿ ಸಾಧಿಸುವಲ್ಲಿ ಗುರುವಿನ ಪಾತ್ರ ಹಿರಿದು. ಗುರುವನ್ನು ಮನಸಾರೆ ಕೊಂಡಾಡಿ. ಸಾಧ್ಯವಾದಲ್ಲಿ ಗುರು ಮಂದಿರಕ್ಕೆ ಹೋಗಿ ಪೂಜೆ ಮಾಡಿಸಿ. ಮಾತುಗಾರಿಕೆಯ ಪ್ರಭಾವ ಹೆಚ್ಚಾಗುವುದು.

ಸಿಂಹ ರಾಶಿ
ಸ್ವಂತ ವ್ಯಾಪಾರ-ವ್ಯವಹಾರದಿಂದ ಅಧಿಕ ಲಾಭವಾಗುವುದು. ವಿನಾಕಾರಣ ನಿಮ್ಮನ್ನು ನೀವು ಹೊಗಳಿಕೊಳ್ಳುವುದನ್ನು ಕಡಿಮೆ ಮಾಡಿಕೊಳ್ಳಿ. ಸಂಗಾತಿಯನ್ನು ಗೌರವದಿಂದ ಕಾಣಬೇಕು.

ಕನ್ಯಾ ರಾಶಿ
ಮನುಜ ಒಂದು ಬಾಗಿಲು ಮುಟ್ಟಿದರೆ ದೇವರು ಸಾವಿರ ಬಾಗಿಲನ್ನು ತೆರೆಯುವನು. ಹಾಗಾಗಿ ಯಾವುದನ್ನು ಮಾಡಿದರೆ ಒಳಿತಾಗುವುದು ಎಂದು ಚಿಂತಿಸಿ ಕಾರ್ಯ ಪ್ರವೃತ್ತರಾಗಿ.

ತುಲಾ ರಾಶಿ
ಕೆಲಸ ಕಾರ್ಯಗಳಲ್ಲಿನ ಅಚ್ಚುಕಟ್ಟುತನ ಮತ್ತು ಸಮಯ ಪಾಲನೆ ಇದು ನಿಮಗೆ ಮುಖ್ಯವಾದದ್ದು. ಇದರಿಂದ ಸಮಾಜದಲ್ಲಿ ಉನ್ನತ ಸ್ಥಾನವನ್ನು ಹೊಂದುವಿರಿ.

ವೃಶ್ಚಿಕ ರಾಶಿ
ಸಮಸ್ಯೆಗಳು ಯಾರಿಗಿಲ್ಲ. ಈಗಿರುವ ಸಮಸ್ಯೆಯೇ ದೊಡ್ಡದು ಎಂದು ಕೈ ಹೊತ್ತು ಕುಳಿತುಕೊಳ್ಳುವುದರಿಂದ ಕಾರ್ಯ ಆಗುವುದಿಲ್ಲ. ಆಂಜನೇಯ ಸ್ತೋತ್ರ ಪಠಿಸಿ. ಆನಂದದಿಂದ ಇರಬೇಕು.

ಧನಸ್ಸು ರಾಶಿ
ಇಂದು ಮಹತ್ತರ ದಿನವಾಗಿ ಪರಿವರ್ತನೆ ಆಗುವುದು. ಈ ದಿನವನ್ನು ಅಷ್ಟು ಸುಲಭವಾಗಿ ಮರೆಯಲು ಆಗುವುದಿಲ್ಲ. ನಿಮ್ಮ ಬಿಡುವಿನ ವೇಳೆಯಲ್ಲಿ ಹಳೆಯ ಸ್ನೇಹಿತರನ್ನು ಭೇಟಿ ಮಾಡಿ.

ಮಕರ ರಾಶಿ
ನೌಕರಿಯಲ್ಲಿ ಸಮಸ್ಯೆಗಳು ಎದುರಾಗಬಹುದು. ಲೇವಾದೇವಿ ವ್ಯವಹಾರದಲ್ಲಿ ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುವುದು. ಸ್ನೇಹಿತರು ಹಿತೈಷಿಗಳು ನಿಮಗೆ ಸಹಾಯ ಮಾಡುವರು.

ಕುಂಭ ರಾಶಿ
ಒಂದು ಪ್ರಮುಖ ಫಲಿತಾಂಶಕ್ಕೆ ಕಾಯುತ್ತಿರುವಿರಿ. ಅದು ನಿಮಗೆ ಅನುಕೂಲಕರವಾಗಿಯೇ ಇಂದು ಬರುವುದು. ಇದರಿಂದ ನಿಮ್ಮನ್ನು ಟೀಕಿಸುತ್ತಿದ್ದ ವಿರೋಧಿಗಳಿಗೆ ಮುಖಭಂಗವಾಗುವುದು.

ಮೀನ ರಾಶಿ
ಅಪರಿಚಿತ ವ್ಯಕ್ತಿಗಳೊಂದಿಗೆ ವ್ಯವಹಾರ ಬೇಡ. ರಾಜಕೀಯ ನಾಯಕರಿಗೆ ಹಾಗೂ ಪುಸ್ತಕ ಬರಹಗಾರರಿಗೆ ಉತ್ತಮ ದಿನ. ವಿವಿಧ ಮೂಲಗಳಿಂದ ಹಣಕಾಸು ಒದಗಿ ಬರುವುದು.


Click Here To Download Kannada AP2TG App From PlayStore!