400 ವರ್ಷಗಳ ಶಾಪ ವಿಮೋಚನೆ..ತಾಯಿಯಾಗುತ್ತಿರುವ ಮೈಸೂರು ಮಹಾರಾಣಿ!

ಮೈಸೂರು ರಾಜವಂಶದ 400 ವರ್ಷಗಳ ಶಾಪ ವಿಮೋಚನೆಯಾಗ್ಗುತ್ತಿದೆ. ನೂರಾರು ವರ್ಷಗಳ ನಿರೀಕ್ಷೆಗೆ ತೆರೆಬೀಳಲಿದೆ. ವರ್ಷಗಳಿಂದ ರಾಜವಂಶಸ್ಥರು ಮಾಡುತ್ತಿರುವ ಪೂಜೆಗಳು, ವ್ರತಗಳು, ಹೋಮಗಳ ಫಲಿತಾಂಶ ಸಿಕ್ಕಿದೆ. ಮೈಸೂರು ಅರಮನೆ ಮತ್ತೆ ಮಕ್ಕಳ ಆಟಕ್ಕೆ ನಿಲಯವಾಗಲಿದೆ. ಇದಕ್ಕೆಲ್ಲಾ ಕಾರಣವಾಗಿರುವುದು ರಾಜವಂಶಸ್ಥೆ ತ್ರಿಷಿಕಾ ಕುಮಾರಿ ಒಡೆಯರ್‌ ಗರ್ಭಿಣಿಯಾಗಿದ್ದು, ರಾಜಮನೆತನ ಹೊಸ ಕುಡಿಯನ್ನು ಬರಮಾಡಿಕೊಳ್ಳುವ ಸಂಭ್ರಮದಲ್ಲಿದೆ.

ಕಳೆದ ವರ್ಷ ಜೂನ್ 27ರಂದು ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ತ್ರಿಷಿಕಾ ಕುಮಾರಿ ಮದುವೆಯಾಗಿತ್ತು. ಈ ದಂಪತಿಗಳು ಈಗ ತಂದೆತಾಯಿಯಾಗುತ್ತಿದ್ದಾರೆ. ಈ ಸುದ್ದಿಯೇ ಮೈಸೂರು ರಾಜವಂಶದಲ್ಲಿ ಸಂತೋಷಕ್ಕೆ ಪಾರವೇ ಇಲ್ಲದಂತೆ ಮಾಡುತ್ತಿದೆ. ರಾಜರು ಬದಲಾದರೂ, ತಲೆತಲಾಂತರಗಳಿಂದ ಆ ರಾಜರಿಗೆ ಮಕ್ಕಳಿರಲಿಲ್ಲ. ದತ್ತುಪುತ್ರರೇ ಹೊರತೂ ಹೆತ್ತಮಕ್ಕಳು ಯಾರೂ ಇರಲಿಲ್ಲ. ಇದು 400 ವರ್ಷಗಳಿಂದ ಮುಂದುವರೆಯುತ್ತಾ ಬಂದಿದೆ. ಈಗಿನ ಯದುವೀರ್ ಸಹ ದತ್ತುಪುತ್ರ. ದಿವಂಗತ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ರಾಣಿ ಪ್ರಮೋದಾದೇವಿ…ಯದುವೀರರನ್ನು ದತ್ತು ತೆಗೆದುಕೊಂಡಿದ್ದರು. ಈಗ ತ್ರಿಷಿಕಾ 4 ತಿಂಗಳ ಗರ್ಭಿಣಿ ಎಂದು ಮೂಲಗಳು ತಿಳಿಸಿವೆ. ದಸರೆ ವೇಳೆಗೆ ಮಗುವಿಗೆ ಜನ್ಮ ನೀಡುವ ಸಾಧ್ಯತೆ ಇದೆ. ಆದರೆ ಹಿಂದೂ ಸಂಪ್ರದಾಯದಲ್ಲಿರುವ ಸೂತಕವು ರಾಜ ಕುಟುಂಬಕ್ಕೆ ಅನ್ವಯಿಸದ ಕಾರಣ ದಸರೆ ಆಚರಣೆ ಮತ್ತು ಖಾಸಗಿ ದರ್ಬಾರ್‌ ಎಂದಿನಂತೆ ನಡೆಯಲಿದೆ.

ಇಷ್ಟು ದಿನಗಳ ಕಾಲ ನಡೆದದ್ದೇನೆಂದರೆ…ಶ್ರೀರಂಗಪಟ್ಟಣ ಮಹಾರಾಣಿ ಅಲಮೇಲಮ್ಮ ಶಾಪವೇ ಇದಕ್ಕೆ ಕಾರಣ ಎನ್ನುತ್ತಾರೆ ಪೂರ್ವಿಕರು. ಅಲಮೇಲಮ್ಮ ಪತಿ ತಿರುಮಲ ರಾಜ ಮೈಸೂರು ಸಿಂಹಾಸನವನ್ನು ಆಳುತ್ತಿದ್ದಾಗ, ರಾಜ ಒಡೆಯರ್ ಆತನ ಮೇಲೆ ತಿರುಗಿಬಿದ್ದು ರಾಜನಾಗುತ್ತಾನೆ. ಇದರಿಂದ ದುಃಖಗೊಂಡ ಅಲಮೇಲಮ್ಮ ಕೆಲವು ಮುಖ್ಯವಾದ ಆಭರಣಗಳನ್ನು ತೆಗೆದುಕೊಂಡು ತಲಕಾಡಿಗೆ ಹೊರಟುಹೋಗುತ್ತಾಳೆ. ಆಕೆಯನ್ನು ಹುಡುಕುತ್ತಾ ಬಂದ ಒಡೆಯರ್ ಸೈನಿಕರು ಆಕೆಯನ್ನು ಸುತ್ತುವರಿಯುತ್ತಾರೆ. ಆ ಸಮಯದಲ್ಲಿ ಅಲಮೇಲಮ್ಮ…ತೀವ್ರ ರೋಷದಿಂದ ಮೈಸೂರು ರಾಜರಿಗೆ ಯಾವ ಕಾಲಕ್ಕೂ ಮಡಿಲು ತುಂಬಲ್ಲ ಎಂದು ಶಾಪ ಕೊಟ್ಟು ಕಾವೇರಿ ನದಿಗೆ ಧುಮುಕಿ ಆತ್ಮಾರ್ಪಣೆ ಮಾಡಿಕೊಳ್ಳುತ್ತಾಳೆ. ಆಕೆಯ ಶಾಪದ ಫಲವೋ ಇನ್ನೇನು ಕಾರಣಕ್ಕೋ ಮೊನ್ನೆಯ ಶ್ರೀಕಂಠ ದತ್ತ ಒಡೆಯರ್ ವರೆಗೆ ಮೈಸೂರು ರಾಜರಿಗೆ ಮಕ್ಕಳಿಲ್ಲ. ಹಾಗಾಗಿ ಇವರು ಸಮೀಪದ ಬಂಧುಗಳಲ್ಲಿನ ಗಂಡುಮಕ್ಕಳನ್ನು ದತ್ತು ತೆಗೆದುಕೊಂಡು ವಾರಸ್ದಾರನಾಗಿ ಪ್ರಕಟಿಸುತ್ತಿದ್ದಾರೆ. ಆದರೆ ಚರಿತ್ರೆಗೆ ಭಿನ್ನವಾಗಿ ಈ ಬಾರಿ ರಾಜ ದಂಪತಿಗಳ ಮಡಿಲು ತುಂಬುತ್ತಿದೆ. ಈ ಸಲ ಗಂಡುಮಗು ಜನಿಸುತ್ತದೆಂದು ಮೈಸೂರಿನ ಜ್ಯೋತಿಷಿಗಳು ಭವಿಷ್ಯ ನುಡಿದಿದ್ದಾರೆ.

 


Click Here To Download Kannada AP2TG App From PlayStore!