ನಿಮಗೆ ಯಾರು ಕರೆ ಮಾಡುತ್ತಿದ್ದಾರೆಂದು ಅವರ ಹೆಸರಿನೊಂದಿಗೆ ಫೋಟೋ ಅನ್ನು ಕೂಡಾ ವೀಕ್ಷಿಸಬಹುದು…!!

ಅನ್ ನೋನ್ ಕರೆಗಳು ಬಂದಾಗ ಟ್ರೂ ಕಾಲರ್ ಗೆ ಕೆಲಸ ಬೀಳುತ್ತದೆ. ನಿಜವಾಗಿಯೂ ಅದು ನಾವು ಉತ್ತರ ನೀಡುವ ಕರೆಯಾ? ಇಲ್ಲವೆ ಇಗ್ನೋರ್ ಮಾಡಬೇಕೆ? ಎನ್ನುವುದು ಗೊತ್ತಾಗುತ್ತದೆ. ಇದಕ್ಕೆಂದೇ ಈಗ ಹಲವರು ಸ್ಮಾರ್ಟ್ ಫೋನುಗಳಲ್ಲಿ ಟ್ರೂ ಕಾಲರ್ ಆಪ್ ಅನ್ನು ಬಳಸುತ್ತಿದ್ದಾರೆ. ಇಷ್ಟು ಜಾಗ್ರತೆ ವಹಿಸಿದರೂ ಇನ್ನೂ ಸ್ವಲ್ಪ ಕನ್ ಪ್ಯೂಜನ್…ಏಕೆಂದರೆ ಕೆಲವರ ಹೆಸರು ತಕ್ಷಣ ಸ್ಟ್ರಯಿಕ್ ಆಗುವುದಿಲ್ಲ…ಆ ಹೆಸರನ್ನು ನೋಡಿ ಕರೆ ಕಟ್ ಆಗುವುದರಲ್ಲಿ ಕರೆಯನ್ನು ಸ್ವೀಕರಿಸಬೇಕೆ? ಬೇಡವೇ? ಎಂಬ ನಿರ್ಣಯ ತೆಗೆದುಕೊಳ್ಳುವುದು ಕಷ್ಟವಾಗುತ್ತದೆ. ಅದರಲ್ಲೂ ಟ್ರೂ ಕಾಲರ್ ಒಬ್ಬ ವ್ಯಕ್ತಿಯ ನಿಜವಾದ ಹೆಸರಿಗಿಂತ, ಆ ವ್ಯಕ್ತಿಯ ಕಾಂಟಾಕ್ಟ್ ಅನ್ನು ಹೆಚ್ಚಿನ ಜನರು ಯಾವ ಹೆಸರಿನಿಂದ ಸೇವ್ ಮಾಡಿಕೊಂಡರೆ ಅದೇ ಹೆಸರು ನಮಗೆ ಡಿಸ್ ಪ್ಲೆ ಆಗುತ್ತದೆ. ಕೆಲವರು ನಿಕ್ ನೇಮ್ ನಿಂದ ಕಾಂಟಾಕ್ಟ್ ಅನ್ನು ಸೇವ್ ಮಾಡುವುದರಿಂದ ಅಂತಹ ಸಂದರ್ಭದಲ್ಲಿ ಫೋನ್ ಸ್ವೀಕರಿಸಬೇಕೇ? ಬೇಡವೇ? ಎಂದು ತುಂಬಾ ಸಂಶಯಕ್ಕೊಳಗಾಗುತ್ತಿರುತ್ತೇವೆ. ಅಂತಹವರಿಗೆ ಅದ್ಭುತವಾದ ಫೀಚರ್ ಲಭ್ಯವಿದೆ. ಅದು ಹೆಚ್ಚಿನ ಜನರಿಗೆ ತಿಳಿದಿಲ್ಲ. ಕೆಳಕಂಡ ಆಪ್ ಮೂಲಕ ಟ್ರೂ ಕಾಲರ್ ನಲ್ಲಿ ಅವರ ಹೆಸರು ಮಾತ್ರವಲ್ಲದೆ ಫೊಟೋ ಕೂಡಾ ನೋಡಬಹುದು. ಆ ಇಮೇಜ್ ನೋಡಿದ ತಕ್ಷಣ ನಮಗೆ ಅದು ಮುಖ್ಯವಾದ ಕರೆ ಹೌದಾ, ಅಲ್ಲವೇ? ಎಂದು ಪ್ಲಾಶ್ ಆಗುತ್ತದೆ… ಅದನ್ನು ತಿಳಿದುಕೊಳ್ಳಲು ನೀವು ಮಾಡಬೇಕಾಗಿರುವುದು ಇಷ್ಟೆ.

ಪ್ಲೇ ಸ್ಟೋರ್ ನಲ್ಲಿ ಹೋಗಿ ಡ್ರೂಪ್ ಆಪ್ ಅನ್ನು ಡೌನ್ ಲೋಡ್ ಮಾಡಿಕೊಂಡು ಇನ್ ಸ್ಟಾಲ್ ಮಾಡಿಕೊಂಡು ಆಪ್ ಅನ್ನು ಓಪನ್ ಮಾಡಿದ ಕೂಡಲೇ ಇಂಟರ್ ಫೇಸ್ ಎಂದು ಬರುತ್ತದೆ. ಅದರ ಮೇಲೆ ಟಚ್ ಮಾಡಿ ನೆಕ್ಸ್ಟ್ ಅನ್ನು ಪ್ರೆಸ್ ಮಾಡಿದರೆ ಪರ್ಮೀಷನ್ ಕೇಳುತ್ತದೆ. ಅದನ್ನು ಆಕ್ಸೆಪ್ಟ್ ಮಾಡಿ ನೆಕ್ಸ್ಟ್ ಅನ್ನು ಪ್ರೆಸ್ ಮಾಡಬೇಕು. ಇಲ್ಲಿ ಆಲ್ ಪರ್ಮೀಷನ್ಸ್ ಕೊಡಬೇಕು. ನಂತರ ಆಪ್ ಅನ್ನು ಕ್ಲೋಸ್ ಮಾಡಿ ಪುನಃ ಓಪನ್ ಮಾಡಬೇಕು. ಆಗ ಇಂಟರ್ ಫೇಸ್ ಎಂದು ಬರುತ್ತದೆ. ಆಗ ಅಪರಿಚಿತ ವ್ಯಕ್ತಿಗಳಿಂದ ಕರೆ ಬಂದಾಗ ಅವರ ಹೆಸರಿನೊಂದಿಗೆ ಫೋಟೋ ಕೂಡಾ ಕಾಣುವುದಲ್ಲದೆ ಇದರಲ್ಲಿ ಇನ್ನೂ ಹೆಚ್ಚಿನ ಆಪ್ಷನ್ ಗಳಿವೆ. ಈ ಆಪ್ ಮೂಲಕ ವಾಯಿಸ್ ಮೆಸೇಜ್ ಕಳುಹಿಸಬಹುದು. ಆದ್ದರಿಂದ ಈ ಆಪ್ ಅನ್ನು ಉಪಯೋಗಿಸಿ ಅಪರಿಚಿತರ ಹೆಸರು, ಫೋಟೋ ಕೂಡಾ ನೋಡಬಹುದು. ಈ ಆಪ್ ಇನ್ ಸ್ಟಾಲೇಷನ್ ಅನ್ನು ವೀಡಿಯೋ ರೂಪದಲ್ಲಿ ವೀಕ್ಷಿಬೇಕೆಂದರೆ ಕೆಳಗೆ ಕ್ಲಿಕ್ ಮಾಡಿ ನೋಡಿ. ಆ ವೀಡಿಯೋ ದಲ್ಲಿ ಹೇಳಿದ ಹಾಗೆ ಫಾಲೋ ಆದರೆ ಸುಲಭವಾಗಿ ನಿಮ್ಮ ಮೊಬೈಲ್ ನಲ್ಲಿ ಅಪರಿಚಿತರ ಫೋನ್ ಕರೆಯನ್ನು ಹೆಸರಿನೊಂದಿಗೆ ಫೋಟೋ ಅನ್ನು ವೀಕ್ಷಿಸಬಹುದು….