ಡಯಾಬಿಟೀಸ್ ರೋಗವನ್ನು ಹೊಡೆದೋಡಿಸಲು…ಕೋಳಿಮೊಟ್ಟೆ ವೆನಿಗರ್ ಟಿಪ್…ತಪ್ಪದೇ ಪ್ರಯತ್ನಿಸಿ.

ಇಂದು ಪ್ರಪಂಚದಾದ್ಯಂತ ಬಹುಪಾಲು ಮಂದಿಯನ್ನು ಡಯಾಬಿಟೀಸ್ ರೋಗ ಕಾಡುತ್ತಿದೆ. ದಿನೇ ದಿನೇ ಈ ರೋಗಕ್ಕೆ ತುತ್ತಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಡಯಾಬಿಟೀಸ್ ರೋಗದಲ್ಲಿ ಎರಡು ವಿಧ. ಒಂದು ಟೈಪ್-1 ಮತ್ತು ಎರಡನೆಯದು ಟೈಪ್-2. ಶರೀರದಲ್ಲಿ ಉತ್ಪತ್ತಿಯಾದ ಇನ್ಸುಲಿನ್ ಅನ್ನು ಸರಿಯಾಗಿ ಉಪಯೋಗಿಸಿಕೊಳ್ಳಲಾಗದ ಸ್ಥಿತಿಯೇ ಟೈಪ್ -2 ಡಯಾಬಿಟೀಸ್. ಟೈಪ್-1 ಕ್ಕಿಂತಲೂ ಟೈಪ್-2 ನಿಂದ ನರಳುತ್ತಿರುವವರ ಸಂಖ್ಯೆ ಇಂದು ಹೆಚ್ಚಾಗಿದೆ. ಈ ಖಾಯಿಲೆಯನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳಲು ಔಷಧಗಳಿವೆಯೇ ಹೊರತು, ಗುಣಪಡಿಸಲು ಯಾವುದೇ ಔಷಧಿಗಳಿಲ್ಲ. ನಿಯಂತ್ರಣದಲ್ಲಿ ಇರಿಸಿಕೊಳ್ಳಲು ಉಪಯೋಗಿಸಲಾಗುವ ಔಷಧಿಗಳಿಂದ ಹಲವಾರು ಅಡ್ಡ ಪರಿಣಾಮಗಳು ಉಂಟಾಗುತ್ತವೆ. ಈ ನಿಟ್ಟಿನಲ್ಲಿ ಅಡ್ಡ ಪರಿಣಾಮವನ್ನು ಉಂಟುಮಾಡದ ಒಂದು ಉಪಾಯವಿದೆ. ಇದರಿಂದ ಸಕ್ಕರೆ ಮಟ್ಟ ಹತೋಟಿಯಲ್ಲಿದ್ದು, ಯಾವುದೇ ಅಡ್ಡ ಪರಿಣಾಮ ಉಂಟಾಗುವುದಿಲ್ಲ. ಬನ್ನಿ. ಆ ಉಪಾಯದ ಬಗ್ಗೆ ತಿಳಿದುಕೊಳ್ಳೋಣ.

eggs-vinegar

ಒಂದು ಕೋಳಿಮೊಟ್ಟೆಯನ್ನು ಚೆನ್ನಾಗಿ ಬೇಯಿಸಿ. ನಂತರ ಅದರ ಸಿಪ್ಪೆಯನ್ನು ಸುಲಿದು, ಫೋರ್ಕ್ ಸಹಾಯದಿಂದ ಒಳಗಿನವರೆಗೂ ಚುಚ್ಚಿ ರಂದ್ರಗಳನ್ನು ಮಾಡಿ. ನಂತರ ಒಂದು ಪಾತ್ರೆಗೆ ನೀರು ಹಾಕಿ ಅದಕ್ಕೆ ಸ್ವಲ್ಪ ವೆನಿಗರ್ ಹಾಕಿ. ಇದರಲ್ಲಿ ಬೇಯಿಸಿದ ಕೋಳಿಮೊಟ್ಟೆ ಹಾಕಿ. ರಾತ್ರಿಯಿಡೀ ಹಾಗೇ ಇರಲು ಬಿಟ್ಟು, ಬೆಳಿಗ್ಗೆ ಎದ್ದ ತಕ್ಷಣ, ಮೊಟ್ಟೆಯನ್ನು ತಿಂದು ನೀರನ್ನು ಕುಡಿಯಿರಿ. ಕೆಲವೇ ದಿನಗಳಲ್ಲಿ ಡಯಾಬಿಟೀಸ್ ಕಡಿಮೆಯಾಗುವುದನ್ನು ಗಮನಿಸಬಹುದು.

ಮೇಲೆ ತಿಳಿಸಿದ ರೀತಿಯಲ್ಲಿ, ಬೆಳಿಗ್ಗೆ ಹಾಗೂ ಮಧ್ಯಾನ್ಹ ಒಂದೊಂದು ಮೊಟ್ಟೆ ತಿಂದು ವೆನಿಗರ್ ಮಿಶ್ರಿತ ನೀರು ಕುಡಿಯುವುದರಿಂದ ಸಕ್ಕರೆ ಖಾಯಿಲೆ ತ್ವರಿತವಾಗಿ ಕಡಿಮೆಯಾಗಲು ಸಹಕಾರಿಯಾಗುತ್ತದೆ. ಈ ಸಲಹೆಯನ್ನು ಕೆಲವು ದಿನಗಳ ಕಾಲ ಮಾಡುತ್ತಾ ಬಂದಲ್ಲಿ ಸಕ್ಕರೆ ಕಾಯಿಲೆ ಹತೋಟಿಗೆ ಬರುವುದಲ್ಲದೆ, ಮುಂದಿನ ದಿನಗಳಲ್ಲಿ ಮರುಕಳಿಸುವ ಸಾಧ್ಯತೆ ಇರುವುದಿಲ್ಲ. ಇದು ಬಹಳ ಪರಿಣಾಮಕಾರಿ ಸಲಹೆಯಾಗಿದೆ.

 


Click Here To Download Kannada AP2TG App From PlayStore!