ತುಳಸಿ ಎಲೆಗಳನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟು ಆ ನೀರಿನಿಂದ ಬೆಳಿಗ್ಗೆ ಹೀಗೆ ಮಾಡಿದರೆ ಏನಾಗುತ್ತದೆ ಗೊತ್ತಾ…?

ತುಳಸಿ ಎಲೆಗಳು ಪ್ರಕೃತಿದತ್ತವಾಗಿ ಸಿಕ್ಕಿರುವ ದಿವ್ಯೌಷಧಿ. ಮಹಾಭಾರತದ ಕಾಲದಲ್ಲಿ ಘಟೋತ್ಕಜನು ಸಹ ಹೊರಲಾರದಂತಹ ಶ್ರೀ ಮಹಾವಿಷ್ಣುವನ್ನು ಒಂದು ತುಲಸಿ ಎಲೆ ಸರಿದೂಗಿಸಿದೆ. ಅಷ್ಟು ಉನ್ನತವಾದದ್ದು ಈ ತುಳಸಿ. ನಮ್ಮ ದೇಶದಲ್ಲಿ ತುಂಬಾ ಜನರು ತುಲಸಿ ಗಿಡವನ್ನು ದೈವವಂತೆ ಭಾವಿಸಿ ಪೂಜಿಸುತ್ತಾರೆ. ಪುರಾಣಗಳಲ್ಲಿ ಈ ಗಿಡಕ್ಕೆ ಒಂದು ಪ್ರತ್ಯೇಕವಾದ ಸ್ಥಾನವಿದೆ. ಇದು ನಮ್ಮ ಹಿತ್ತಲಲ್ಲಿ, ದೊರೆಯುವ ದಿವ್ಯೌಷದವೇ ಸರಿ… ಇದೆಲ್ಲಾ ತುಳಸಿ ಗಿಡಕ್ಕೆ ಇರುವ ಪ್ರಾಧಾನ್ಯತೆ, ಇನ್ನೂ ಇದರಲ್ಲಿರುವ ಔಷಧ ಗುಣಗಳೇನು, ಇದನ್ನು ಎಷ್ಟು ವಿಧವಾಗಿ ಉಪಯೋಗಿಸಿಕೊಳ್ಳಬಹುದು, ತಿಳಿದುಕೊಳ್ಳೋಣ.

 •  ಕೆಲವು ತುಳಸಿ ಎಲೆಗಳನ್ನು ನೀರಿನಲ್ಲಿ ರಾತ್ರಿಯೆಲ್ಲ ನೆನೆಸಿಟ್ಟು ಆ ನೀರಿನಿಂದ ಬೆಳಿಗ್ಗೆ ಹಲ್ಲುಜ್ಜಿದರೆ, ಬಾಯಿಯ ದುರ್ವಾಸನೆ, ಬಾಯಿಹುಣ್ಣುಗಳು ಕಡಿಮೆ ಆಗುತ್ತವೆ.
 • ಬೆಳಿಗ್ಗೆ ತುಳಸಿ ಎಲೆಗಳನ್ನು ಹಿಡಿಯಷ್ಟು ತೆಗೆದುಕೊಂಡು ಜಜ್ಜಿ ಕಷಾಯವಾಗಿ ಬೇಯಿಸಿಯಾದರೂ, ಅಥವಾ  ಆ ರಸದಲ್ಲಿ ಒಂದು ಚಮಚ ಜೇನುತುಪ್ಪ ಸೇರಿಸಿಯಾದರೂ ಕುಡಿದರೆ ಕಫಾ ಕಡಿಮೆಯಾಗುತ್ತದೆ.
 •  ತುಲಸಿ ಎಲೆಗಳ ರಸದಲ್ಲಿ ಜೀನುತುಪ್ಪ ಸೇರಿಸಿ ದಿನಕ್ಕೆರಡು ಬಾರಿ ತೆಗೆದುಕೊಂಡರೆ, ಕೆಮ್ಮು, ನೆಗಡೆ ಕಡಿಮೆಯಾಗುತ್ತದೆ.
 •  ಕಣ್ಣಿನ ಉರಿ, ಕಣ್ಣುಗಳಿಂದ ನೀರು ಸುರಿಯುವುದು, ಇಂತಹ ಸಮಸ್ಯೆಗಳಿಂದ ನರಳುತ್ತಿರುವವರಿಗೆ ತುಳಸಿಎಲೆಗಳ ರಸವನ್ನು, ಹತ್ತಿಯಿಂದ ಕಣ್ಣಿನ ರೆಪ್ಪೆ ಮೇಲೆ ಹಚ್ಚಿಕೊಳ್ಳಬೇಕು (ಕಣ್ಣಿನಲ್ಲಿ ಬೀಳದಂತೆ ಎಚ್ಚರ ವಹಿಸಿ)
 •  ತುಳಸಿ ಎಲೆಗಳ ರಸವು ಶರೀರದ ಉಷ್ಣತೆಯನ್ನು ಸಮತೋಲನದಲ್ಲಿಡುವ ಗೂಣವನ್ನೊಂದಿದೆ. ತುಳಸಿ ಎಲೆಗಳನ್ನು ಪುದೀನ ಎಲೆಗಳನ್ನು ಸೇರಿಸಿ ಕಷಾಯವಾಗಿ ತಯಾರಿಸಿ ಕುಡಿದರೆ ಜ್ವರ ಕಡಿಮೆಯಾಗುತ್ತದೆ.
 •  ತುಳಸಿಎಲೆಗಳನ್ನು ನೀರಿನಲ್ಲಿ ಹಾಕಿ, ಕುದಿಸಿ, ಆ ನೀರಿನಿಂದ ಬಾಯಿ ಮುಕ್ಕಳಿಸಿದರೆ, ಗಂಟಲಿನ ನೋವು ನಿವಾರಣೆಯಾಗುತ್ತದೆ.
 •  ನೆಗಡೆ, ಕೆಮ್ಮಿನಿಂದ ತೊಂದರೆ ಅನುಭವಿಸುತ್ತಿರುವವರು, ಒಂದು ಟೀಸ್ಪೂನ್  ಶುಂಠಿ, ಒಂದು ಟೀ ಸ್ಫೂನ್ ಮೆಣಸಿನಪುಡಿ, ಐದು-ಹತ್ತು ತುಳಸಿ ಎಲೆಗಳನ್ನು ಹಾಕಿ ಚೆನ್ನಾಗಿ ಕುದುಸಿ, ನೀರನ್ನು(ಕಷಾಯ) ಕುಡಿದರೆ ಒಳ್ಳೆಯದು.
 •  ತುಲಸೀ ರಸಕ್ಕೆ ಜೇನುತುಪ್ಪವನ್ನು ಸೇರಿಸಿ, ಒಂದು ಚಮಚ ಪ್ರತಿದಿನ ಕುಡಿದರೆ ಬಾಯಿಯಹುಣ್ಣು, ಗಂಟಲು ನೋವು, ಗಂಟಲಿನಲ್ಲಿ ಕರಕರ ಶಬ್ದ ನಿವಾರಣೆಯಾಗುತ್ತದೆ.
 •  ತುಳಸಿಎಲೆಗಳ ರಸ, ಈರುಳ್ಳಿರಸ, ಶುಂಠಿ ರಸ, ಜೇನುತುಪ್ಪ,  ಎಲ್ಲವನ್ನು ಸೇರಿಸಿ, ಆರು ದಿನಗಳ ಕಾಲ ಎರಡೊತ್ತು ಕುಡಿದರೆ, ಬೇಧಿ, ರಕ್ತಬೇಧಿಯನ್ನು ನಿಯಂತ್ರಿಸುತ್ತದೆ.
 •  ತುಳಸಿ ಶರಿರದಲ್ಲಿರುವ ಅಧಿಕ ಕೊಬ್ಬನ್ನು ನಿವಾರಣೆಮಾಡುತ್ತದೆ. ತುಳಸಿ ಎಲೆಗಳನ್ನು ಮಜ್ಜಿಗೆಯಲ್ಲಿ ಬೆರೆಸಿ ಸೇವಿಸಿದರೆ, ತೂಕ ಕಡಿಮೆಯಾಗುವರು.
 • ನಿದ್ರಾಹೀನತೆಯಿಂದ ಬಳಲುತ್ತಿರುವವರಿಗೆ ತುಳಸಿ ಎಲೆಗಳು ಉತ್ತಮ ಔಷಧಿ. ಕಾಡಿನ ತುಳಸಿ ರಸವನ್ನು ಸಕ್ಕರೆಯೊಂದಿಗೆ ಬೆರೆಸಿ, ಪ್ರತಿದಿನ ಮಲಗುವ ಮುನ್ನ ಎರಡು ಚಮಚದಷ್ಟು ಕುಡಿದರೆ ನಿದ್ರೆ ಚೆನ್ನಾಗಿ ಬರುವುದು.

Click Here To Download Kannada AP2TG App From PlayStore!