ಉಂಗುರ…. ಆ ಬೆರಳಿಗೇ ಯಾಕೆ ಧರಿಸುತ್ತಾರೆಂದು ಗೊತ್ತೇ ?

ಕೈ ಗಳಿಗಿರುವ ಪ್ರತಿಯೊಂದು ಬೆರಳಿಗೂ ಒಂದೊಂದು ಹೆಸರಿದೆ. ತೋರು ಬೆರಳು, ಮಧ್ಯ ಬೆರಳು, ಉಂಗುರದ ಬೆರಳು, ಕಿರು ಬೆರಳು, ಹೆಬ್ಬೆರಳು…. ಹೀಗೆ ಐದು ಬೆರಳುಗಳಿಗೂ ಐದು ವಿಭಿನ್ನ ಹೆಸರುಗಳಿವೆ. ಆದರೆ, ಇಷ್ಟು ಬೆರಳುಗಳಿರುವಾಗ, ಕೈ ಯ ನಾಲಕ್ಕನೇ ಬೆರಳಿಗೆ ಮಾತ್ರ ಉಂಗುರವನ್ನು ಏಕೆ ಧರಿಸುತ್ತಾರೆ ಎಂಬ ಪ್ರಶ್ನೆ ಅನೇಕರಲ್ಲಿ ಮೂಡುತ್ತದೆ. ವಾಸ್ತವವಾಗಿ ಆ ಬೆರಳನ್ನು ಸಂಸ್ಕೃತದಲ್ಲಿ ‘ಅನಾಮಿಕಾ’ಎಂದು ಕರೆಯುತ್ತಾರೆ. ಅಂದರೆ, ಹೆಸರಿಡದ ಬೆರಳು ಎಂದರ್ಥ. ಕಾಲ ಕ್ರಮೇಣ ಆ ಬೆರಳಿಗೆ ಉಂಗುರವನ್ನು ತೊಡಿಸುತ್ತಿದ್ದರಿಂದ ‘ಉಂಗುರದ ಬೆರಳು’ ಎಂದು ಕರೆಯಲಾರಂಭಿಸಿದರು.

ಇಷ್ಟು ಬೆರಳುಗಳಿರುವಾಗ,ಆ ಬೆರಳಿಗೇ ಯಾಕೆ ಉಂಗುರವನ್ನು ತೊಡುತ್ತಾರೆಂದರೆ…ನಮ್ಮ ‘ಕೈ’ನಲ್ಲಿರುವ ಉಂಗುರದ ಬೆರಳಿಗೂ, ಕಿವಿಗೂ ಸಂಬಂಧವಿದೆ. ಒಮ್ಮೆ ನೀವು ಉಂಗುರದ ಬೆರಳನ್ನು ಒತ್ತಿ ನೋಡಿ. ಬಲಗೈ ಬೆರಳು ಒತ್ತಿದರೆ ಬಲಕಿವಿ,ಅದೇ ರೀತಿ ಎಡಗೈ ಬೆರಳು ಒತ್ತಿದರೆ, ಎಡಕಿವಿ ಸ್ಪಂಧಿಸುತ್ತದೆ. ಅನಾದಿ ಕಾಲದಲ್ಲೇ ನಮ್ಮ ಜನ ಹೆಣ್ಣು ,ಗಂಡು ಎಂಬ ತಾರತಮ್ಯ ಮಾಡದೆ,ಕಿವಿಗಳನ್ನು ಚುಚ್ಚಿಸಿಕೊಂಡು ಆಭರಣಗಳನ್ನು ಧರಿಸುತ್ತಿದ್ದರು. ಆದುದರಿದಲೇ ಅದನ್ನು ಸಮತೋಲನಗೊಳಿಸಲು ‘ಕೈ’ಯ ನಾಲಕ್ಕನೇ ಬೆರಳಿಗೆ ಉಂಗುರ ಧರಿಸುವುದನ್ನು ಪ್ರಾರಂಭಿಸಿದರಂತೆ. ಇಷ್ಟೇ ಅಲ್ಲ.ಉಂಗುರವನ್ನು ಬಲಗೈಗೇ ಧರಿಸುತ್ತಿದ್ದರು. ಅದೂ ಕೇವಲ ತಾಮ್ರದ ಉಂಗುರವನ್ನು… ಯಾಕೆಂದರೆ, ಬಹಳಷ್ಟು ಮಂದಿ ಬಲಗೈಯಿಂದಲೇ ಊಟ ಮಾಡುತ್ತಾರೆ. ಆಹಾರದಲ್ಲಿ ವಿಷಸೇರಿದ್ದರೆ ಅನ್ನಕ್ಕೆ ಕೈಯಿಡುವಾಗಲೇ ಉಂಗುರ ಸ್ವಲ್ಪ ನೀಲಿ ಬಣ್ಣಕ್ಕೆ ತಿರುಗುತ್ತದಂತೆ. ಆದ್ದರಿದಲೇ ನಮ್ಮ ಪೂರ್ವಜರು ತಾಮ್ರದ ಉಂಗುರವನ್ನು ಬಲಗೈಯ ನಾಲಕ್ಕನೆ ಬೆರಳಿಗೇ ಧರಿಸುತ್ತಿದ್ದರಂತೆ.
ಮತ್ತೊಂದು ವಿಷಯವೇನೆಂದರೆ….ಕೆಲವರು ಯಾವುದೋ ವಿಷಯವಾಗಿ ತೀವ್ರವಾಗಿ ಯೋಚಿಸುತ್ತಾ, ಅವರಿಗೆ ತಿಳಿಯದೆಯೇ ಉಂಗುರವನ್ನು ಬೆರಳಿನಲ್ಲಿ ಹಿಂದೆ ಮುಂದೆ ಸರಿಸುತ್ತಿರುತ್ತಾರೆ. ಹೀಗೆ ಮಾಡುವುದು ಸಹ ಒಳ್ಳೆಯದಂತೆ. ಉಂಗುರವನ್ನು ಹಾಗೆ ಸರಿಸುವುದರಿಂದ ,ಬೆರಳಿನ ಮೇಲೆ ಬೀಳುವ ಒತ್ತಡದಿಂದಾಗಿ,ಮೂತ್ರ ಪಿಂಡಗಳು ಹಾಗು ನರಮಂಡಲ ಉತ್ತೇಜನಗೊಂಡು ಸಕ್ರಮವಾಗಿ ಕಾರ್ಯ ನಿರ್ವಹಿಸುತ್ತವಂತೆ. ಆದುದರಿಂದ ಉಂಗುರವನ್ನು ಕೇವಲ ಆಭರಣವಾಗಿ ಅಲ್ಲದೆ ಆರೋಗ್ಯದಾಯಕವಾಗಿಯೂ ಉಪಯೊಗಿಸುವುದು ಉತ್ತಮ.


Click Here To Download Kannada AP2TG App From PlayStore!

Share this post

scroll to top