ಮಹಿಳೆಯರೇ ಹುಷಾರ್!ಕಾಣದ ಕ್ಯಾಮೆರಾಗಳು ನಿಮ್ಮ ಬಾತ ರೂಮಿನವರೆಗೂ ಬರುತ್ತಿವೆ.

ಸಮಾಜದಲ್ಲಿರುವ ಕೆಲವೊಂದು ಜನರ ಮನಸ್ಸು ಎಷ್ಟೊಂದು ವಿಕೃತಿಗೆ ತಲುಪಿದೆ ಎಂಬುದು ತಿಳಿದುಕೊಳ್ಳುವದು ತುಂಬಾನೇ ಕಷ್ಟ. ಮಹಿಳೆಯರು ಮನೆಯ ಹೊರಗೆ ಮೈಯೆಲ್ಲ ಕಣ್ಣಾಗಿ ಇದ್ದರೂ ಸಹ ವಿಕೃತ ಮನಸ್ಸಿನ ಜನ ಏನೆಲ್ಲ ನೋಡುತ್ತಿರುತ್ತಾರೆ ಹಾಗೂ ಏನೆಲ್ಲ ವೀಡಿಯೊ ಮಾಡಿಕೊಳ್ಳುತ್ತಿರುತ್ತಾರೆ ಎಂಬುದು ಗಮನಕ್ಕೆ ಬರುವದಿಲ್ಲ. ಇನ್ನು ಸ್ವಂತ ಮನೆಯಲ್ಲಿಯೂ ಸಹ ಇಂಥ ಘಟನೆಗಳು ನಡೆದಾಗ ಎಷ್ಟೊಂದು ಜಾಗರೂಕರಾಗಿರಬೇಕು ಎಂದು ನೀವೇ ಯೋಚಿಸಿ. ಅದರಲ್ಲೂ ಈ ಸ್ಮಾರ್ಟ್ ಫೋನ್ ಯುಗದಲ್ಲಿ ಎಲ್ಲರ ಕೈಯಲ್ಲೂ ಒಳ್ಳೊಳ್ಳೆಯ ಮೊಬೈಲ್ ಬಂದು ಮಹಿಳೆಯರ ಸ್ವಾತಂತ್ರ್ಯಕ್ಕೆ ಮತ್ತಷ್ಟು ಧಕ್ಕೆ ಬಂದಿದೆ ಎನ್ನಬಹುದು.

ಘಟನೆ ಉತ್ತರಪ್ರದೇಶದ ಬದಾಯುನಲ್ಲಿ ನಡೆದಿದೆ. B.A ನಲ್ಲಿ ವ್ಯಾಸಂಗ ಮಾಡುತ್ತಿರುವ ಹುಡುಗಿ ತನ್ನ ಮನೆಯ ಬಾತ್ ರೂಮಿನಲ್ಲಿ ಸ್ನಾನ ಮಾಡುವಾಗ ನೆರೆಮನೆಯ ಯುವಕನೋರ್ವ ಅವಳ ಅಶ್ಲೀಲ ವೀಡಿಯೊ ಮಾಡುತ್ತಿದ್ದ. ಇದು ಹುಡುಗಿಯ ಗಮನಕ್ಕೆ ಬಂದದ್ದು ನೋಡಿ ಯುವಕ ತಕ್ಷಣ ಅಲ್ಲಿಂದ ಪರಾರಿಯಾದ. ಆದರೆ ಹುಡುಗಿ ಮಾತ್ರ ಸುಮ್ಮನೆ ಕೂಡದೆ ಮನೆಯವರಿಗೆ ವಿಷಯ ತಿಳಿಸಿ ಸಂಬಂಧಿತ ವ್ಯಕ್ತಿಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಂತರ ಪೊಲೀಸರ ಜೊತೆಗೆ ಆ ಯುವಕನ ಮನೆಗೆ ಹೋಗಲು ಯುವಕ ಮನೆಯಲ್ಲಿಯೇ ಇದ್ದ. ಆತನ ಕೈಯಿಂದ ಮೊಬೈಲ್ ನ್ನು ಕಸಿದುಕೊಂಡು ಚೆಕ್ ಮಾಡಲಾಗಿ ಆರೋಪಿ ಅವಳ 5 ರಿಂದ 6 ನಿಮಿಷದ ವೀಡಿಯೊ ರಿಕಾರ್ಡಿಂಗ್ ಮಾಡಿದ್ದನು. ಆಮೇಲೆ ಹುಡುಗಿಯ ಪೋಷಕರು ಆರೋಪಿಯ ಮೊಬೈಲ್ ನ್ನು ಪೊಲೀಸರಿಗೆ ಒಪ್ಪಿಸಿ ಅವನ ವಿರುದ್ಧ ಯೋಗ್ಯ ಪರಿಶೀಲನೆ ನಡೆಸಬೇಕು ಎಂದು S S P ಆಫೀಸ್ ಮುಂದೆ ಧರಣಿ ಸಹ ನಡೆಸಿದ್ದಾರೆ.