ನಿಮ್ಮ ಮೂತ್ರದ ಬಣ್ಣ ನಿಮ್ಮ ಆರೋಗ್ಯವನ್ನು ಸೂಚಿಸುತ್ತದೆ. ನಿಮ್ಮ ಹೆಲ್ತ್ ಚೆಕ್ ಮಾಡಿಕೊಳ್ಳಿ.

ನಿಮ್ಮ ಮೂತ್ರದ ಬಣ್ಣ ನಿಮ್ಮ ಆರೋಗ್ಯವನ್ನು ಸೂಚಿಸುತ್ತದೆ. ಹೌದು ಇದು ಅಕ್ಷರಶಃ ಸತ್ಯ. ಮಾನವ ದೇಹದಲ್ಲಿನ ವ್ಯರ್ಥ ಪದಾರ್ಥಗಳ ಸಂಗ್ರಹವೇ ಮೂತ್ರ. ಇದರಲ್ಲಿ ಅಮೋನಿಯಾ ಆಮ್ಲಗಳು, ಯೂರಿಯಾದಂತಹ ವ್ಯರ್ಥ ಪದಾರ್ಥಗಳಿರುತ್ತವೆ. ದೇಹದ ಬೆಳವಣಿಗೆಗೆ ನಾವು ತೆಗೆದುಕೊಳ್ಳುವ ಆಹಾರ ಪಾನೀಯಗಳನ್ನು ಮೂತ್ರಕೋಶಗಳು ಶೋಧಿಸಿದ ಬಳಿಕ ವ್ಯರ್ಥಗಳು ಹೊರಗೆ ವಿಸರ್ಜಿಸಲ್ಪಡುತ್ತವೆ. ಹೊರಗೆ ಬಂದ ಆ ಮೂತ್ರದ ಬಣ್ಣ ನೋಡಿ ನಾವು ಆರೋಗ್ಯವಾಗಿ ಎಷ್ಟು ಫಿಟ್ ಆಗಿ ಇದೀವಿ ಅಂತ ತಿಳಿದುಕೊಳ್ಳಬಹುದು.

ಕೆಳಗೆ ತಿಳಿಸಿದ ಮೂತ್ರದ ಬಣ್ಣವನ್ನು ಅನುಸರಿಸಿ ಯಾವ ರೀತಿಯ ಆರೋಗ್ಯ ಸಮಸ್ಯೆಗಳು ತಲೆಯೆತ್ತುತ್ತವೆ ಎಂದು ತಿಳಿದುಕೊಳ್ಳಿ:

1. ಸ್ಪಷ್ಟವಾದ ಮೂತ್ರ:
ಈ ರೀತಿಯ ಮೂತ್ರ ಹೊಂದಿರುವವರು ಅತಿಮೂತ್ರ ವ್ಯಾಧಿ ಇರುವವರು. ಮಧುಮೇಹಿಗಳು ಆಗಾಗ ಮೂತ್ರಕ್ಕೆ ಹೋಗುವುದರಿಂದ ನೀರು ಹೆಚ್ಚಾಗಿ ಹೊರಗೆ ಹೋಗುತ್ತದೆ. ಇದರ ಕಾರಣ ದಾಹ ಹೆಚ್ಚಾಗುತ್ತದೆ, ನಿದ್ರಾ ಸಮಯದಲ್ಲಿ ನಿದ್ದೆಯಿಂದ ಎಚ್ಚೆತ್ತುಕೊಳ್ಳುತ್ತಾ ಇರುತ್ತಾರೆ. ಸರಿಯಾಗಿ ನಿದ್ದೆ ಹೋಗಲ್ಲ.

2. ದಟ್ಟವಾದ ಹಳದಿ ಮೂತ್ರ:
ಮೂತ್ರ ವಿಸರ್ಜನೆ ಬಣ್ಣ ಹಳದಿ ಅಥವಾ ದಟ್ಟವಾದ ಹಳದಿ ಬಣ್ಣದಲ್ಲಿ ಇದ್ದರೆ ಅಂತಹವರು ಹೆಚ್ಚಾಗಿ ನೀರು ತೆಗೆದುಕೊಳ್ಳಬೇಕು.

3. ನಿಯಾನ್ ಹಳದಿ ಬಣ್ಣ:
ಈ ರೀತಿಯ ಮೂತ್ರದ ಬಣ್ಣ ಇರುವವರು ಆತಂಕಪಡುವ ಅಗತ್ಯವಿಲ್ಲ. ವಿಟಮಿನ್ ಬಿ, ವಿಟಮಿನ್ ಸಿ ಆಹಾರ ಪದಾರ್ಥಗಳು ತೆಗೆದುಕೊಂಡರೆ ಇದು ಹೆಚ್ಚು ಕಾಲ ಇರಲ್ಲ. ಆ ರೀತಿ ಮೂತ್ರ ವಿಸರ್ಜನೆ ನಡೆಯುತ್ತಿದ್ದಾಗ ಅದು ಕಡಿಮೆಯಾಗುತ್ತದೆ.

4. ಆರೇಂಜ್ ಬಣ್ಣದ ಮೂತ್ರ:
ನಿರ್ಜಲೀಕರಣ ಅಥವಾ ಉಪ್ಪು ಹೆಚ್ಚಾಗಿರುವ ಆಹಾರ ಪದಾರ್ಥಗಳನ್ನು ತೆಗೆದುಕೊಳ್ಳುವುದರಿಂದ ಈ ಬಣ್ಣ ಬರುತ್ತದೆ. ಇದು ಕಾಮಾಲೆ ರೋಗಕ್ಕೆ ದಾರಿಯಾಗುತ್ತದೆ.

5. ನೀಲಿ ಬಣ್ಣದಲ್ಲಿ:
ತೆಗೆದುಕೊಳ್ಳುವ ಆಹಾರ ಮತ್ತು ಕೆಲವು ವಿಧದ ಔಷಧಿಗಳನ್ನು ತೆಗೆದುಕೊಳ್ಳುವುದರಿಂದ ಈ ಬಣ್ಣಕ್ಕೆ ಕಾರಣವಾಗುತ್ತದೆ.

6. ಕೆಂಪು ಬಣ್ಣದ ಮೂತ್ರ:
ಈ ವಿಧವಾಗಿ ಇದ್ದರೆ ಸಹಜವಾದ ಆಹಾರವೇ ಕಾರಣ. ಇದು ಕೆಲವು ಸಲ ಈ ರೀತಿ ಇರುವುದು ಮತ್ತೆ ಬಿಸಿಯಾಗಿರುವ ಕಾರಣ ಪಿತ್ತಕೋಶದಲ್ಲಿ ಕಲ್ಲು, ಕಿಡ್ನಿ ಸಮಸ್ಯೆಗಳು ತಲೆಯೆತ್ತುತ್ತವೆ.

7. ಎಲೆ ಹಸಿರು ಮೂತ್ರ:
ಸೂಡೋಮೊನಾಸ್ ಎರುಗಿನೋಸ್ ಎಂಬ ಬ್ಯಾಕ್ಟೀರಿಯಾದಿಂದ ಮೂತ್ರ ಈ ಬಣ್ಣಕ್ಕೆ ತಿರುಗುತ್ತದೆ. ಪಾರ್ಕಿನ್ಸನ್ಸ್ ಎಂಬ ರೋಗ ಮತ್ತು ವಿಚಾರ ವ್ಯತಿರೇಕ ಔಷಧಿಗಳಿಂದ ಸಹ ಈ ಬಣ್ಣಕ್ಕೆ ಕಾರಣವಾಗಬಹುದು.

 


Click Here To Download Kannada AP2TG App From PlayStore!