ನೀವು ಮೂತ್ರಮಾಡುವಾಗ ನೊರೆ ಬರುತ್ತಿದೆಯೇ? ಹಾಗಾದರೆ ಇದನ್ನು ತಪ್ಪದೆ ತಿಳಿದುಕೊಳ್ಳಿ!!

ಮೂತ್ರವು ಸಹ ಅರೋಗ್ಯವನ್ನು ಸೂಚಿಸುತ್ತದೆಂದು, ಆರೋಗ್ಯದ ಬಗ್ಗೆ ಕಾಳಜಿಯುಳ್ಳವರಿಗೆ ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. ನಮಗೆ ಬರುವ,ಬರಬಹದಾದ ಅನೇಕ ಕಾಯಿಲೆಗಳನ್ನು ಮೂತ್ರ ಪರೀಕ್ಷೆಯ ಮೂಲಕ ಕಂಡುಹಿಡಿಯುತ್ತಾರೆ. ಮೂತ್ರದ ಬಣ್ಣ ಸ್ವಚ್ಛವಾಗಿದ್ದಲ್ಲಿ ನೀವು ಆರೋಗ್ಯವಾಗಿದ್ದೀರೆಂಬುದನ್ನು ಸೂಚಿಸುತ್ತದೆ. ಒಂದು ವೇಳೆ ಮೂತ್ರದ ಬಣ್ಣ ಗಾಢವಾಗಿದ್ದು, ದುರ್ವಾಸನೆಯಿಮದ ಕೂಡಿದ್ದು,ನೊರೆನೊರೆ ಯಾಗಿದ್ದರೆ… ನಿಮಗೆ ಯಾವುದೋ ಒಂದು ಆರೋಗ್ಯ ಸಮಸ್ಯೆ ಕಾಡುತ್ತಿದೆಯೆಂಬುದನ್ನು ಸೂಚಿಸುತ್ತದೆ. ಕೆಲಸದ ಒತ್ತಡದಿಂದಾಗಿ, ಜೋರಾಗಿ ಮೂತ್ರ ಮಾಡಿದರೂ ನೊರೆ ಬರುವ ಸಾಧ್ಯತೆಯಿದೆ. ಹಾಗೆಯೇ ಮೂತ್ರ ಪಾತ್ರೆ( ಯೂರಿನಲ್ಸ್) ಯನ್ನು ರಾಸಾಯನಿಕಗಳಿಂದ ತೊಳೆದ ನಂತರ ಮೂತ್ರ ಮಾಡಿದರೂ , ಮೂತ್ರ ನೊರೆಯುಕ್ತವಾಗಿರುತ್ತದೆ . ಇದರಿಂದ ಸಮಸ್ಯೆ ಏನೂ ಇಲ್ಲ. ಆದರೆ, ಕೆಲವು ಸಂದರ್ಭಗಳಲ್ಲಿ ಮೂತ್ರ ನೊರೆಯಿಂದ ಕೂಡಿದ್ದರೆ, ಯಾವ ಸಮಸ್ಯೆಗಳಿವೆ ಎಂಬುದನ್ನು ತಿಳಿದುಕೊಳ್ಳೊಣ.

  •  ಮಾನಸಿಕ ಒತ್ತಡ, ಡಿಪ್ರೆಶನ್ ನಲ್ಲಿರುವವರಿಗೆ ಮೂತ್ರ ನೊರೆಯುಕ್ತ ವಾಗಿರುತ್ತದೆ. ಡೀ ಹೈಡ್ರೇಷನ್ ನಿಂದಾಗಿಯೂ ಬರಬಹುದು. ಡೀ ಹೈಡ್ರೇಷನ್ ಆದರೆ , ಮೂತ್ರದಲ್ಲಿ ಪ್ರೊಟೀನ್ ಗಳು, ಕೆಲವು ರಾಸಾಯನಿಕಗಳು ಹೆಚ್ಚಾಗುತ್ತವೆ. ಆದುದರಿಂದ ಡೀ ಹೈಡ್ರೇಷನ್ ನಿವಾರಿಸಿಕೊಳ್ಳಲು ನೀರನ್ನು ಹೆಚ್ಚಾಗಿ ಸೇವಿಸಬೇಕು.
  • ಗರ್ಭಧಾರಣೆ ಸಮಯದಲ್ಲಿ ನೊರೆಯುಕ್ತ ಮೂತ್ರ ಹೋಗುವುದು ಸಹಜ. ಗರ್ಭ ಧರಿಸಿರುವಾಗ ಶ್ವಾಸಕೋಶಗಳು ಹೆಚ್ಚು ಕೆಲಸ ಮಾಡಬೇಕಾಗಿ ಬರುವುದರಿಂದ, ಪ್ರೋಟೀನ್ ಮೂತ್ರದಲ್ಲಿ ಹೋಗಿ ನೊರೆ ಬರುತ್ತದೆ.
  • ಅವಸರದಲ್ಲಿರುವಾಗ, ಇಲ್ಲವೇ ಕೆಲಸದ ಒತ್ತಡ ಹೆಚ್ಚಾದಾಗ ನೊರೆ ರೂಪದಲ್ಲಿ ಮೂತ್ರ ಹೋಗುತ್ತದೆ. ಯೂರಿನ್ ನಲ್ಲಿರುವ ಪ್ರೊಟೀನ್, ಆಲ್ಬುಮಿನ್ ಕಾರಣ ವಾಗಿರಬಹುದು. ಮೂತ್ರಪಿಂಡಗಳು ಅಧಿಕ ಒತ್ತಡಕ್ಕೆ ಗುರಿಯಾದರೆ, ಮೂತ್ರದ ಮೂಲಕ ಪ್ರೊಟೀನ್ ವಿಸರ್ಜಿಸಲ್ಪಡುತ್ತದೆ.
  • ಸಕ್ಕರೆ ಕಾಯಿಲೆಯ ಪ್ರಭಾವ ಮೂತ್ರಪಿಂಡಗಳ ಮೇಲಿರುತ್ತದೆ. ಆಗಲೂ ಸಹ ಮೂತ್ರ ನೊರೆಯಿಂದ ಕೂಡಿರುತ್ತದೆ. ಅಧಿಕ ಸಕ್ಕರೆ ಪ್ರಮಾಣ ಮೂತ್ರಪಿಂಡಗಳಿಗೆ ಕೇಡನ್ನು ಉಂಟುಮಾಡುತ್ತದೆ.
  • ಮೂತ್ರದಲ್ಲಿ ಪ್ರೊಟೀನ್ ಲೆವಲ್ ಅಧಿಕವಾಗಿದ್ದರೆ… ಆ ಸ್ಥಿತಿಯನ್ನು ಪ್ರೊಟೀನ್ಯೂರಿಯಾ ಎನ್ನುತ್ತಾರೆ. ಮೂತ್ರ ಪಿಂಡಗಳು ಪ್ರೊಟೀನನ್ನು ಸರಿಯಾಗಿ ಸೋಸದಿದ್ದರೆ, ಈ ಸ್ಥಿತಿ ಉಂಟಾಗುತ್ತದೆ. ಒಡನೆಯೇ ವೈದ್ಯರನ್ನು ಸಂಪರ್ಕಿಸಬೇಕು.
  • ಮೂತ್ರ ನಾಳ ಬ್ಯಾಕ್ಟೀರಿಯ ಸೋಂಕಿನಿದ ಕೂಡಿದ್ದರೂ ಮೂತ್ರ ನೊರೆಯುಕ್ತವಾಗಿರಯತ್ತದೆ.
  • ಮೂತ್ರ ನೊರೆಯಿಂದ ಕೂಡಿದ್ದರೆ ಹೃದಯ ಸಮಸ್ಯೆಯ ಲಕ್ಷಣವಾಗಿರಲೂ ಬಹುದು. ಮೂತ್ರದಲ್ಲಿ ಪ್ರೊಟೀನ್ ಮಟ್ಟ ಹೆಚ್ಚಾಗಿದ್ದರೆ ಹೃದಯಾಘಾತ ಉಂಟಗಲೂ ಬಹುದು.
  •  ಆದುದರಿಂದ ಮೂತ್ರ ನೊರೆಯಿಂದ ಕೂಡಿದ್ದರೆ, ವೈದ್ಯರನ್ನು ಸಂಪರ್ಕಿಸುವುದು ಒಳಿತು.

 


Click Here To Download Kannada AP2TG App From PlayStore!