ಕಾಫಿಯಲ್ಲಿ ಈ ಮಿಶ್ರಣವನ್ನು ಸೇರಿಸಿ ಕುಡಿದರೆ…ತಿಂಗಳಿಗೆ 5-7 ಕೆ.ಜಿ.ತೂಕ ಕಡಿಮೆಯಾಗುತ್ತೆ.

ಚುಮುಚುಮು ಚಳಿಯಲ್ಲಿ ಬಿಸಿ ಬಿಸಿ ಕಾಫಿ ಕುಡಿದರೆ ಅದರ ಮಜಾನೇ ಬೇರೆಯಾಗಿರುತ್ತಲ್ಲವೇ? ಒಂದೊಂದು ಗುಟುಕನ್ನೂ ಚಪ್ಪರಿಸಿ ಹೀರುತ್ತಿದ್ದರೆ… ವಾಹ್…ಅದರ ರುಚಿಯನ್ನು ವರ್ಣಿಸಲಾಗದು. ಬಹಳಷ್ಟು ಜನ ಕಾಫಿ ಸೇವಿಸಿದ ನಂತರವೇ ತಮ್ಮ ದಿನವನ್ನು ಪ್ರಾರಂಭಿಸುತ್ತಾರೆ. ಹಾಸಿಗೆಯಲ್ಲೇ ಬಿಸಿ ಬಿಸಿ ಕಾಫಿ ಕುಡಿಯದಿದ್ದರೆ ಕೆಲವರ ದಿನಚರಿ ಪ್ರಾರಂಭವಾಗುವುದಿಲ್ಲ. ನೀವು ಕಾಫಿ ಹೇಗೇ ಕುಡಿಯಿರಿ.ಈಗ ನಾವು ಹೇಳಹೊರಟಿರುವ ಒಂದು ಮಿಶ್ರಣವನ್ನು ಕಲೆಸಿ ಕುಡಿಯಿರಿ.ಕೆಲವು ದಿನಗಳಲ್ಲಿ ಎಂತಹ ಪರಿಣಾಮ ಉಂಟಾಗುತ್ತದೆಂದು ನೀವೇ ನೋಡಿ. ಹೀಗೆ ಕುಡಿಯುವುದರಿಂದ ನಿಮ್ಮ ಹೊಟ್ಟೆಯ ಸುತ್ತಲಿರುವ ಕೊಬ್ಬಲ್ಲದೇ ಶರೀರದಲ್ಲಿರುವ ಕೊಬ್ಬು ಸಹ ಕರಿಹೊಗುತ್ತದಂತೆ. ತಿಂಗಳಿಗೆ 5-7 ಕೆ.ಜಿ ತೂಕ ಕಡಿಮೆಯಾಗುತ್ತದೆಂದು ನಾವು ಹೇಳುವುದಲ್ಲ. ಹಲವಾರು ವಿಜ್ಞಾನಿಗಳ ಪ್ರಯೋಗಗಳ ಮೂಲಕ ಕಂಡುಕೊಂಡ ಫಲಿತಾಂಶವಿದು.

ಕಾಫಿಯಲ್ಲಿ ಕಲೆಸಬೇಕಾದ ಮಿಶ್ರಣ :

3/4 ಕಪ್ ಅಡುಗೆಗೆ ಬಳಸುವ ಕೊಬ್ಬರಿಎಣ್ಣೆ,1 ಚಮಚ ದಾಲ್ಚಿನ್ನೀ ಚಕ್ಕೆ ಇವೆರಡನ್ನೂ ಚೆನ್ನಾಗಿ ಕಲೆಸಿ ಪೇಸ್ಟ್ ತಯಾರಿಸಿಕೊಳ್ಳುವುದು.ಬೇಕಾದರೆ ಜೇನು,ಕೊಕ್ಕೋ ಪೌಡರ್ ಸಹ ಸೇರಿಸಬಹುದು. ಈ ರೀತಿಯಾಗಿ ತಯಾರಿಸಿದ ಮಿಶ್ರಣವನ್ನು ಒಂದು ಬಾಟಲಿಯಲ್ಲಿ ಹಾಕಿ ಪ್ರಿಜ್ ನಲ್ಲಿಡಿ.ಪ್ರತಿ ದಿನ ನೀವು ಕಾಫಿ ಕುಡಿಯುವಾಗ ಒಂದು ಸ್ಪೂನ್ ಈ ಮಿಶ್ರಣವನ್ನು ಕಾಫಿಯಲ್ಲಿ ಹಾಕಿ ಕುಡಿಯಿರಿ. ನಂತರ ನಿಮ್ಮ ಶರೀರದಲ್ಲಿ ಆಗುವ ಬದಲಾವಣೆಗಳು ನಿಮ್ಮ ಗಮನಕ್ಕೆ ಬರುತ್ತವೆ.

fat-reduce

ಮೇಲೆ ತಿಳಿಸಿದಂತೆ ಕನಿಷ್ಟ ಒಂದು ತಿಂಗಳು ಕುಡಿದರೆ ನಮ್ಮ ಶರೀರದ ತೂಕ 5 ರಿಂದ 7 ಕೆ.ಜಿ ಗಳಷ್ಟು ಕಡಿಮೆಯಾಗುತ್ತಂತೆ. ಅಮೆರಿಕಾ ದೇಶದ ಒಂದು ವಿಶ್ವವಿದ್ಯಾನಿಲಯ ವಿಜ್ಞಾನಿಗಳ ಗುಂಪು ನಡೆಸಿದ ಪ್ರಯೋಗಗಳಲ್ಲಿ ಈ ವಿಷಯ ತಿಳಿದು ಬಂದಿತಂತೆ. ಕಾಫೀ,ಕೊಬ್ಬರಿ ಎಣ್ಣೆ,ದಾಲ್ಚಿನ್ನಿ ಚಕ್ಕೆ, ಇವುಗಳಲ್ಲಿ ಬಹಳಷ್ಟು ಔಷದೀಯ ಗುಣಗಳಿದ್ದು, ಇವುಗಳ ಮಿಶ್ರಣವನ್ನು ಸೇವಿಸಿದಲ್ಲಿ ಶರೀರದಲ್ಲಿ ಅಧಿಕವಾಗಿ ಶೇಖರಣೆಗೊಂಡಿರುವ ಕೊಬ್ಬು ಕರಗಿ ಹೋಗಿ ದಿನವಿಡೀ ಲವಲವಿಕೆಯಿಂದ ಇರಲು ಸಾಧ್ಯವಾಗುತ್ತದಂತೆ.


Click Here To Download Kannada AP2TG App From PlayStore!

Share this post

scroll to top