ತಮ್ಮ ತಲೆಕೂದಲನ್ನು ಮಾರಿ, ಕುಟುಂಬದ ಹಸಿವನ್ನು ನೀಗಿಸುತ್ತಿರುವ ವೆನಿಜುಲಾದ ಮಹಿಳೆಯರು…!

ವೆನಿಜುಲಾ ಎಂಬ ದೇಶ ಸಹಜ ಸಂಪತ್ತಿಗೆ ಇಟ್ಟಂತಹ ಹೆಸರಾಗಿದೆ. ಅಲ್ಲಿ ಪೆಟ್ರೋಲಿಯಂ ಸಂಪನ್ಮೂಲಗಳಿಗೆ ಬರವಿಲ್ಲ. ಆದರೂ ಹೊಸದಾಗಿ ತಲೆ ಎತ್ತಿದ ಆರ್ಥಿಕ ದುಃಸ್ಥಿತಿ, ವೆನಿಜುಲಾವನ್ನು ಪೀಡಿಸುತ್ತಿದೆ. ಅಲ್ಲಿನ ಪರಿಸ್ಥಿತಿಗಳು ಎಷ್ಟು ಅಮಾನುಷವಾಗಿವೆ ಎಂದರೆ ಹಸಿವನ್ನು ತಡೆಯಲಾರದೆ, ಸರಕುಗಳನ್ನು ಕೊಂಡುಕೊಳ್ಳಲು ಹಣವಿಲ್ಲದೆ, ಕೆಲಸ ಸಿಗದೆ, ಮಹಿಳೆಯರು ತಮ್ಮ ತಲೆ ಕೂದಲನ್ನು ಮಾರಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ. 18  ವರ್ಷ ವಯಸ್ಸಿನ ಯುವತಿಯರಿಂದ ಹಿಡಿದು 60 ವರ್ಷ ವಯಸ್ಸಿನ ಮುದುಕಿಯರವರೆಗೂ, ಸ್ತ್ರೀಯರು ರಸ್ತೆಯ ನಡುವೆ ಬಂದು ತಮ್ಮ ಕೂದಲನ್ನು ಮಾರಿಕೊಳ್ಳುತ್ತಿದ್ದಾರೆ.

ಇನ್ನೂ ಕೆಲವು ಪ್ರದೇಶಗಳಲ್ಲಿ ಪರಿಸ್ಥಿತಿ ನೋಡುವುದಾದರೆ, ತುಂಬಾ ದಯನೀಯವಾಗಿದೆ. ಕೆಲವರು ಮಧ್ಯವರ್ತಿಗಳು ಬೀದಿಗಳಲ್ಲಿ ಬಂದು ಹುಡುಗಿಯರ ಕೂದಲನ್ನು ಮೀಟರ್’ಗಳ ಅಳತೆಯಂತೆ ಕೊಂಡುಕೊಳ್ಳುತ್ತಿದ್ದಾರೆ. ಹಣಕ್ಕಾಗಿ ಕೆಲವು ಪುಂಡರ ಗುಂಪುಗಳು ಹೊರಗೆ ಹುಡುಗಿಯರು ಕಾಣಿಸಿದರೆ ಸಾಕು ಅವರನ್ನು ಕೊಂಡೊಯ್ದು, ಕೂದಲನ್ನು ಕತ್ತರಿಸಿ ಕಳುಹಿಸುತ್ತಿದ್ದಾರಂತೆ ವೆನಿಜುಲಾದಲ್ಲಿನ ಇನ್ನೂ ಕೆಲವು ಪ್ರದೇಶಗಳಲ್ಲತ್ತೋ ಈ ಪರಿಸ್ಥಿತಿ ಇನ್ನೂ ಗಂಭೀರವಾಗಿದೆ.

ಹಸಿವನ್ನು ತಾಳಲರದೆ ಕೆಲವರು ಅಲ್ಲಿರುವ ಬೇಕರಿಗಳು, ಹೋಟೆಲ್’ಗಳ ಮೇಲೆ ಧಾಳಿ ಮಾಡುತ್ತಿದ್ದಾರೆ. ಆರ್ಥಿಕ ದುಃಸ್ಥಿತಿಗೆ ತಡೆಯನ್ನು ಹಾಕುವುದರಲ್ಲಿ ಅಲ್ಲಿನ ಸರ್ಕಾರ ಪೂರ್ತಿಯಾಗಿ ವಿಫಲವಾಗಿದೆ. ಸರ್ಕಾರಿ ಟ್ರಕ್ ಗಳಲ್ಲಿ ಸರಬರಾಜಾಗುತ್ತಿರುವ ಆಹಾರವು ಸಾಕಾಗದೆ, ಪರಿಸ್ಥಿತಿ ಇನ್ನೂ ಕೈಜಾರಿದಂತಾಗಿದೆ. ಇದರ ಕಾರಣವಾಗಿ ವೆನಿಜುಲಾದಲ್ಲಿ ಪ್ರತಿಕುಟುಂಬವು ಆ ಕುಟುಂಬದ ಸ್ತ್ರೀಯರ ಕೂದಲನ್ನು ಮೇಲೆ ಆಧಾರವಾಗಿದೆ.


Click Here To Download Kannada AP2TG App From PlayStore!

Share this post

scroll to top