ವಿಮಾನಗಳಿಗೆ ಬಿಳಿಯ ಬಣ್ಣವನ್ನೇ ಹಚ್ಚಲು ಕಾರಣಗಳು ಇವು….!

ನೀವು ವಿಮಾನವನ್ನು ಯಾವಾಗಲಾದರೂ ನೋಡಿದ್ದೀರಾ.? ಇದೇನು ಪ್ರಶ್ನೆ ?ವಿಮಾನವನ್ನು ನೋಡದವರು ಯಾರಾದರೂ ಇರ್ತಾರಾ ? ಎಂದು ಕೇಳುತ್ತಿದ್ದೀರಾ ? ಹಾಗಾದರೆ ನೀವು ಕೇಳ್ತಿರುವುದು ನಿಜ. ಆದರೆ ಈಗ ನಾವು ಕೇಳುವಂತಹದ್ದು ವಿಮಾನಗಳನ್ನು ನೋಡಿದ್ದೀರಾ, ನೋಡಿಲ್ಲವಾ ಎಂಬುದರ ಬಗ್ಗೆ ಮಾತ್ರವಲ್ಲ. ವಿಮಾನದ ಬಣ್ಣದ ಬಗ್ಗೆ, ಹೌದು ಬಣ್ಣನೆ….

ಹೌದು ನೀವು ಇದುವರೆಗೂ ಎಷ್ಟು ವಿಮಾನಗಳನ್ನು ನೋಡಿದ್ದೀರಾ ? ಅವುಗಳ ಬಣ್ಣ ಹೇಗಿರುತ್ತದೆ ಎಂದು ನೆನಪಿದಿಯಾ? ಆ…….. ನೆನಪಿದೆ. ಬಿಳಿಯ ಬಣ್ಣ ಇರುತ್ತದೆ. ವಿಮಾನದ ಮುಂದೆ, ಹಿಂದೆ, ಪಕ್ಕದ ರೆಕ್ಕೆಗಳು ಮಾತ್ರ ವಿಭಿನ್ನ ಬಣ್ಣದಲ್ಲಿರುತ್ತವೆ.ಆದರೆ ವಿಮಾನವನ್ನು ಒಟ್ಟಾರೆಯಾಗಿ ನೋಡಿದರೆ ಬಿಳಿಯ ಬಣ್ಣವೆ ಹೆಚ್ಚಾಗಿರುತ್ತದೆ. ಆದ್ರೆ ಏನು ಅಂತೀರಾ? ಏನಿಲ್ಲಾ ರೀ, ವಿಮಾನಗಳಿಗೆ ಬಿಳಿಯ ಬಣ್ಣವನ್ನೇ ಯಾಕೆ ಹಾಕಿರುತ್ತಾರೆ ? ಅದರ ಹಿಂದೆ ಏನಾದರೂ ವೈಜ್ನಾನಿಕ ಕಾರಣ ಗಳೇನಾದರೂ ಇದೆಯಾ ಎಂಬುದನ್ನು ತಿಳಿಸುವುದಕ್ಕಾಗಿಯೇ ವಿಮಾನದ ಬಣ್ಣದ ಬಗ್ಗೆ ಕೇಳಲಾಯಿತು. ಈಗ ಆ ಎಲ್ಲಾ ಪ್ರಶ್ನೆಗಳಿಗೆ ಉತ್ತರಗಳನ್ನು ತಿಳಿದುಕೊಳ್ಳೋಣ. ವಿಮಾನಗಳಿಗೆ ಬಿಳಿಯ ಬಣ್ಣವನ್ನೇ ಹಾಕಲು ಕಾರಣವೆಂದರೆ, ಬಿಳಿಯ ಬಣ್ಣ ಹೆಚ್ಚು ಕಾಲ ಬಾಳಿಕೆಗೆ ಬರುತ್ತದೆ. ಇತರೆ ಬಣ್ಣಗಳಿಗೆ ಹೋಲಿಸಿದರೆ ಬಿಳಿಯಬಣ್ಣಕ್ಕಾಗುವ ಖರ್ಚು ತುಂಬಾ ಕಡಿಮೆಯಾಗಿರುತ್ತದೆ. ಇನ್ನೂ ಹೇಳಬೇಕೆಂದರೆ ಬಿಳಿಯ ಬಣ್ಣವನ್ನು ಹಚ್ಚಿದ ವಿಮಾನಗಳನ್ನು ನಿರ್ವಹಿಸುವು ತುಂಬಾ ಸುಲಭ ಅದೇ ಇತರೆ ಬಣ್ಣಗಳಾದರೆ ಬೇಗ ಬಣ್ಣಹೋಗುತ್ತದೆ. ಆದ್ದರಿಂದ ಆಗಾಗ್ಗೆ ಬಣ್ಣವನ್ನು ಹಾಕುತ್ತಿರಬೇಕಾಗುತ್ತದೆ. ಇದರಿಂದ ಅದರ ನಿರ್ವಹಣೆಯ ಖರ್ಚು ಹೆಚ್ಚಾಗುತ್ತದೆ. ಅದಕ್ಕೆ ವಿಮಾನಗಳಿಗೆ ಬಿಳಿಯ ಬಣ್ಣವನ್ನು ಹಾಕುತ್ತಾರೆ.

ಬೇರೆ ಬಣ್ಣಗಳೆಲ್ಲವೂ ಸೂರ್ಯನಿಂದ ಬರುವ ತಾಪಮಾನಕ್ಕೆ ಸ್ವಲ್ಪ ಪ್ರಮಾಣದಲ್ಲಿ ಒಳಗೆ ಹೀರಿಕೊಳ್ಳುತ್ತವೆ. ಇದರಿಂದ ವಿಮಾನದಲ್ಲಿ ತಾಪಮಾನ ಹೆಚ್ಚಾಗಿ ಏ ಸಿ ಗಳ ಮೇಲೆ ತನ್ನ ಪ್ರಭಾವ ಬೀರುತ್ತವೆ. ಅದೇ ಬಿಳಿಯ ಬಣ್ಣವಾದರೆ ಸೂರ್ಯನ ಕಾಂತಿಯನ್ನು ಒಟ್ಟಾರೆಯಾಗಿ ಹೊರಗೆ ಪರಿವರ್ತಿಸುತ್ತದೆ. ಒಳಗೆ ಬಿಡುವುದಿಲ್ಲ. ಇದರಿಂದ ವಿಮಾನದಲ್ಲಿ ತಾಪಮಾನ ಕಡಿಮೆಯಾಗಿ ಏ.ಸಿ ಗಳು ಚೆನ್ನಾಗಿ ಕೆಲಸ ಮಾಡುತ್ತವೆ. ಆಕಾಶದಲ್ಲಿದ್ದರೂ, ಭೂಮಿಮೇಲಿದ್ದರೂ ಬಿಳಿಯ ಬಣ್ಣದಲ್ಲಿರುವ ವಸ್ತುಗಳನ್ನು ನಿರ್ಧಾರಿತವಾದಂತೆ ಬೇರೆ ಬಣ್ಣಗಳಲ್ಲಿನ ವಸ್ತುಗಳಿಗೆ ಇರುವುದಿಲ್ಲ. ಇದರಿಂದ ಬಿಳಿಯ ಬಣ್ಣದಲ್ಲಿರುವ ವಸ್ತುಗಳು ಬಹಳ ಸ್ಪಷ್ಟವಾಗಿ ನಮ್ಮ ಕಣ್ಣುಗಳಿಗೆ ಗೋಚರಿಸುತ್ತವೆ. ಇದರಿಂದಾಗಿ ವಿಮಾನದ ಮೇಲೆ ಯಾವುದೇ ಸಣ್ಣ ಬಿರುಕು ಕಂಡರೂ, ಯಾವುದೇ ಲೋಪಗಳೂ ಸ್ಪಷ್ಟವಾಗಿ ಗೋಚರಿಸುವುದರಿಂದ ಶೀಘ್ರದಲ್ಲೇ ಸಿಬ್ಬಂದಿ ಗಮನಕ್ಕೆ ಬಂದು ಎಚ್ಚರವಹಿಸಬಹುದು.

ವಿಮಾನಗಳನ್ನು ನಡೆಸುವ ಕಂಪನಿಗಳಿಗೆ ಅವುಗಳನ್ನು ಮರು ಮಾರಾಟ ಮಾಡುವುದಕ್ಕೆ ತುಂಬಾ ಸುಲಭವಾಗಿರುತ್ತದೆ. ಅವುಗಳನ್ನು ಕೊಂಡು ಕೊಂಡಂತಹ ಬೇರೆ ಕಂಪನಿಗಳಿಗೆ ಅವುಗಳ ಮೇಲಿನ ಚಿನ್ಹೆ ಗಳನ್ನು ಮಾತ್ರ ತೆಗೆದರೆ ಸಾಕು, ನಂತರವೇ ಅವರು ತಮ್ಮ ಕಂಪನಿಗಳಿಗೋಸ್ಕರ ಅವುಗಳನ್ನು ಬಳಸಿಕೊಳ್ಳಬಹುದು. ಅದೇ ಬೇರೆ ಬಣ್ಣಗಳಾಗಿದ್ದರೆ ಅವುಗಳನ್ನು ತೊಲಗಿಸುವುದು ಬಹಳ ಖರ್ಚನ್ನು ಭರಿಸಬೇಕಾಗುತ್ತದೆ. ಆದ್ದರಿಂದಲೇ ವಿಮಾನಗಳಿಗೆ ಬಿಳಿಯ ಬಣ್ಣವನ್ನೇ ಹಾಕಿರುತ್ತಾರೆ.


Click Here To Download Kannada AP2TG App From PlayStore!

Share this post

scroll to top