ಕೋಪ ಕಡಿಮೆಯಾಗಬೇಕೆ..? ಪ್ರತೀದಿನ 15 ನಿಮಿಷ ಧ್ಯಾನ ಮಾಡಿ..!!

ಆಧುನಿಕ ಧಾವಂತದ ಯುಗದಲ್ಲಿ ನಾವು ಜೀವಿಸುತ್ತಿದ್ದೇವೆ. ವ್ಯಾಯಾಮ ಮಾಡಲು ಬಿಡುವಿಲ್ಲ. ಕುಟುಂಬದ ಸದಸ್ಯರೊಡನೆ ಮಾತನಾಡಲು ಸಮಯವಿಲ್ಲ. ಯಾಂತ್ರಿಕ ಜೀವನ.. ಇದರೊಂದಿಗೆ ಮಾನಸಿಕ ಒತ್ತಡ ಹೆಚ್ಚಾಗುತ್ತಿದೆ. ಹಾಗಾದರೆ…ನಿಮ್ಮ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬೇಕೆ…?ಹಾಗಾದರೆ ಬನ್ನಿ . ನಾವು ಹೇಳಿದಂತೆ ಕೇವಲ 15 ನಿಮಿಷಗಳ ಕಾಲ ಧ್ಯಾನ ಮಾಡಿ. ನಿಮ್ಮ ಒತ್ತಡವನ್ನು ನಿವಾರಿಸಿಕೊಂಡು ಆನಂದವಾಗಿರಿ.ಆಧ್ಯಾತ್ಮಿಕವಾಗಿ ನಿಮ್ಮಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಗಮನಿಸಿ. ನಿಮ್ಮ ಪ್ರವರ್ತನೆ, ನಿಮ್ಮ ಮಾತಿನ ಧೋರಣೆಯಲ್ಲಿ ಆಗುತ್ತಿರುವ ಬದಲಾವಣೆ ನಿಮ್ಮ ಗಮನಕ್ಕೇ ಬರುತ್ತದೆ. ನಿಮ್ಮಲ್ಲಿ ಹೊಸಹುರುಪು ಮೂಡುತ್ತದೆ.

ಆಧ್ಯಾತ್ಮಿಕ ಮಾರ್ಗದಲ್ಲಿ ಸಾಗಲು ಶಾರೀರಿಕವಾಗಿ ಶ್ರಮಪಡುವ ಅಗತ್ಯವಿಲ್ಲ. ಮಾನಸಿಕ ಒತ್ತಡವೂ ಇರುವುದಿಲ್ಲ. ಪ್ರತೀ ದಿನ ಬೆಳಿಗ್ಗೆ ಧ್ಯಾನ ಮಾಡಿದರೆ… ದಿನವಿಡೀ ಉತ್ಸಾಹದಿಂದ ಇರುತ್ತೀರಿ. ಅಪ್ರಯತ್ನವಾಗಿ ನಿಮ್ಮಲ್ಲಿ ಸಹನೆ, ಶಾಂತ ಸ್ವಭಾವ ಅಧಿಕವಾಗುತ್ತದೆ. ಪಾಜಿಟಿವ್ ಥಿಂಕಿಂಗ್ ಹೆಚ್ಚಾಗುತ್ತದೆ.

ಅದೇ ರೀತಿ ಆಧ್ಯಾತ್ಮಿಕ ವಿಶೇಷತೆಗಳನ್ನು ತಿಳಿಸುವ ಸಾಹಿತ್ಯವನ್ನು ಓದಿ, ಅದರಲ್ಲಿರುವ ಅಂಶಗಳನ್ನು ನಿಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಿ. ಹೀಗೆ ಮಾಡುವುದರಿಂದ ನಿಮ್ಮ ಮಾನಸಿಕ ಒತ್ತಡ ದೂರವಾಗುತ್ತೆ ಆನಂದದ ಒಟ್ಟಿಗೆ ಭೌತಿಕ ಪ್ರಯೋಜನಗಳಾಗುತ್ತವೆಂದು ಆಧ್ಯಾತ್ಮಿಕ ಪಂಡಿತರು ಹೇಳುತ್ತಾರೆ.


Click Here To Download Kannada AP2TG App From PlayStore!