ದುಷ್ಟಶಕ್ತಿಗಳು ನಿಮ್ಮನ್ನು ಬಿಡಬೇಕೆಂದರೆ… ಈ 7 ಕೆಲಸಗಳನ್ನು ಮಾಡಿದರೆ ಸಾಕು.!!

ದೇವರು ಇರುವಂತೆ ಈ ಜಗತ್ತಿನಲ್ಲಿ ದೆವ್ವಗಳು, ಭೂತಗಳು ಸಹ ಇವೆ ಎಂದು ನಂಬುವವರು ಬಹಳಷ್ಟು ಮಂದಿ ಇದ್ದಾರೆ. ಈ ಹಿನ್ನೆಲೆಯಲ್ಲಿ ಅಂತಹವರು ತಮ್ಮ ಬಳಿಗೆ ದುಷ್ಟಶಕ್ತಿಗಳು ಬರದಂತೆ ತಾಯತ ಕಟ್ಟಿಕೊಳ್ಳುವುದು, ದೇವರ ಫೋಟೋಗಳನ್ನು ಹತಿರ ಇಟ್ಟುಕೊಳುವುದು, ಇತರೆ ಕೆಲಸಗಳನ್ನು ಮಾಡುತ್ತಿರುತ್ತಾರೆ. ಆದರೆ ದುಷ್ಟಶಕ್ತಿಗಳ ಕಾಟಕ್ಕೆ ಸಿಗದೆ ಇರಬೇಕೆಂದರೆ ಇವಿಷ್ಟೇ ಅಲ್ಲ, ಇನ್ನೂ ಕೆಲವು ಸೂಚನೆಗಳು ಇವೆ. ಅವುಗಳನ್ನು ಪಾಲಿಸಿದರೆ ದುಷ್ಟಶಕ್ತಿಗಳಷ್ಟೇ ಅಲ್ಲ, ನೆಗಟೀವ್ ಎನರ್ಜಿ ಸಹ ಹತ್ತಿರ ಸುಳಿಯಲ್ಲ. ಇದರಿಂದ ಅದೃಷ್ಟ ಕೂಡಿಬರುತ್ತದೆ. ಅಂದುಕೊಂಡ ಕೆಲಸಗಳು ನೆರವೇರುತ್ತವೆ. ಹಾಗಿದ್ದರೆ ಆ ಸೂಚನೆಗಳು ಏನು ಎಂದು ಈಗ ತಿಳಿದುಕೊಳ್ಳೋಣವೆ..!

1. ತುಳಸಿ ಎಲೆಗಳನ್ನು ಕೆಲವು ತೆಗೆದುಕೊಂಡು ಅವುಗಳ ರಸ ತೆಗೆಯಬೇಕು. ಅದನ್ನು ಶುದ್ಧವಾದ ನೀರಿನಲ್ಲಿ ಕಲೆಸಬೇಕು. ಆ ಬಳಿಕ ದೇವರನ್ನು ಪ್ರಾರ್ಥಿಸಿ ಆ ದ್ರವವನ್ನು ಮನೆಯಲ್ಲಿ ಚೆಲ್ಲಬೇಕು. ಇದರಿಂದ ದುಷ್ಟ ಶಕ್ತಿಗಳು ಬರದಂತೆ ಇರುತ್ತವೆ. ಮನೆಯಲ್ಲಿರುವ ನೆಗಟೀವ್ ಎನರ್ಜಿ ಹೊರಗೆ ಹೋಗುತ್ತದೆ.

2. ಕನಿಷ್ಟ ವರ್ಷಕ್ಕೊಮ್ಮೆ ಮನೆಯಲ್ಲಿ ಪಂಡಿತರ ಕೈಯಲ್ಲಿ ಯಜ್ಞ ಮಾಡಿಸಬೇಕು. ಇದರಿಂದ ಅವರು ಓದುವ ಮಂತ್ರಗಳು, ಯಜ್ಞದಿಂದ ಬರುವ ಹೊಗೆಗೆ ದುಷ್ಟಶಕ್ತಿಗಳು ಓಡಿಹೋಗುತ್ತವೆ. ಎಲ್ಲವೂ ಶುಭವಾಗುತ್ತದೆ. ಪಾಸಿಟೀವ್ ಎನರ್ಜಿ ಮನೆಯಲ್ಲಿರುತ್ತದೆ. ಧನವನ್ನು ಅದು ಆಕರ್ಷಿಸುತ್ತದೆ.

3. ಚೆನ್ನಾಗಿ ನಿಗಿನಿಗಿ ಎಂದು ಉರಿಯುತ್ತಿರುವ ಕೆಂಡವನ್ನು ಒಂದು ಲೋಹದ ಪ್ಲೇಟ್ ಮೇಲೆ ತೆಗೆದುಕೊಂಡು ಅದರ ಮೇಲೆ ಸ್ವಲ್ಪ ಇಂಗು ಹಾಕಬೇಕು. ಇದರಿಂದ ಹೊಗೆ ಬರುತ್ತದೆ. ಅದನ್ನು ಮನೆಯಲ್ಲೆಲ್ಲಾ ಪಸರಿಸುವಂತೆ ತಿರುಗುತ್ತಾ ಧೂಪ ಹಾಕಬೇಕು. ಈ ರೀತಿ ಮಾಡಿದರೆ ದುಷ್ಟಶಕ್ತಿಗಳು ಬರಲ್ಲ. ನೆಗಟೀವ್ ಎನರ್ಜಿ ಹೋಗುತ್ತದೆ.

4. ಸ್ವಲ್ಪ ಜೀರಿಗೆ, ಉಪ್ಪನ್ನು ತೆಗೆದುಕೊಂಡು ಚೆನ್ನಾಗಿ ಮಿಕ್ಸ್ ಮಾಡಬೇಕು. ಆ ಮಿಶ್ರಣವನ್ನು ಮನೆಯ ಮುಖ್ಯ ದ್ವಾರದ ಬಳಿ ಚೆಲ್ಲಬೇಕು. ಬಳಿಕ ಉಳಿದ ಬಾಗಿಲು, ಕಿಟಕಿ ಬಳಿ ಸಹ ಆ ಮಿಶ್ರಣವನ್ನು ಚೆಲ್ಲಿದರೆ ದುಷ್ಟಶಕ್ತಿಗಳು ಬರದಂತೆ ಇರುತ್ತವೆ. ಪಾಸಿಟೀವ್ ಎನರ್ಜಿ ಹೆಚ್ಚುತ್ತದೆ.

5. ಸ್ವಲ್ಪ ಸೌಂಡ್ ಇಟ್ಟುಕೊಂಡು ಸಂಗೀತವನ್ನು ಕೇಳುವುದು, ಮನೆಯೊಳಗೆ ಗಾಳಿ, ಸೂರ್ಯನ ಬೆಳಕು ಧಾರಾಳವಾಗಿ ಬೀಳುವಂತೆ ಮಾಡಿ. ಯಾವಾಗಲೂ ಸಂತೋಷವಾಗಿರುವುದು, ಮನರಂಜನಾ ಕಾರ್ಯಕ್ರಮಗಳನ್ನು ಮನೆಯಲ್ಲಿ ಮಾಡುತ್ತಿದ್ದರೆ ಆ ಪಾಸಿಟೀವ್ ವೈಬ್ರೇಷನ್ಸ್‌ಗೆ ಮನೆಯಲ್ಲಿ ದುಷ್ಟಶಕ್ತಿಗಳು ಇರಲ್ಲ. ಓಡಿಹೋಗುತ್ತವೆ. ನೆಗಟೀವ್ ಎನರ್ಜಿ ಹೋಗುತ್ತದೆ.

6. ಸಿಲಿಕಾ ಸ್ಫಟಿಕ, ಟೈಗರ್ ಐರನ್ ಸ್ಪಟಿಕ, ಪುಷ್ಯರಾಗ, ಗೋಮೇಧಿಕ ತದಿತರೆ ಸ್ಫಟಿಕಗಳನ್ನು, ಕಲ್ಲಿನಲ್ಲಿ ಯಾವುದಾದರೂ ಸ್ವಲ್ಪ ತೆಗೆದುಕೊಂಡು ಮನೆಯಲ್ಲಿನ ಪ್ರತಿ ಮೂಲೆ, ಪ್ರತಿ ಕೊಠಡಿಯಲ್ಲಿಡಬೇಕು. ಇದರಿಂದ ದುಷ್ಟಶಕ್ತಿಗಳು ಬರಲ್ಲ. ನೆಗಟೀವ್ ಎನರ್ಜಿ ಹೋಗುತ್ತದೆ.

7. ಇತರರಿಗೆ ಸಹಾಯ ಮಾಡುವುದು, ದಾನ, ಧರ್ಮಗಳನ್ನು ಮಾಡುವುದು, ದೈವ ಪ್ರಾರ್ಥನೆಗಳನ್ನು ಮಾಡುವಂತಹ ಕೆಲಸಗಳನ್ನು ಮಾಡುವವರಿಗೆ ದುಷ್ಟ ಶಕ್ತಿಗಳು ಬಾಧಿಸಲ್ಲವಂತೆ. ಅವಷ್ಟೇ ಅಲ್ಲ, ನೆಗಟೀವ್ ಎನರ್ಜಿ ಸಹ ಅವರ ಸನಿಹ ಸುಳಿಯಲ್ಲವಂತೆ.

 


Click Here To Download Kannada AP2TG App From PlayStore!