ವಾಶ್ ಬೇಸಿನ್ ಸಿಂಕ್ ಜಾಮ್ ಆಗಿದೆಯೇ..? ಹಾಗಿದ್ದರೆ ಈ ಸರಳ ಟ್ರಿಕ್‌ನಿಂದ ಸಿಂಕ್‍ನಲ್ಲಿನ ಅಡ್ಡಿ ತೊಲಗಿಸಬಹುದು..!

ಮನೆಯಲ್ಲಿ ಅಡುಗೆಮನೆ ಎಂದ ಮೇಲೆ ಸಾಮಾನ್ಯವಾಗಿ ಹೆಚ್ಚಿನ ಮನೆಗಳಲ್ಲಿ ವಾಶ್ ಬೇಸಿನ್ ಅಥವಾ ಪಾತ್ರೆ ತೊಳೆಯುವ ಸಿಂಕ್ ಇರುತ್ತದೆ. ಕೆಲವರ ಮನೆಗಳಲ್ಲಿ ಕಿಚನ್ ಸಿಂಕ್ ಇರಲ್ಲ. ಇನ್ನೂ ಕೆಲವರು ಇದ್ದರೂ ಅದನ್ನು ಉಪಯೋಗಿಸಲ್ಲ. ಹೊರಗೆ ಪಾತ್ರೆ ಹಾಕಿಕೊಂಡು ತೊಳೆಯುತ್ತಾರೆ. ಆದರೆ ಕಿಚನ್ ಸಿಂಕನ್ನು ಹೆಚ್ಚಾಗಿ ಉಪಯೋಗಿಸುವವರಿಗೆ ಎದುರಾಗುವ ಸಮಸ್ಯೆ ಒಂದೇ. ಅದೇ ಸಿಂಕ್ ಪೈಪ್‌ಗಳಲ್ಲಿ ವ್ಯರ್ಥಗಳು ಸೇರಿಕೊಂಡು ಆಗಾಗ ನೀರು ಜಾಮ್ ಆಗುತ್ತಿರುತ್ತದೆ. ಹಾಗಾಗಿ ಈ ಸರಳ ಟ್ರಿಕ್ ಬಳಸಿದರೆ ಸಿಂಕ್‌ನಲ್ಲಿನ ನೀರು ಇನ್ನು ಜಾಮ್ ಆಗಲ್ಲ. ಆ ಟ್ರಿಕ್ ಏನೆಂದು ಈಗ ನೋಡೋಣ.

kitchen-sink

1. ಮೊದಲು ಸಿಂಕ್‌ನಲ್ಲಿನ ನೀರು ಹೋಗುವ ಜಾಲರಿ ಬಳಿ ಬೇಕಿಂಗ್ ಸೋಡಾ ಹಾಕಬೇಕು. ಜಾಲರಿಯನ್ನು ಮುಚ್ಚುವಂತೆ ಬೇಕೆಂಗ್ ಸೋಡಾ ಹಾಕಬೇಕು.
2. ಆ ಬಳಿಕ ಆ ಸೋಡಾ ಮೇಲೆ ಸ್ವಲ್ಪ ವೆನಿಗರ್ ಹಾಕಬೇಕು. ಆದರೆ ಎಚ್ಚರ! ಯಾಕೆಂದರೆ ಬೇಕಿಂಗ್ ಸೋಡಾ, ವೆನಿಗರ್ ಎರಡೂ ಬೆರೆತರೆ ಒಮ್ಮೆಲೆ ಹೊಗೆ ದೊಡ್ಡದಾಗಿ ನೊರೆ ಬರುತ್ತಾ ಕೆಮಿಕಲ್ ರಿಯಾಕ್ಷನ್ ನಡೆಯುತ್ತದೆ. ಆದಕಾರಣ ಸಿಂಕ್‌ನಿಂದ ಸಾಧ್ಯವಾದಷ್ಟು ದೂರ ಇದ್ದು ವೆನಿಗರ್ ಸೋಡಾ ಮೇಲೆ ಹಾಕಬೇಕು.
3. ಸೋಡಾ, ವೆನಿಗರ್ ಎರಡೂ ಬೆರೆತು ಸಂಪೂರ್ಣವಾಗಿ ಸಿಂಕ್ ಒಳಗೆ ಹೋಗುತ್ತವೆ.
4. ಬಳಿಕ ಸ್ವಲ್ಪ ಬಿಸಿನೀರನ್ನು ಸಿಂಕ್‌ನಲ್ಲಿ ಹಾಕಬೇಕು.
5. ಮತ್ತೆ ಮಾಮೂಲಿ ನೀರು ಹಾಕಿ ತೊಳೆಯಬೇಕು. ಅಷ್ಟೇ ಸಿಂಕ್ ಫಳಫಳ ಎಂದು ಹೊಳೆಯುವುದಷ್ಟೇ ಅಲ್ಲ, ಅದಕ್ಕೆ ಅಂಟಿಕೊಂಡಿದ್ದ ಪೈಪ್‌ನಲ್ಲಿನ ಜಾಮ್ ಎಲ್ಲಾ ತೊಲಗುತ್ತದೆ.

ಮೇಲೆ ತಿಳಿಸಿದ ಟ್ರಿಕನ್ನು ಕೆಳಗಿನ ವಿಡಿಯೋದಲ್ಲಿ ಇನ್ನಷ್ಟು ವಿವರವಾಗಿ ನೋಡಿ ತಿಳಿದುಕೊಳ್ಳಬಹುದು…

watch video :


Click Here To Download Kannada AP2TG App From PlayStore!