ದೆಹಲಿ ಕೊನೆಯ ಹಿಂದೂ ರಾಜ ಪೃಥ್ವಿರಾಜ್ ಚೌಹಾಣ್ ವೀರಗಾಥೆ ಇದು, ಕುರುಡನಾದರೂ ಗುರಿ ತಪ್ಪದ ವೀರ

ಈಗ ರಾಜಪ್ರಭುತ್ವವೂ ಇಲ್ಲ, ರಾಜರೂ ಇಲ್ಲ ಬಿಡಿ…ಆದರೆ ಒಂದು ಕಾಲದಲ್ಲಿ ಅವರೆಲ್ಲಾ ಇದ್ದರು. ನಮ್ಮ ದೇಶದಲ್ಲಿ ಎಷ್ಟೋ ರಾಜ್ಯಗಳನ್ನು, ಪ್ರಾಂತ್ಯಗಳನ್ನು ಅನೇಕ ಮಂದಿ ರಾಜರು ಪಾಲಿಸಿದ್ದಾರೆ. ಆದರೆ ಯಾವ ರಾಜನಿಗಾದರೂ ಧೈರ್ಯ, ಛಾತಿ, ಆಲೋಚನೆ, ಯುದ್ಧ ವಿದ್ಯೆಗಳು, ತಂತ್ರಗಳು ಎಲ್ಲವೂ ಸಮಗ್ರವಾಗಿ ಗೊತ್ತಿರಬೇಕು. ಹಾಗಿದ್ದಾಗ ಮಾತ್ರ ಶತ್ರು ರಾಜನನ್ನು ಎದುರಿಸಿ ಅವರನ್ನು ಸೋಲಿಸುತ್ತಾರೆ. ಆ ಪ್ರಕಾರ ರಾಜರಿಗೆ ಇರುವ ಯುದ್ದ ನೈಪುಣ್ಯದಲ್ಲಿ ಹೇಳಿಕೊಳ್ಳುವಂತದ್ದು ಬಿಲ್ಲು ವಿದ್ಯೆ. ಹೌದು, ಬಿಲ್ಲುವಿದ್ಯೆ. ಅರ್ಜುನನಂತವರು ಬಿಲ್ಲುವಿದ್ಯೆಯಿಂದಲೇ ಸಾಕಷ್ಟು ಪ್ರಚಾರಕ್ಕೆ ಬಂದವರು. ಬಾಣ ಹಿಡಿದು ಬಿಲ್ಲು ಮೀಟಿದರೆ ಶತ್ರು ಸೈನ್ಯ ಓಡಿಹೋಗಬೇಕು. ಯಾವ ಕಡೆ ದೃಷ್ಟಿ ಇದ್ದರು, ಯಾವ ದಿಕ್ಕಿನಲ್ಲಿ ಶಬ್ದ ಕೇಳಿದರು, ಯಾವ ಸ್ಥಿತಿಯಲ್ಲೇ ಇದ್ದರೂ ಬಾಣ ಬಿಟ್ಟರೆ ಶತ್ರುವಿಗೆ ನಾಟಿಯೇ ತೀರುತ್ತದೆ. ಆ ರೀತಿಯ ಪ್ರಾವೀಣ್ಯತೆ ಕೆಲವು ರಾಜರಿಗೆ ಇತ್ತು. ಆ ರೀತಿಯ ರಾಜರಲ್ಲಿ ಪೃಥ್ವಿರಾಜ್ ಚೌಹಾಣ್ (ಪೃಥ್ವಿರಾಜ್ 3) ಸಹ ಒಬ್ಬರು.

Prithviraj-III

ದೆಹಲಿ ರಾಜ್ಯವನ್ನು ಪರಿಪಾಲಿಸಿದ ಕೊನೆಯ ಹಿಂದೂ ರಾಜ ಎಂದು ಪೃಥ್ವಿರಾಜ್ ಚೌಹಾಣ್ ಹೆಸರುವಾಸಿಯಾಗಿದ್ದಾರೆ. ಕ್ರಿ.ಶ 1149ರಲ್ಲಿ ಜನಿಸಿದ ಅವರು 1192ವರೆಗೂ ಉತ್ತರ ಭಾರತ ದೇಶದಲ್ಲಿ ಅಜ್ಮೀರ್, ದೆಹಲಿ ರಾಜ್ಯಗಳನ್ನು ಪರಿಪಾಲಿಸಿದರು. ಚೌಹಮನಾ ವಂಶಕ್ಕೆ ಸೇರಿದ ಪೃಥ್ವಿರಾಜ್ 20ರ ವಯಸ್ಸಿನಲ್ಲೇ ಅಂದರೆ 1169ರಲ್ಲಿ ರಾಜನಾಗಿ ಪಟ್ಟಾಭಿಷಕ್ತನಾಗಿ ರಾಜ್ಯಭಾರ ಮಾಡುವ ಜವಾಬ್ದಾರಿಯನ್ನು ಪಡೆದುಕೊಂಡ. ರಾಜನಾದ ಬಳಿಕ ತನ್ನ ನೈಪುಣ್ಯಗಳು, ಧೀರತ್ವದಿಂದ ಎಷ್ಟೋ ರಾಜರನ್ನು ಸೋಲಿಸಿ ಅವರ ರಾಜ್ಯಗಳನ್ನು ಕೈವಶ ಮಾಡಿಕೊಂಡ. ಪ್ರಸ್ತುತ ಇರುವ ರಾಜಸ್ಥಾನ, ಹರ್ಯಾಣ ರಾಜ್ಯಗಳಲ್ಲಿನ ಅನೇಕ ಪ್ರಾಂತ್ಯಗಳನ್ನು ಪರಿಪಾಲಿಸಿದ. 1175ನೇ ಸಂವತ್ಸರದಲ್ಲಿ ಕನೌಜ್ ರಾಜ್ಯಕ್ಕೆ ಸೇರಿದ ಜೈ ಚಂದ್ರ ರಾಥೋಡ್ ಮಗಳು ಸಂಯುಕ್ತಾಳನ್ನು ವರಿಸಿದ. ಅವರಿಬ್ಬರ ಪ್ರೇಮಕಥೆಯನ್ನೂ ಸಹ ಇತಿಹಾಸತಜ್ಞರು ಕುತೂಹಲವಾಗಿ ಹೇಳುತ್ತಾರೆ. ಆದರೆ ಪೃಥ್ವಿರಾಜ್ ಚೌಹಾಣ್‌ಗೆ ಚಾಂದ್ ಬರ್ದೆಯ್ ಎಂಬ ಗೆಳೆಯನಿದ್ದ. ಆತ ಒಬ್ಬ ಒಳ್ಳೆಯ ಕವಿ. ಪೃಥ್ವಿರಾಜ್ ಚೌಹಾಣ್ ಬಳಿಯೇ ಇದ್ದ. ಎಲ್ಲ ರಾಜರಂತೆ ಪೃಥ್ವಿರಾಜ್ ಚೌಹಾಣ್‌ಗೆ ಕೂಡ ಒಂದಾನೊಂದು ಸಂದರ್ಭದಲ್ಲಿ ದುರ್ದೆಸೆ ಬಂತು. ಅದೇ ಅವರ ಸಾವಿಗೆ ಕಾರಣವಾಯಿತು.

1191ರಲ್ಲಿ ಷಾಬುದ್ದೀನ್ ಮಹಮ್ಮದ್ ಘೋರಿ ಇರಾನ್‌ನಿಂದ 1.20 ಲಕ್ಷ ಮಂದಿ ಸೈನಿಕರೊಂದಿಗೆ ಕೈಬರ್ ಗುಡ್ಡಗಳ ಬಳಸಿ ಪಂಜಾಬ್ ಸರಿಹದ್ದು ಪ್ರದೇಶ ಪ್ರವೇಶಿಸಿದ. ದೆಹಲಿಯನ್ನು ಹೇಗಾದರು ಆಕ್ರಮಿಸಿಕೊಳ್ಳಬೇಕೆಂಬುದು ಅವನ ಯೋಜನೆ. ಆದರೆ ಪೃಥ್ವಿರಾಜ್ ಚೌಹಾಣ್ ಸಹ ಕಡಿಮೆ ಏನು ಇರಲಿಲ್ಲ. ಅವರ ಬಳಿ 1 ಲಕ್ಷ ಮಂದಿ ನುರಿತ ಸೈನಿಕರು ಯಾವಾಗಲೂ ಸಿದ್ಧವಾಗಿದ್ದರು. ಆದರೆ ತಾರೆಯಿನ್ (ಹರ್ಯಾಣಾದಲ್ಲಿನ, ಪ್ರಸ್ತುತ ದೆಹಲಿಗೆ 150 ಕಿ.ಮೀ ದೂರದಲ್ಲಿರುವ ಪ್ರದೇಶ) ಎಂಬ ಪ್ರದೇಶದಲ್ಲಿ ಘೋರಿ ತನ್ನ ಸೈನ್ಯದೊಂದಿಗೆ ಆಗಮಿಸಿ ಪೃಥ್ವಿರಾಜ್ ಚೌಹಾಣ್‌ಗೆ ಸವಾಲೊಂದನ್ನು ಎಸೆದ. ಇದರಿಂದ ಘೋರಿಯೊಂದಿಗೆ ಚೌಹಾಣ್ ಯುದ್ಧ ಮಾಡಿದ. ವಿಜಯ ಚೌಹಾಣ್‍ರನ್ನು ವರಿಸಿತು. ಆದರೆ ಘೋರಿ ಅನೇಕ ವಿಧದಲ್ಲಿ ಭಿನ್ನವಿಸಿಕೊಂಡ ಕಾರಣ ಮನಸ್ಸು ಕರಗಿ ಇತರರು ಬೇಡ ಎಂದರೂ ಕೇಳದೆ ಘೋರಿಯನ್ನು ಬಿಟ್ಟುಬಿಡುತ್ತಾನೆ. ಅದೇ ಚೌಹಾಣ್‌ಗೆ ಮೃತ್ಯುಪಾಶವಾಗುತ್ತದೆ.

ಅದಾದ ಮುಂದಿನ ವರ್ಷ 1192ರಲ್ಲಿ ಘೋರಿ 1.20 ಲಕ್ಷ ಮಂದಿ ಸೈನಿಕರೊಂದಿಗೆ ಮತ್ತೆ ಚೌಹಾಣ್ ಮೇಲೆ ಯುದ್ಧ ಮಾಡಲು ದಂಡೆತ್ತಿ ಬರುತ್ತಾನೆ. ಈ ಬಾರಿ ಚೌಹಾಣ್ 150 ರಾಜರನ್ನು ಒಂದು ಮಾಡಿ, 3 ಲಕ್ಷ ಮಂದಿ ಸೈನಿಕರು, 3 ಸಾವಿರ ಆನೆಗಳೊಂದಿಗೆ ಘೋರಿ ಮೇಲೆ ಯುದ್ಧಕ್ಕೆ ಇಳಿಯುತ್ತಾನೆ. ಆದರೆ ದುರದೃಷ್ಟವಶಾತ್ ಚೌಹಾಣ್ ಈ ಸಲ ಘೋರಿಯೊಂದಿಗೆ ಸೋಲುತ್ತಾನೆ. ಚೌಹಾಣ್ ಜತೆಗೆ ಆತನ ಸ್ನೇಹಿತ ಚಾಂದ್ ಬರ್ದೆಯ್ ಸಹ ಘೋರಿಗೆ ಸಿಕ್ಕಿಬೀಳುತ್ತಾನೆ. ಇವರಿಬ್ಬರನ್ನೂ ಘೋರಿ ಯುದ್ಧಕೈದಿಗಳಾಗಿ ಆಘ್ಗಾನಿಸ್ತಾನದಲ್ಲಿನ ಪೆಷಾವರ್‌ಗೆ ಕೊಂಡೊಯ್ಯುತ್ತಾನೆ. ಅಲ್ಲಿ ಚೌಹಾಣ್‍ರಿಗೆ ನಾನಾ ಚಿತ್ರಹಿಂಸೆ ಕೊಡಲಾಗುತ್ತದೆ. ಧಗಧಗ ಉರಿಯುವ ಅಗ್ನಿಜ್ವಾಲೆಗಳಿಂದ ಕಣ್ಣಿಗೆ ತಿವಿಯುವ ಮೂಲಕ ಕುರುಡನಾಗುತ್ತಾನೆ. ಒಂದಾನೊಂದು ಸಂದರ್ಭದಲ್ಲಿ ಬಿಲ್ಲು ವಿದ್ಯೆ ಪ್ರದರ್ಶಿಸುವಂತೆ ಚೌಹಾಣ್‌ರನ್ನು ಸಭಾಂಗಣದಲ್ಲಿ ನಿಲ್ಲಿಸುತ್ತಾನೆ. ಆತನಿಗೆ ಬಾಣ, ಬಿಲ್ಲುಗಳನ್ನು ಕೊಡಲಾಗುತ್ತದೆ. ಅದೇ ಸಮಯದಲ್ಲಿ ಚಾಂದ್ ಬರ್ದಾಯ್, ಚೌಹಾಣ್‌ಗೆ ಕೇಳಿಸುವಂತೆ ಘೋರಿ ಇರುವ ಪ್ರದೇಶವನ್ನು ಹಾಡಿನ ರೂಪದಲ್ಲಿ ಹೇಳುತ್ತಾನೆ. ಇದರಿಂದ ಚೌಹಾಣ್ ಅಪ್ರಮತ್ತನಾಗಿ ಬಾಣ ಬಿಡುತ್ತಾನೆ. ಅದು ಸರಿಯಾಗಿ ಘೋರಿಗೆ ನಾಟುತ್ತದೆ. ಇದರಿಂದ ಘೋರಿ ಸಾವಪ್ಪುತ್ತಾನೆ. ಆ ಬಳಿಕ ಚಾಂದ್ ಬರ್ದೆಯ್, ಚೌಹಾಣ್‍ರನ್ನು ಸಾಯಿಸಿ, ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಇದು ದೆಹಲಿಯ ಕೊನೆ ಹಿಂದೂ ರಾಜ ಪೃಥ್ವಿರಾಜ್ ಚೌಹಾಣ್ ವೀರಗಾಥೆ. ಚಾಂದ್ ಬರ್ದೆಯ್, ಪೃಥ್ವಿರಾಜ್ ಚೌಹಾಣ್‌ರನ್ನು ಸಮಾಧಿ ಮಾಡಿದ ಸ್ಥಳ ಅಘ್ಗನಿಸ್ತಾನದ ಪೆಷಾವರ್‌ನಲ್ಲಿ ಈಗಲೂ ಇದೆ. ಅಲ್ಲಿ ಅವರ ಸಮಾಧಿಗಳ ಅವಶೇಷಗಳು ಈಗಲೂ ಕಾಣಿಸುತ್ತವೆ ಎನ್ನುತ್ತಾರೆ. ಆದರೆ ಆ ಪ್ರದೇಶ ಸ್ಥಳೀಯರ ಅವಜ್ಞೆಗೆ ಗುರಿಯಾಯಿತು. ಕಾರಣ ತಮ್ಮ ರಾಜನಾದ ಘೋರಿಯನ್ನು ಪೃಥ್ವಿರಾಜ್ ಸಾಯಿಸಿದ ಎಂದು! ಈ ಕಾಲದ ತಲೆಮಾರಿನವರು ಪೃಥ್ವಿರಾಜ್ ಚೌಹಾಣ್ ಬಗ್ಗೆ ತಿಳಿದುಕೊಳ್ಳುವುದು ಸಾಕಷ್ಟಿದೆ. ಅದೇನೆಂದರೆ… ಎಷ್ಟೇ ದೀನಾವಸ್ಥೆಯಲ್ಲಿದ್ದರೂ, ಎಷ್ಟೇ ಕಷ್ಟಗಳು ಎದುರಾದರು ತನಗೂ ಸಹ ಒಂದಲ್ಲ ಒಂದು ದಿನ ಸಮಯ ಬರುತ್ತದೆ ಎಂದು ಚೌಹಾಣ್ ನಿರೀಕ್ಷಿಸಿದ್ದ, ಹಾಗೆಯೇ ಬಂತು, ಅದನ್ನು ಸರಿಯಾಗಿ ಬಳಸಿಕೊಂಡು ಘೋರಿಯನ್ನು ಅಂತ್ಯಮಾಡಿದ, ಇದು ಅವರ ಜೀವನದಿಂದ ನಾವು ಕಲಿಯಬೇಕಾಗಿರುವುದು..! ಅಷ್ಟೆ ಅಲ್ಲವೆ, ಏನಂತೀರಾ..!


Click Here To Download Kannada AP2TG App From PlayStore!

Share this post

scroll to top