‘ಸಕ್ಕರೆ’ ಎಂದಾಕ್ಷಣ ನಮಗೆ ಈಕೆಯ ಹೆಸರು ನೆನಪಾಗಬೇಕು..!! ಯಾಕೆ ಗೊತ್ತಾ?

ಆಕೆಯ ಹೆಸರು ಹೇಳಿದರೆ ಸಾಕು ಮರಗಳು ಪುಳಕಗೊಳ್ಳುತ್ತವೆ. ಮೊಗ್ಗು ಹೂವಾಗಿ ಅರಳುತ್ತದೆ. ಸಕ್ಕರೆಯ ಸಿಹಿ ಸವಿದಾಗ ಆಕೆಯ ಹೆಸರೇ ನೆನಪಾಗುತ್ತದೆ. ಆಕೆಯೇ ಎಡವಲೆತ್ ಕಕ್ಕತ್ ಜಾನಕಿ ಅಮ್ಮಾಳ್. ಇವರು ಬಾಟನಿ (ವೃಕ್ಷಶಾಸ್ತ್ರ) ಯಲ್ಲಿ ಪಿ.ಹೆಚ್.ಡಿ. ಪಡೆದ ಮೊದಲ ಭಾರತೀಯ ಮಹಿಳೆ ಮಾತ್ರವಲ್ಲ. ಪದ್ಮಶ್ರೀ ಪ್ರಶಸ್ತಿಯನ್ನು ಪಡೆದುಕೊಂಡ ಭಾರತ ಮಹಿಳಾ ವಿಜ್ಞಾನಿಗಳಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ. ಆಂದಿನ ದಿನಗಳಲ್ಲಿ ಮಹಿಳೆಯರು ಪ್ರೌಢಶಾಲೆವರೆಗೂ ವಿದ್ಯಾಭ್ಯಾಸ ಮಾಡುವುದೇ ಹೆಮ್ಮೆಯ ವಿಷಯವಾಗಿತ್ತು. ಆದರೆ ಆಕೆ ಅಮೆರಿಕಾದ ಪ್ರಖ್ಯಾತ ವಿಶ್ವವಿದ್ಯಾಲಯದಲ್ಲಿ ಪಿ.ಹೆಚ್.ಡಿ. ಮುಗಿಸಿ ತಾನು ಆಯ್ದುಕೊಂಡ ವಿಭಾಗದಲ್ಲಿ ಅದ್ಭುತ ಸಾಧನೆಗಳನ್ನು ತೋರಿದ್ದಾಳೆ.

janaki-ammal

ಜಾನಕಿ ಅಮ್ಮಾಳ್ 1897 ನವೆಂಬರ್ 04 ರಂದು ಕೇರಳದ ತೆಲಿಚೆರಿ (ಈಗಿನ ತಲಸರಿ) ಯಲ್ಲಿ ಜನಿಸಿದರು. ಅವರ ತಂದೆ ದಿವಾನ್ ಬಹದ್ದೂರ್ ಏಕ್ ಕ್ರಿಷ್ಣನ್, ಅಂದಿನ ಮದ್ರಾಸ್ ಕೋರ್ಟಿನಲ್ಲಿ ಸಬ್ ಜಡ್ಜ್ ಆಗಿದ್ದರು. ಅವರಿಗೆ ಇಬ್ಬರು ಪತ್ನಿಯರು. 19 ಮಂದಿ ಮಕ್ಕಳು. ಮೊದಲ ಪತ್ನಿ ಶಾರದ ಅವರು 6 ಮಕ್ಕಳಿಗೆ ಹಾಗೂ ಎರಡನೇ ಪತ್ನಿ ದೇವೀ ಅಮ್ಮಾಳ್ 13 ಮಕ್ಕಳಿಗೆ ಜನ್ಮ ನೀಡಿದರು. ಅವರಲ್ಲಿ 10ನೆಯ ಸಂತಾನವಾದ ಜಾನಕಿ ಅಮ್ಮಾಳ್ ತೆಲಿಚೆರಿಯಲ್ಲಿ ವಿದ್ಯಾಭ್ಯಾಸ ಮಾಡಿದರು. ನಂತರ ಮದ್ರಾಸಿನ ಕ್ವೀನ್ಸ್ ಮೇರಿ ಕಾಲೇಜಿನಿಂದ ಬ್ಯಾಚುಲರ್ ಡಿಗ್ರಿ, 1921 ರಲ್ಲಿ ಪ್ರೆಸಿಡೆನ್ಸಿ ಕಾಲೇಜಿನಿಂದ ಬಾಟನಿ ಹಾನರ್ಸ್ ಪದವಿಯನ್ನು ಪಡೆದರು. ವಿಮೆನ್ಸ್ ಕ್ರಿಶ್ಚಿಯನ್ ಕಾಲೇಜಿನಲ್ಲಿ ಅಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಲೇ ಪ್ರಖ್ಯಾತ ಮಿಚಿಗನ್ ಯೂನಿವರ್ಸಿಟಿಯಿಂದ ಸ್ಕಾಲರ್ ಷಿಪ್ ಪಡೆದುಕೊಂಡು ಅದೇ ಯೂನಿವರ್ಸಿಟಿಯಲ್ಲಿ 1925 ರಲ್ಲಿ ಮಾಸ್ಟರ್ ಡಿಗ್ರಿ ಪೂರ್ಣಗೊಳಿಸಿದರು. ಅಲ್ಲಿಯೇ ಪಿ.ಹೆಚ್.ಡಿ. ಯನ್ನು ಅಭ್ಯಸ ಮಾಡಿದರು. ಭಾರತಕ್ಕೆ ಹಿಂತಿರುಗಿ ಮಹಾರಾಜಾಸ್ ಕಾಲೇಜ್ ಆಫ್ ಸೈನ್ಸ್ ನಲ್ಲಿ ಬೋಟನಿ ಪ್ರೊಫೆಸರ್ ಆಗಿ ಕೆರೀರ್ ಪ್ರಾರಂಭಿಸಿದ ಅವರು 1932 ರಿಂದ 1934 ರವರೆಗೆ 02 ವರ್ಷಗಳ ಕಾಲ ಅಲ್ಲಿಯೇ ಮುಂದುವರೆಸಿದರು. ನಂತರ ಕೊಯಂಬತ್ತೂರ್ ನಲ್ಲಿ ಏರ್ಪಡಿಸಿದ ಷುಗರ್ ಕೇನ್ ಬ್ರೀಡಿಂಗ್ ಸ್ಟೇಷನ್ ನಲ್ಲಿ ಕಬ್ಬಿನ ಜಲ್ಲೆಗಳ ಮೇಲೆ ಸಂಶೋಧಕರಾಗಿ ಸೇರಿದರು. ಸೈಟೋ ಜೆನೆಟಿಕ್ಸ್ ನಲ್ಲಿ ನಿಪುಣರಾಗಿದ್ದ ಅವರು ಹೆಚ್ಚಿನ ಸಿಹಿಯೊಂದಿಗೆ ಹೆಚ್ಚಿನ ಇಳುವರಿ ನೀಡುವ ಹೊಸ ವಿಧವಾದ ಕಬ್ಬಿನ ತಳಿಯನ್ನು ಸೃಷ್ಟಿಸಿದ್ದಾರೆ. ಅವರು ಮಾಡಿದ ಸಾಧನೆಯಿಂದಲೇ ಇಂದು ನಾವು ಸೇವಿಸುತ್ತಿರುವ ಸಕ್ಕರೆಯಲ್ಲಿ ಆ ಸಿಹಿಯಾದ ರುಚಿಯು ಬಂದಿದೆ.

ಇಷ್ಟಕ್ಕೆ ಅವರ ಸಂಶೋಧನೆಯನ್ನು ನಿಲ್ಲಿಸದೆ 1935 ರಲ್ಲಿ ಸಿ.ವಿ.ರಾಮನ್ ರವರು ಏರ್ಪಡಿಸಿದ ಅಕಾಡೆಮಿ ಆಫ್ ಸೈನ್ಸ್ ನಲ್ಲಿ ಸಂಶೋಧಕರಾಗಿ ಕಾರ್ಯನಿರ್ವಹಿಸಿದರು. ನಂರ ಲಂಡನ್ ನಲ್ಲಿ ಜಾನ್ ಇನ್ಸ್ ಹಾರ್ಟಿಕಲ್ಚರಲ್ ಇನ್ಸ್ಟಿಟ್ಯೂಟ್ ನಲ್ಲಿ ಅಸಿಸ್ಟೆಂಟ್ ಸೈಟಾಲಜಿಸ್ಟ್ ಆಗಿ ಕೆಲಸ ಮಾಡಿ, 1940 ರಿಂದ 1945 ರವರೆಗೂ ಸೈಟಾಲಜಿಸ್ಟ್ ಆಗಿ ಕಾರ್ಯನಿರ್ವಹಿಸಿದರು. ಆ ಸಮಯದಲ್ಲಿ ಹಲವು ಸಸಿಗಳ ಮೇಲೆ ಸಂಶೋಧನೆ ನಡೆಸಿದರು. ಮಾಗ್ನೊಲಿಯಾ ಎಂಬ ಸಸಿಯ ಮೇಲೆ ನಡೆಸಿದ ಸಂಶೋಧನೆಗೆ ಆ ಸಸಿಯಲ್ಲಿ ಅರಳುವ ಬಿಳಿ ಬಣ್ಣದ ಹೂಗಳಿಗೆ ಮಾಗ್ನೊಲಿಯಾ ಕೊಬಸ್ ಜಾನಕಿ ಅಮ್ಮಾಳ್ ಎಂದು ಹೆಸರಿಸಿದರು. 1951 ರಲ್ಲಿ ಭಾರತಕ್ಕೆ ಹಿಂತಿರುಗಿ ಬೊಟಾನಿಕಲ್ ಸರ್ವೇ ಆಫ್ ಇಂಡಿಯಾ (ಬಿ ಎಸ್ ಐ) ವಿಶೇಷ ಅಧಿಕಾರಿಯಾಗಿ ಕೆಲಸ ಮಾಡಿದರು. ಅದರಲ್ಲಿ ಭಾಗವಾಗಿ ಇಡೀ ದೇಶವನ್ನು ಪರ್ಯಾಟನೆ ಮಾಡುತ್ತಾ ವಿವಿಧ ಸಸಿಗಳ ಬಗ್ಗೆ ಸಂಶೋಧನೆ ನಡೆಸಿದ್ದಾರೆ. ಹೊಸತನವನ್ನು ರೂಪಿಸಿದ ಆಕೆ ಖ್ಯಾತ ವಿಜ್ಞಾನಿಯೇ ಅಲ್ಲದೆ ಪರಿಸರವಾದಿಯೂ ಆಗಿದ್ದಾರೆ. ಯಾರಾದರೂ ಪರಿಸರಕ್ಕೆ ಹಾನಿಯನ್ನುಂಟು ಮಾಡುವಂತಹ ಕೆಲಸ ಮಾಡಿದರೆ ಅವರೊಂದಿಗೆ ಧರಣಿ ನಡೆಸುತ್ತಿದ್ದರು.

ವೃಕ್ಷಶಾಸ್ತ್ರದಲ್ಲಿ ಅವರು ನಡೆಸಿದ ಸಂಶೋಧನೆಗಳಿಗೆ ಭಾರತ ಸರ್ಕಾರವು 1977 ರಲ್ಲಿ ಅವರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿದೆ. ಯೂನಿವರ್ಸಿಟಿ ಆಫ್ ಮಿಚಿಗನ್ ಗೌರವ ಡಾಕ್ಟರೇಟ್ ಅನ್ನೂ ನೀಡಿದೆ. 1984 ಫೆಬ್ರವರಿ 7 ರಂದು ಜಾನಕಿ ಅಮ್ಮಾಳ್ ನಿಧನವಾದರು. ಆದರೆ ಇಂದಿಗೂ ಸಕ್ಕರೆಯ ರುಚಿ ಸವಿದಾಗಲೆಲ್ಲಾ ಆಕೆಯನ್ನು ನೆನಸಿಕೊಳ್ಳುತ್ತಲೇ ಇರುತ್ತೇವೆ.


Click Here To Download Kannada AP2TG App From PlayStore!