ಕಾಲುಗಳಿಗೆ ಷೂ ಇಲ್ಲದೆ ಕಾಣಿಸಿಕೊಂಡ ಈ ಪೊಲೀಸ್ ಕಾನ್ಸ್ಟೇಬಲ್ ಸಾಮಾಜಿಕ ತಾಣಗಳಲ್ಲಿ ಹೀರೋ ಆದ.!

ಯಾವುದೇ ಕೆಲಸ ಮಾಡುವವರಾದರೂ ತಾವು ಮಾಡುತ್ತಿರುವ ಕೆಲಸವನ್ನು ಕಷ್ಟವೆಂದೇ ಭಾವಿಸುತ್ತಾರೆ. ಇತರರು ಮಾಡುವ ಕೆಲಸ ಸುಲಭವೆಂದುಕೊಳ್ಳುತ್ತಾರೆ. ಅದರಲ್ಲಿ ಎಷ್ಟೋ ಸುಖವಿದೆ ಅಂದುಕೊಳ್ಳುತ್ತಾರೆ. ಆದರೆ, ಇತರರು ಮಾಡುವ ಕೆಲಸವನ್ನು ಸ್ವತ: ನಾವು ಮಾಡಿದರೇನೇ ಅದರಲ್ಲಿರುವ ಕಷ್ಟ ಗೊತ್ತಾಗುವುದು.ಆದರೆ, ಎಲ್ಲ ಕೆಸಗಳನ್ನೂ ಬದಿಗಿರಿಸಿದರೆ, ಪೊಲೀಸ್ ಕೆಲಸವೆಂದರೆ ಸುಲಭವೆಂದು ಭಾವಿಸುತ್ತಾರೆ. ನಿಜ ಹೇಳಬೇಕೆಂದರೆ ಅದರಷ್ಟು ಕಷ್ಟದ ಕೆಲಸ ಬೇರೊಂದಿಲ್ಲ. ಪ್ರತಿ ದಿನವೂ ಅನೇಕ ಒತ್ತಡಗಳ ನಡುವೆ ಪೊಲೀಸರು ತಮ್ಮ ಕರ್ತವ್ಯ ನಿರ್ವಹಿಸುತ್ತಿರುತ್ತಾರೆ. ಸಮಾಜದಲ್ಲಿ ಶಾಂತಿ, ಭದ್ರತೆಗಳನ್ನು ಕಾಪಾಡುವುದು, ಅಪರಾಧಿಗಳನ್ನು ಹಿಡಿಯುವುದು, ವಿಐಪಿ ಗಳಿಗೆ ಭದ್ರತೆ, ವಾಹನಗಳ ತನಿಖೆ ಮುಂತಾದ ಒತ್ತಡಗಳನ್ನು ಅನುಭವಿಸುತ್ತಿರುತ್ತಾರೆ. ಕೆಲಸದ ಒತ್ತಡದಿಂದಾಗಿ ಕೆಲವೊಮ್ಮೆ ಮನೆಗೂ ಹೋಗಲಾಗದಷ್ಟು ಕಷ್ಟದ ಕೆಲಸಗಳನ್ನು ಪೊಲೀಸರು ಮಾಡುತ್ತಿರುತ್ತಾರೆ. ಪೊಲೀಸರಲ್ಲಿ ಕೆಲವರು ಭ್ರಷ್ಟರೂ ಇರಬಹುದು. ಅವರು ದಿನವೂ ಹಣದ ವಸೂಲಿಯಲ್ಲಿ ನಿತರಾಗಿದ್ದು, ಹಿರಿಯ ಅಧಿಕಾರಿಗಳಿಗೆ ಪೂಸಿ ಹೊಡೆದು ಪ್ರಮೋಷನ್ ಪಡೆಯುತ್ತಿರುತ್ತಾರೆ. ಕೆಲಸವಂತೂ ಮಾಡುವುದೇ ಇಲ್ಲ. ಅಂತಹವರ ಬಗ್ಗೆ ಮಾತನಾಡುವುದು ವ್ಯರ್ಥ. ಈ ನಿಟ್ಟಿನಲ್ಲಿ ಪ್ರಜೆಗಳ ಸೇವೆಯಲ್ಲೇ ನಿರತರಾಗಿ, ಕರ್ತವ್ಯ ನಿರ್ವಹಿಸಲು ತಮ್ಮ ಜೀವನವನ್ನೇ ಮುಡುಪಾಗಿರಿಸುವವರ ಬಗ್ಗೆ ತಪ್ಪದೇ ತಿಳಿದುಕೊಳ್ಳಲೇ ಬೇಕು. ಅವರು ಹಾಗೆ ಕೆಲಸ ಮಾಡುವುದರಿಂದಲೇ ನಾವು ನೆಮ್ಮದಿಯಾಗಿ ಜೀವನ ಸಾಗಿಸುತ್ತಿರುವುದು.

rakesh-kumar
ಈ ಚಿತ್ರದಲ್ಲಿರುವ ಪೊಲೀಸ್ ಹೆಸರು…ರಾಕೇಷ್ ಕುಮಾರ್. ಹರ್ಯಾಣದ ಸೋನಿಪಟ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಯಾಕೆ ಆತ ಅಷ್ಟು ಒದ್ದೆಯಾಗಿದ್ದಾರೆ ಎಂದು ಕೇಳಿದಿರಾ? ಹೌದು ನೀವು ಕೇಳಿದ್ದು ಸರಿ. ಆದರೆ, ಆತ ಹಾಗೆ ಯಾಕೆ ಒದ್ದೆಯಾಗಿದ್ದಾನೆಂದರೆ… ಇತ್ತೀಚೆಗೆ ಸೋನಿಪಟ್ ನಲ್ಲಿ ಸುರಿದ ಬಾರೀ ಮಳೆಯಿಂದಾಗಿ ರಸ್ತೆಗಳಲ್ಲಿ ನೀರು ನಿಂತಿತ್ತು. ಧಾರಾಕಾರವಾಗಿ ಮಳೆ ಸುರಿಯುತ್ತಲೇ ಇತ್ತು. ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಆಗಿತ್ತು. ಆದರೆ, ರಾಕೇಷ್ ಕುಮಾರ್ ಮಾತ್ರ ಅಂತಹ ಮಳೆಯನ್ನೂ ಲೆಕ್ಕಿಸದೆ ಟ್ರಾಫಿಕ್ ಕ್ಲಿಯರ್ ಮಾಡುವುದರಲ್ಲೇ ನಿರತನಾಗಿದ್ದ . ಸಾಲದೆಂಬಂತೆ ಅತನ ಕಾಲುಗಳಲ್ಲಿ ಷೂ ಗಳಿರಲಿಲ್ಲ. ಹಿಂದಿನ ದಿನ ಸುರಿದ ಭಾರೀ ಮಳೆಗೆ ಆತ ನೆನೆದಿದ್ದ ಷೂಗಳನ್ನು ಮನೆಯಲ್ಲೇ ಬಿಟ್ಟು ಬಂದಿದ್ದ. ಮಳೆ ಸುರಿಯುತ್ತಿದ್ದರೂ ಲೆಕ್ಕಿಸದೆ ತನ್ನ ಕರ್ತವ್ಯವನ್ನು ನಿರ್ವಹಿಸುತ್ತಿದ್ದ.
ನೋಡಿದಿರಲ್ಲಾ…ಪೊಲೀಸ್ ಕಾನ್ಸ್ ಟೆಬಲ್ ಗೆ ತನ್ನ ಕರ್ತವ್ಯದ ಬಗ್ಗೆ ಇರುವ ಅಂಕಿತಾ ಮನೋಭಾವ. ಪೊಲೀಸ್ ಡಿಪಾರ್ಟ್ ಮೆಂಟ್ ನಲ್ಲಿ ಎಲ್ಲರೂ ರಾಕೇಷ್ ಕುಮಾರ್ ರಂತಹವರೇ ಇದ್ದರೆ…ಪ್ರಜೆಗಳು ನಿರ್ಭಯವಾಗಿ ಇರಬಹುದಲ್ಲವೇ..? ಆದರೆ, ಪೊಲೀಸರೆಲ್ಲರೂ ಹೀಗೆ ಬದಲಾಗುತ್ತಾರೆಯೇ…?

 


Click Here To Download Kannada AP2TG App From PlayStore!