ಬೌದ್ಧ ಧರ್ಮ ಏನನ್ನು ಹೇಳುತ್ತದೆ, ಅದರಲ್ಲಿನ ವಿಶೇಷಗಳೇನು ಗೊತ್ತಾ..?

ನಮ್ಮ ದೇಶ ಅದೆಷ್ಟೋ ಧರ್ಮಗಳ ತವರೂರು. ಇಲ್ಲಿ ಹುಟ್ಟಿದ ಅದೆಷ್ಟೋ ಧರ್ಮಗಳಲ್ಲಿ ಬೌದ್ಧ ಧರ್ಮವೂ ಒಂದು. ಆ ಧರ್ಮವನ್ನು ಇಂದು ಅನೇಕ ದೇಶಗಳಲ್ಲಿ ಆಚರಿಸಲಾಗುತ್ತಿದೆ. ಗೌತಮ ಬುದ್ಧ ಹಾಕಿಕೊಟ್ಟ ಮಾರ್ಗದಲ್ಲಿ ಸಾಗುತ್ತಿದ್ದಾರೆ. ಇಷ್ಟಕ್ಕೂ ಬೌದ್ಧ ಧರ್ಮ ಏನನ್ನು ಹೇಳುತ್ತದೆ. ಆ ಬಗ್ಗೆ ನೋಡೋಣ ಬನ್ನಿ.

* ಬುದ್ಧ ಎನ್ನುವುದು ಹೆಸರಲ್ಲ, ಬಿರುದು. ಅದರ ಅರ್ಥ ನಿದ್ದೆಯಿಂದ ಎದ್ದವ ಎಂದು.

* ಕರ್ಮವೇ ಮನುಷ್ಯನ ಪುನರ್ಜನ್ಮಕ್ಕೆ, ಕಷ್ಟಗಳಿಗೆ ಕಾರಣ ಎಂದು ಬೋಧಿಸುತ್ತದೆ ಬೌದ್ಧ ಧರ್ಮ.

* ಮಯನ್ಮಾರ್‌ನಲ್ಲಿನ ಲೂನ್‌ಬೋಥೆ ಪಗೋಡಾದಲ್ಲಿ 5,82,357 ಬುದ್ಧನ ವಿಗ್ರಹಗಳಿವೆ.

* ಜಗತ್ತಿನ ಮೂರು ಅತಿ ಎತ್ತರದ ವಿಗ್ರಹಗಳು ಬುದ್ಧನದ್ದು ಎಂಬುದು ವಿಶೇಷ.

* ಏಷ್ಯಾ ಖಂಡದ ಹೊರಗೆ 70 ಲಕ್ಷ ಮಂದಿ ಬೌದ್ಧ ಧರ್ಮೀಯರು ಇದ್ದಾರೆ.

* ಜಪಾನ್‍ನಲ್ಲಿನ ಕೆಲವು ಬೌದ್ಧ ಸಂನ್ಯಾಸಿಗಳು ತಮ್ಮ ದೇಹವನ್ನು ತಾವೇ ಮಮ್ಮಿಯಾಗಿ ಬದಲಾಯಿಸಿಕೊಳ್ಳುವ ಸಾಧನೆ ಮಾಡುತ್ತಾರೆ. ಇದಕ್ಕಾಗಿ ಅವರು ವಿಶೇಷ ಆಹಾರವನ್ನು ತೆಗೆದುಕೊಂಡು ಸಮಾಧಿಯೊಳಕ್ಕೆ ಹೋಗಿ ಬಾಗಿಲು ಮುಚ್ಚಿಕೊಳ್ಳುತ್ತಾರೆ.

* ಶ್ರೀಲಂಕಾದಲ್ಲಿನ ಒಂದು ತೀರ್ಥಕ್ಷೇತ್ರ ನಾಲ್ಕು ಧರ್ಮಗಳಿಗೆ ಹೆಸರಾಗಿದೆ. ಆ ಧರ್ಮಗಳು ಹಿಂದೂ, ಇಸ್ಲಾಂ, ಬೌದ್ಧ ಹಾಗೂ ಕ್ರೈಸ್ತ ಧರ್ಮಗಳು.

* ಥೈಲ್ಯಾಂಡ್, ಬರ್ಮಾ, ಶ್ರೀಲಂಕಾ, ಕಾಂಬೋಡಿಯಾ, ಲಾವೋಸ್ ದೇಶಗಳಲ್ಲಿನ ಬೌದ್ಧರು ಹೊಸ ವರ್ಷವನ್ನು ಮೂರು ದಿನಗಳ ಕಾಲ ಆಚರಿಸುತ್ತಾರೆ.

* ಸ್ವಸ್ತಿಕ್ ಚಿನ್ಹೆ ಮೂರು ಧರ್ಮಗಳಿಗೆ ಪವಿತ್ರವಾದದ್ದು. ಅವು ಹಿಂದೂ, ಬೌದ್ಧ ಹಾಗೂ ಜೈನ ಧರ್ಮಕ್ಕೆ ಪವಿತ್ರವಾದ ಚಿನ್ಹೆ.

* ಬೌದ್ಧಧರ್ಮದಲ್ಲಿ ಆತ್ಮಹತ್ಯೆ ಎಂದರೆ ಸುಕರ್ಮಗಳನ್ನು ಮಾಡಿಕೊಳ್ಳುವ ಸದಾವಕಾಶವನ್ನು ಕಳೆದುಕೊಂಡಂತೆ ಎಂದು ಭಾವಿಸಲಾಗುತ್ತದೆ.

* ಬೌದ್ಧ ಸಂನ್ಯಾಸಿಗಳು ಯಾವುದೇ ಕಾರಣಕ್ಕೂ ಪ್ರಾಣಿಗಳನ್ನು ಸಾಯಿಸಬಾರದು ಎಂಬ ನಿಯಮ ಬೌದ್ಧ ಧರ್ಮದಲ್ಲಿದೆ.

* ಜಗತ್ತಿನಲ್ಲೇ ಚೀನಾದಲ್ಲಿ ಬೌದ್ಧ ಧರ್ಮೀಯರು ಅಧಿಕ. ಅವರ ಸಂಖ್ಯೆ 24 ಕೋಟಿ 40 ಲಕ್ಷ ಮಂದಿ ಬೌದ್ಧ ಧರ್ಮೀಯರಿದ್ದಾರೆ. ಅಂದರೆ ಅಲ್ಲಿನ ಜನಸಂಖ್ಯೆಯ ಶೇ.18.2ರಷ್ಟು ಮಂದಿ.


Click Here To Download Kannada AP2TG App From PlayStore!