ಅಸಲಿ ಮತ್ತು ಕೃತಕ ಜೇನನ್ನು ಗುರುತಿಸುವ ಸುಲಭ ವಿಧಾನಗಳ ಬಗ್ಗೆ ತಿಳಿದುಕೊಳ್ಳಿ.!

ಪ್ರಪಂಚದಲ್ಲಿ ಎಲ್ಲಿನೋಡಿದರೂ ಕಲಬೆರಕೆ ವಸ್ತುಗಳು ಆರ್ಭಟ ಹೆಚ್ಚಾಗಿದೆ. ನಾವು ಕುಡಿಯುವ,ತಿನ್ನುವ ಪ್ರತಿಯೊಂದು ವಸ್ತುವೂ ಕಲಬೆರಕೆಯಾಗಿ ಮಾರಾಟವಾಗುತ್ತಿವೆ.ವ್ಯಾಪಾರಿಗಳು ತಮಗಿಷ್ಟ ಬಂದಹಾಗೆ ಕಲಬೆರಕೆ ವಸ್ತುಗಳನ್ನು ಮಾರಾಟಮಾಡಿ ಲಕ್ಷಗಟ್ಟಲೆ ಹಣ ಸಂಪಾದಿಸುತ್ತಿದ್ದಾರೆ. ಅಸಲಿ ಹಾಗು ನಕಲಿಗಳ ಹಾವಳಿಯಿಂದ ಗ್ರಾಹಕರನ್ನು ರಕ್ಷಿಸಬೇಕಾದ ಸರಕಾರಿ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿದ್ದಾರೆ. ಇದರಿಂದಾಗಿ ವ್ಯಾಪಾರಿಗಳು ತಾವು ಆಡಿದ್ದೇ ಆಟ ವೆಂಬಂತೆ ವರ್ತಿಸುತ್ತಿದ್ದಾರೆ. ಕಲಬೆರಕೆ ಆಹಾರ ಪದಾರ್ಥಗಳಲ್ಲಿ ಜೇನು ಸಹ ಒಳಗೊಂಡಿದೆ.

ಜೇನು ಸೇವಿಸುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ನಮಗೆಲ್ಲರಿಗೂ ಅರಿವಿದೆ. ಹಲವಾರು ವಿಟಮಿನ್ ಗಳು,ಖನಿಜಗಳು ಹಾಗೂ ಪೋಷಕಾಂಶಗಳನ್ನು ಹೊಂದಿರುವ ಜೇನು ಹಲವು ಅನಾರೋಗ್ಯಗಳನ್ನು ಹೊಡೆದೋಡಿಸಿ,ಶರೀರಕ್ಕೆ ಶಕ್ತಿ ನೀಡುವಲ್ಲಿ ಮುಖ್ಯ ಪಾತ್ರವಹಿಸುತ್ತದೆ.ಭಾರತೀಯ ವೈದ್ಯ ಪದ್ಧತಿಯಾದ ಆಯುರ್ವೇದದಲ್ಲಿ,ಔಷಧಗಳೊಂದಿಗೆ ಜೇನನ್ನೂ ಕೊಡುತ್ತಾರೆ. ಈಗಿನ ಕಾಲದಲ್ಲಿ ಜೇನನ್ನು ಉಪಯೋಗಿಸುವವರ ಸಂಖ್ಯೆ ಹೆಚ್ಚಾಗಿ ಬೇಡಿಕೆ ಹೆಚ್ಚಿರುವುದರಿಂದ ವ್ಯಾಪಾರಿಗಳು ಅಧಿಕ ಲಾಭಗಳಿಸುವ ಉದ್ದೇಶದಿಂದ ಕಲಬೆರಕೆ ಅಥವಾ ಕೃತಕ ಜೇನನ್ನು ಮಾರಾಟಮಾಡುತ್ತಿದ್ದಾರೆ. ನೋಡಲು ಎರಡೂ ಒಂದೇರೀತಿ ಇರುವುದರಿಂದ ಜನರು ಅಸಲಿ ಮತ್ತು ನಕಲಿ ಜೇನನ್ನು ಗುರಿತಿಸುವಲ್ಲಿ ವಿಫಲರಾಗುತ್ತಿದ್ದಾರೆ.

ಈ ಕೆಳಗೆ ತಿಳಿಸಿರುವ ಕೆಲವು ವಿಧಾನಗಳಿಂದ ಅಸಲಿ ಮತ್ತು ನಕಲಿ ಜೇನನ್ನು ಸುಲಭವಾಗಿ ಗುರುತಿಸಬಹುದು.

1. ಒಂದು ಟೇಬಲ್ ಸ್ಪೂನ್ ಜೇನನ್ನು ಒಂದು ಗ್ಲಾಸ್ ‘ಟೀ’ ಯಲ್ಲಿ ಹಾಕಿ,ನೀವು ಹಾಕಿದ ಜೇನು ನಕಲಿ ಆಗಿದ್ದರೆ ಒಡನೆಯೇ ಕರಗುತ್ತದೆ.ಅಸಲಿ ಜೇನಾದರೆ ಗ್ಲಾಸಿನ ತಳಭಾಗ ಸೇರುತ್ತದೆ.ಅಷ್ಟೇ ಅಲ್ಲದೆ ನೀರಿನಲ್ಲಿ ಬೇಗ ಕರುಗುವುದಿಲ್ಲ.

2. ಒಂದು ಹತ್ತಿ ಉಂಡೆಯನ್ನು ಜೇನಿನಲ್ಲಿ ಮುಳುಗಿಸಿ ತೆಗೆಯಬೇಕು. ನಂತರ ಬೆಂಕಿ ಕಡ್ಡಿ ಗೀರಿ ಬೆಂಕಿಯನ್ನು ಆ ಉಂಡೆಗೆ ತಾಗಿಸಿದರೆ, ಅಸಲಿ ಜೇನಾಗಿದ್ದರೆ ಹತ್ತಿಉಂಡೆ ಉರಿಯುತ್ತದೆ.ಒಂದು ವೇಳೆ ನೀವು ಹತ್ತಿ ಉಂಡೆಯನ್ನು ಅದ್ದಿತೆಗೆದ ಜೇನು ನಕಲಿ ಆಗಿದ್ದರೆ ಹತ್ತಿ ಉಂಡೆ ಉರಿಯುವುದಿಲ್ಲ.

3. ಒಂದು ತೊಟ್ಟು ಜೇನನ್ನು ಉಗುರಿನ ಮೇಲೆ ಹಾಕಬೇಕು. ಜೇನು ಹರಿದು ಹೋದರೆ ಅದು ನಕಲಿ ಜೇನೆಂದು ತಿಳಿಯಬೇಕು.ಒಂದು ವೇಳೆ ಸ್ಥಿರವಾಗಿದ್ದರೆ ಅದು ಅಸಲಿ ಜೇನೆಂದು ತಿಳಿಯಬೇಕು.

ಈಗ ನಿಮಗೆ ಅಸಲಿ ಹಾಗೂ ನಕಲಿ ಜೇನನ್ನು ಸುಲಭವಾಗಿ ಕಂಡುಹಿಡಿಯುವ ವಿಧಾನ ಗೊತ್ತಾಯಿತಲ್ಲ, ಇನ್ನು ಮುಂದೆ ನೀವು ಜೇನನ್ನು ಖರೀದಿಸುವಾಗ ಈ ಪ್ರಯೋಗಗಳನ್ನು ಮಾಡಿ ಖಚಿತ ಪಡಿಸಿಕೊಂಡ ನಂತರವೇ ಖರೀದಿಸಿ. ನಕಲಿ ಅಥವ ಕೃತಕ ಜೇನಿನಲ್ಲಿರಬಹುದಾದ ರಾಸಾಯನಿಕ ಪದಾರ್ಥಗಳು ನಮ್ಮ ಆರೋಗ್ಯವನ್ನು ಹಾಳು ಮಾಡುತ್ತವೆಂದು ನಿಮಗೆ ಗೊತ್ತಿರಲಿ. ಏನೇ ಆಗಲಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ನಮ್ಮದಲ್ಲವೇ?


Click Here To Download Kannada AP2TG App From PlayStore!

Share this post

scroll to top