ಮಕ್ಕಳು ರಾತ್ರಿವೇಳೆ ನಿದ್ದೆ ಮಾಡದೆ ರಂಪಮಾಡಲು ಕಾರಣಗಳು.!

ತಮ್ಮ ಮಕ್ಕಳು ಸರಿಯಾಗಿ ನಿದ್ದೆ ಮಾಡುತ್ತಿಲ್ಲವೆಂದು ಪ್ರತಿಯೊಬ್ಬ ತಂದೆ ತಾಯಿಗಳು ದೂರುತ್ತಾರೆ. ಮಧ್ಯರಾತ್ರಿಯಲ್ಲಿ ಏಳುತ್ತಾರೆಂದು, ನಿದ್ದೆ ಮಾಡಿಸುವುದು ಬಹಳ ಕಷ್ಟದ ಕೆಲಸವೆಂದು ಹೇಳುತ್ತಾರೆ. ಪ್ರಥಮ ಬಾರಿಗೆ ತಂದೆ ತಾಯಿಯಾದವರು…ಮಗು ಏಕೆ ಅಳುತ್ತದೆಂದು ಕಂಡುಹಿಡಿಯುವುದು ಸ್ವಲ್ಪ ಕಷ್ಟಕರವಾಗಿರುತ್ತದೆ. ಅದರೆ, ಮೊದಲ ಬಾರಿಗೆ ತಂದೆ ತಾಯಿಯಾದವರು, ತಮ್ಮ ಮಗು ಏಕೆ ಅಳುತ್ತದೆಂದು ತಿಳಿದುಕೊಳ್ಳುವುದು ಸ್ವಲ್ಪ ಕಷ್ಟಕರ. ಅದೇ ರೀತಿ ರಾತ್ರಿ ವೇಳೆ ಯಾಕೆ ಏಳುತ್ತಾರೆಂದು ತಿಳಿದುಕೊಳ್ಳುವುದು ಅಷ್ಟೇನೂ ಕಷ್ಟದ ಕೆಲಸವಲ್ಲ. ಸಾಮಾನ್ಯವಾಗಿ,ಹಸಿವಾದಾಗ,ಸೆಖೆಯಾದಾಗ ಇಲ್ಲವೆ ಚಳಿಯಾದಾಗ ಮಕ್ಕಳು ಅಳುತ್ತಾರೆ. ಮಧ್ಯ ರಾತ್ರಿ ಮಕ್ಕಳು ಅತ್ತಾಗ ತಂದೆ ತಾಯಿಯರು ಸಹಜವಗಿಯೇ ಸ್ವಲ್ಪ ಗಲಿಬಿಲಿ ಗೊಳ್ಳುತ್ತಾರೆ.

  • ಮಕ್ಕಳು ರಾತ್ರಿ ನಿದ್ದೆ ಮಾಡದಿರಲು ಅನೇಕ ಕಾರಣಗಳಿರುತ್ತವೆ. ಅವುಗಳಲ್ಲಿ ಯಾವುದೆಂದು ಗುರುತಿಸುವುದು ಬಹಳ ಮುಖ್ಯ. ರಾತ್ರಿ ವೇಳೆ ಮಕ್ಕಳು ಯಾತಕ್ಕೆ ಏಳುತ್ತಾರೆನ್ನುವುದಕ್ಕೆ ಕೆಲವು ಕಾರಣಗಳನ್ನು ತಿಳಿದುಕೊಂಡರೆ… ಅಳುವ ರೀತಿ, ಅಳುವ ಸಮಯ ಮುಂತಾದುವುಗಳನ್ನು ತಿಳಿದುಕೊಂಡು ಜಾಗ್ರತೆ ವಹಿಸಿದರೆ… ಮಗುವನ್ನು ಸಂತೋಷವಾಗಿ ಮಲಗಿಸಬಹುದು.

  • ಮಕ್ಕಳು ಬಹಳ ಸೂಕ್ಷ್ಮ ಮನೋಭಾವದವರಾಗಿರುತ್ತಾರೆ. ಒಂದು ವೇಳೆ ಮಕ್ಕಳಿಗೆ ಚಳಿಯಾಗುತ್ತಿದ್ದರೆ ಅಳುತ್ತಾರೆ. ಸೆಖೆಯಾದರೂ ಅಳುತ್ತಾರೆ. ಆದುದರಿಂದ ಆ ಪರಿಸ್ಥಿತಿಯನ್ನು ಗುರುತಿಸಿ ಸೂಕ್ತ ವಾತಾವರಣವನ್ನು ಕಲ್ಪಿಸಬೇಕು. ಮುಖ್ಯವಾಗಿ ಬಟ್ಟೆ ಒದ್ದೆಯಾದರೆ ಮಕ್ಕಳು ಅಳುತ್ತಾರೆ. ಆದುದರಿಂದ ಹಾಸಿಗೆ ಒದ್ದೆಯಾದ ತಕ್ಷಣ ಬಟ್ಟೆ ಬದಲಾಯಿಸಬೇಕು.
  • ಮಕ್ಕಳಿಗೆ ಹಲ್ಲುಗಳು ಹುಟ್ಟುವಾಗ ವಸಡುಗಳು ನೋಯುತ್ತವೆ ಇಲ್ಲವೆ ತುರಿಕೆಯುಂಟಾಗುತ್ತದೆ. ಇದರಿಂದಾಗಿ ರಾತ್ರಿಯಲ್ಲಿ ಎದ್ದು ಅಳುತ್ತಾರೆ. ಮಕ್ಕಳಿಗೆ ಹಲ್ಲುಗಳು ಹುಟ್ಟುವ ಸಮಯದಲ್ಲಿ ಪ್ರತಿಯೊಂದು ವಸ್ತುವನ್ನೂ ಬಾಯಿಗೆ ಹಾಕಿಕೊಳ್ಳುತ್ತಾರೆ ಇದರಿಂದಾಗಿ ಸೋಂಕು ಉಂಟಾಗುವ ಸಾಧ್ಯತೆಯಿದೆ. ಆದುದರಿಂದ ಹಲ್ಲುಗಳು ಹುಟ್ಟುವಾಗ ಮಕ್ಕಳು ಯಾವುದೇ ವಸ್ತುವನ್ನು ಬಾಯಿಗೆ ಹಾಕಿಕೊಳ್ಳದಂತೆ ಜಾಗ್ರತೆವಹಿಸಬೇಕು.

  • ಮಕ್ಕಳಿಗೆ ಹೊಟ್ಟೆ ಬಹಳ ಚಿಕ್ಕದಾಗಿರುತ್ತದೆ. ಸ್ವಲ್ಪವೇ ತಿನ್ನುತ್ತಾರೆ,ಕುಡಿಯುತ್ತಾರೆ. ಹೀಗಾಗಿ ಬೇಗ ಜೀರ್ಣವಾಗುತ್ತದೆ. ಪ್ರಮುಖವಾಗಿ ತಾಯಿಯ ಹಾಲನ್ನು ಕುಡಿಯುವ ಮಕ್ಕಳು ರಾತ್ರಿವೇಳೆ ಹೆಚ್ಚುಬಾರಿ ಏಳುತ್ತಿರುತ್ತಾರೆ. ಯಾಕೆಂದರೆ… ತಾಯಿಹಾಲು ಬೇಗ ಜೀರ್ಣವಾಗುತ್ತದೆ. ಮಕ್ಕಳಿಗೆ ಅಜೀರ್ಣವಾದಾಗ…ಹೊಟ್ಟೆ ನೋವುಬರುತ್ತದೆ. ಇದರಿಂದಾಗಿಯೂ ರಾತ್ರಿವೇಳೆ ಎದ್ದು ಅಳುತ್ತಾರೆ.
  • ಮಕ್ಕಳ ಶರೀರ ಎಂಟು ಗಂಟೆ ಒಂದೇ ಸಮನೆ ಮಲಗಲು ಅನುಕೂಲಕರವಾಗಿರುವುದಿಲ್ಲ. ಹಾಗಾಗಿ ಪದೇ ಪದೇ ಏಳುತ್ತಿರುತ್ತಾರೆ. ತೊಂದರೆ ಆಯಿತೆಂದು ಭಾವಿಸದೆ ಮತ್ತೆ ನಿದ್ದೆ ಮಾಡಿಸಬೇಕು.

Click Here To Download Kannada AP2TG App From PlayStore!