ನಿಗೂಢ ವಿಷಯಗಳನ್ನು ಚಿದಂಬರ ರಹಸ್ಯ ಎನ್ನುವುದಕ್ಕೆ ಕಾರಣವೇನು? ಚಿದಂಬರ ದೇವಾಲಯದಲ್ಲಿರುವ ಆ 3 ರಹಸ್ಯಗಳಾವುವು..?!!

ತಮಿಳುನಾಡಿನಲ್ಲಿರುವ ಶೈವ ಕ್ಷೇತ್ರಗಳಲ್ಲಿ ಚಿದಂಬರಂ ದೇವಾಲಯವೂ ಒಂದು. ಶಿವನು ‘ಓಂ’ ಬೀಜಾಕ್ಷರದೊಂದಿಗೆ ಚಿದಂಬರಂನಲ್ಲಿ ನೆಲಸಿರುವಂತೆ ಪುರಾಣಗಳಲ್ಲಿ ಹೇಳಲಾಗಿದೆ. ಶಿವನಿಗೆ ಸಂಬಂಧಿಸಿದ 5 ಪ್ರಸಿದ್ಧ ಕ್ಷೇತ್ರಗಳಲ್ಲಿ ಚಿದಂಬರಂ ಒಂದಾಗಿದೆ. ಶೈವರಿಗೆ ಈ ಕ್ಷೇತ್ರವು ಅತ್ಯಂತ ಪ್ರಿಯವಾದದ್ದು. ಭಕ್ತರು ಇದನ್ನು ಶಿವನ ಆಕಾಶ ಕ್ಷೇತ್ರವೆಂದು ಪರಿಗಣಿಸುತ್ತಾರೆ. ಅಲ್ಲಿರುವ ನಟರಾಜನ ವಿಗ್ರಹವು ಪ್ರಪಂಚ ಪ್ರಖ್ಯಾತಿ ಹೊಂದಿದೆ ಎಂದು ಬಹಳಷ್ಟು ಮಂದಿಗೆ ತಿಳಿದಿರುವ ವಿಷಯ. ಪಾಶ್ಚಾತ್ಯ ವಿಜ್ಞಾನಿಗಳು ಪರಿಶೋಧನೆ ನಡೆಸಿದ ನಂತರ ನಟರಾಜನ ವಿಗ್ರಹದ ಕಾಲಿನ ಹೆಬ್ಬೆರಳು, ಭೂಮಿಯ ಅಯಸ್ಕಾಂತ ಕ್ಷೇತ್ರಕ್ಕೆ ಮಧ್ಯ ಬಿಂಧು ಎಂದು ಹೇಳಿದ್ದಾರೆ. ತಮಿಳಿನ ಹೆಸರಾಂತ ವಿದ್ವಾಂಸರಾದ ತಿರುಮೂಲರ್ ತಮ್ಮ ‘ತಿರುಮಂದಿರಂ’ ಎಂಬ ಗ್ರಂಥದಲ್ಲಿ ಈ ವಿಷಯವನ್ನು ತಿಳಿಸಿದ್ದಾರೆ.

Image result for chidambaram temple

ಈ ದೇವಾಲಯದಲ್ಲಿರುವ ನಟರಾಜನ ರೂಪವು ಸ್ವಾಮಿಯವರು ಸ್ಪಟಿಕಲಿಂಗದ ರೂಪದಲ್ಲಿರುವ ಚಂದ್ರಮೌಳೀಶ್ವರ ರೂಪವೇ. ರೂಪವಿಲ್ಲದ ದೈವಸಾನ್ನಿಧ್ಯ ಎನ್ನುವ 3 ರೂಪಗಳಲ್ಲಿ ಸ್ವಾಮಿ ದರ್ಶನವಾಗುತ್ತದೆ. 3ನೆಯ ರೂಪವೇ ಚಿದಂಬರ ರಹಸ್ಯ. ಆದ್ದರಿಂದಲೇ ಕೆಲವು ವಿಷಯಗಳ ಬಗ್ಗೆ ಚರ್ಚಿಸುವಾಗ ಅದರ ಸುಳಿವು ಸಿಗದಿದ್ದಲ್ಲಿ ಅದನ್ನು ಚಿದಂಬರ ರಹಸ್ಯ ಎನ್ನುತ್ತಾರೆ.

ಇಲ್ಲಿನ ಅದ್ಭುತವಾಧ ವಿಶೇಷಗಳೆಂದರೆ, ಇದು ಪ್ರಪಂಚ ಅಯಸ್ಕಾಂತ ಕ್ಷೇತ್ರ ಬಿಂಧುವಾಗಿದ್ದು, ಭೂಮಿ, ಆಕಾಶ, ವಾಯು, ನೀರು, ಅಗ್ನಿ ಈ ಐದನ್ನು ಪಂಚಭೂತಗಳೆನ್ನುತ್ತಾರೆ. ಇವುಗಳಲ್ಲಿ ಚಿದಂಬರಂ ಆಕಾಶಕ್ಕೆ, ಕಾಳಹಸ್ತಿ ವಾಯುವಿಗೆ, ಕಂಚಿಯ ಏಕಾಂಬರೇಶ್ವರನು ಭೂಮಿಗೆ ಪ್ರತೀತಿಗಳಾಗಿವೆ.

Image result for chidambaram temple

ಆದರೆ ಆಶ್ಚರ್ಯವೆನಿಸುವ ಇನ್ನೊಂದು ವಿಷಯವೇನೆಂದರೆ ಈ ಮೂರೂ ದೇವಾಲಯಗಳೂ 79 ಡಿಗ್ರಿ 41 ನಿಮಿಷಗಳ ಒಂದೇ ರೇಖಾಂಶದ ಮೇಲಿವೆ.
ಮನುಷ್ಯನಿಗೆ ನವನಾಡಿ (ರಂಧ್ರ) ಗಳು 9 – ಈ ದೇವಾಲಯಕ್ಕಿರುವಪ್ರವೇಶ ದ್ವಾರಗಳೂ 9
ಮನುಷ್ಯನು ದಿನಕ್ಕೆ 21600 ಬಾರಿ (ಉಚ್ಛ್ವಾಸ) ಗಾಳಿಯನ್ನು ಒಳಕ್ಕೆ ಎಳೆದುಕೊಳ್ಳುತ್ತಾನೆ – ದೇವಾಲಯದ ಮೇಲ್ಭಾಗದಲ್ಲಿ 21600 ಚಿನ್ನದ ತಗಡನ್ನು ಅಳವಡಿಸಲಾಗಿದೆ.
ಮನುಷ್ಯನ ದೇಹದಲ್ಲಿ 72000 ನಾಡಿಗಳಿವೆ – ಚಿನ್ನದ ತಗಡನ್ನು ಅಳವಡಿಸಲು ಬಳಸಲಾಗಿರುವ ಮೊಳೆಗಳು 72000

ಈ ದೇವಾಲಯದಲ್ಲಿ ಎಡಭಾಗದಲ್ಲಿರುವ “ಪೊನ್ನಾಂಬಳಂ” ನಮ್ಮ ಹೃದಯ ಸ್ಥಾನ. ‘ಪಂಚಾಕ್ಷರ ಪಡಿ’ ಯನ್ನು ಹತ್ತಿ ಅಲ್ಲಿಗೆ ಹೋಗಬಹುದು. ಪಂಚಾಕ್ಷರಿಯು ನ + ಮ + ಶಿ + ವಾ + ಯ ಅನ್ನು ಸೂಚಿಸುತ್ತದೆ. ‘ಕನಕ ಸಭ’ ದಲ್ಲಿರುವ 4 ಕಂಬಗಳು 4 ವೇದಗಳಿಗೆ, ‘ಪೊನ್ನಾಂಬಳಂ’ ನಲ್ಲಿನ 28 ಕಂಬಗಳು 28 ಶೈವ ಆಗಮಗಳಿಗೆ ಗುರುತುಗಳಾಗಿವೆ. ಶಿವಾರಾಧನೆಯ ಪದ್ಧತಿಗಳು 64 ಇಂಟು 64 ಕಂಬಗಳು ಆಧಾರವಾಗುತ್ತಿವೆ. 64 ಕಲೆಗಳಿವೆ ಎಂಬುದಕ್ಕೆ ಇವು ಸಾಕ್ಷಿಯಾಗಿವೆ. ಅಡ್ಡಲಾಗಿರುವ ಕಂಬಗಳು ರಕ್ತ ಸಂಚಲನಾ ನಾಳಗಳಂತೆ. 9 ಕಳಶಗಳು 9 ವಿಧದ ಶಕ್ತಿಗಳಿಗೆ, ಅರ್ಧ ಮಂಟಪದಲ್ಲಿರುವ 6 ಕಂಬಗಳು 6 ಶಾಸ್ತ್ರಗಳಿಗೆ,

ಅದರ ಪಕ್ಕದಲ್ಲಿಯೇ ಇರುವ ಮಂಟಪದಲ್ಲಿನ 18 ಕಂಬಗಳು 18 ಪುರಾಣಗಳಿಗೆ ಗುರುತುಗಳಾಗಿ ನಿಂತಿವೆ. ಪಾಶ್ಚಾತ್ಯ ವಿಜ್ಞಾನಿಗಳು ನಟರಾಜನ ನೃತ್ಯವನ್ನು ಕಾಸ್ಮಿಕ್ ಡ್ಯಾನ್ಸ್ ಎಂದು ಬಣ್ಣಿಸಿದ್ದಾರೆ. ಮೂಲವರ್ ರವರು ಹೇಳಿದ ಈ ವಿಷಯಗಳು ಶಾಸ್ತ್ರ ಸಮ್ಮತವೆಂದು ಪಾಶ್ಚಾತ್ಯ ಸಂಶೋಧಕರು ನಿರೂಪಿಸಲು 8 ವರ್ಷಗಳು ಬೇಕಾಯಿತು. ದೇವಾಲಯದಲ್ಲಿ ಸುಂದರವಾದ 4 ಕಂಬಗಳು ಒಂದೊಂದು ದಿಕ್ಕಿಗೆ ಒಂದೊಂದಿರುತ್ತವೆ. ಒಳಭಾಗದಲ್ಲಿ ಕಳಾ ನೈಪುಣ್ಯವು ತುಂಬಿ ತುಳುಕುತ್ತಿರುತ್ತದೆ. ನೃತ್ಯಕ್ಕೆ ತವರುಮನೆಯಂತಿರುವ ಈ ದೇವಾಲಯದಲ್ಲಿ ಪ್ರತಿಯೊಂದು ಕಲ್ಲು, ಕಂಬಗಳ ಮೇಲೆ ಭರತನಾಟ್ಯದ ಭಂಗಿ ಗಳನ್ನು ಕಾಣಬಹುದು. ಶಿವನು ಎಷ್ಟೋ ನೈಪುಣ್ಯತೆಯಿಂದ ನೃತ್ಯ ಮಾಡಿರುವುದರಿಂದಲೇ ಆತನಟರಾಜಸ್ವಾಮಿ ಎಂದು ಪ್ರಖ್ಯಾತನಾಗಿದ್ದಾನೆ ಎಂದು ಹೇಳಲಾಗಿದೆ.

ಚಿದಂಬರಂನಲ್ಲಿರುವ ಅದ್ಭುತಗಳನ್ನು ನೀವೂವೀಕ್ಷಿಸಬೇಕೆಂದುಕೊಂಡಲ್ಲಿ ತಪ್ಪದೇ ತಮಿಳುನಾಡಿಗೆ ಬೇಟಿ ನೀಡಬೇಕಾದ್ದೆ.

 


Click Here To Download Kannada AP2TG App From PlayStore!