ಸಂದರ್ಶನದಲ್ಲಿ…ಒಂದು ಬ್ಲಾಂಕ್ ಪೇಪರ್ ಕೊಟ್ಟು ಸಹಿ ಹಾಕು ಎಂದರೆ ಈತ ಜಾಣತನದಿಂದ ಏನು ಮಾಡಿದ ಗೊತ್ತಾ??

ಒಬ್ಬಾತ ಸಂದರ್ಶನಕ್ಕೆ ಹಾಜರಾದ…ಇಂಟರ್ವ್ಯೂವ್ ಮಾಡುವ ವ್ಯಕ್ತಿ…ಉದ್ಯೋಗಕ್ಕಾಗಿ ಬಂದ ಅಭ್ಯರ್ಥಿಗೆ ಸಂಬಂಧಿಸಿದ ಕೆಲವು ಪರ್ಸನಲ್ ಪ್ರಶ್ನೆಗಳನ್ನು ಕೇಳಿದ ಬಳಿಕ….ಸಹಿಯನ್ನು ಅವಲಂಭಿಸಿ ವ್ಯಕ್ತಿಯೊಬ್ಬರ ವ್ಯಕ್ತಿತ್ವವನ್ನು ಹೇಳಬಹುದೆಂದು ಹೇಳುತ್ತಾ….ಎಲ್ಲಿ…ಈ ಬಿಳಿ ಕಾಗದ ಮೇಲೆ ನಿಮ್ಮ ಸಹಿ ಹಾಕು ಎಂದು ಕಾಗದವನ್ನು ಆತನ ಕೈಗೆ ಕೊಟ್ಟನಂತೆ!! ಆ ವೈಟ್ ಪೇಪರ್ ತೆಗೆದುಕೊಂಡ ಅಭ್ಯರ್ಥಿ ಸ್ವಲ್ಪ ಹೊತ್ತು ಆಲೋಚಿಸಿ ಕಾಗದವನ್ನು ನಾಲ್ಕು ಕಡೆಯಿಂದ ಮಡಚಿ…ಆ ನಾಲ್ಕು ಮೂಲೆಗಳು ಕವರ್ ಆಗುವಂತೆ ಸಹಿ ಹಾಕಿ ಇಂಟರ್ವ್ಯೂವರ್‌ಗೆ ಕೊಟ್ಟನಂತೆ..! ಅದನ್ನು ನೋಡಿ ಇಂಟರ್ವ್ಯೂವರ್…ಯಸ್ ಯೂ ಆರ್ ಸೆಲೆಕ್ಟೆಡ್ ಎಂದನಂತೆ.!

ಇಷ್ಟಕ್ಕೂ ಆ ರೀತಿ ಬ್ಲಾಂಕ್ ಕಾಗದ ಕೊಟ್ಟು ಸಹಿ ಹಾಕು ಎಂದು ಯಾಕೆ ಹೇಳಿದ.?

ಬ್ಲಾಂಕ್ ಪೇಪರ್ ಮೇಲೆ ಸಹಿ ಹಾಕು ಎಂದ ಕೂಡಲೆ ಸಹಿ ಹಾಕಿದ್ದರೆ…ಅಭ್ಯರ್ಥಿಗೆ ಲೋಕಜ್ಞಾನ ಇಲ್ಲ ಎಂದರ್ಥ. ಈ ರೀತಿ ಮಾಡು ಎಂದು ಹೇಳುವುದು…ಅಭ್ಯರ್ಥಿ ಕಾಮನ್ ಸೆನ್ಸನ್ನು, ಪ್ರೆಸೆನ್ಸ್ ಆಫ್ ಮೈಂಡನ್ನು ಪರೀಕ್ಷಿಸಲು.! ಒಂದು ವೇಳೆ ಸೈನ್ ಮಾಡು ಎಂದರೂ ಆತನನ್ನು ನೆಗಟೀವ್ ಆಗಿ ಅರ್ಥ ಮಾಡಿಕೊಳ್ಳಬಹುದು…ಸೋ ಆ ರೀತಿಯ ಆಪತ್ತಿನ ಪರಿಸ್ಥಿತಿಯನ್ನು ಬುದ್ಧಿವಂತಿಕೆಯಿಂದ ಡೀಲ್ ಮಾಡಿದ್ದರಿಂದ….ಅಭ್ಯರ್ಥಿಯ ಪ್ರೆಸೆನ್ಸ್ ಆಫ್ ಮೈಂಡ್ ಇಷ್ಟವಾಗಿ ಉದ್ಯೋಗ ಕೊಟ್ಟರಂತೆ!

 

 

ಮದುವೆಗೂ ಮುನ್ನ ಅರಿಶಿಣವನ್ನು ವಧುವರರಿಗೆ ಯಾಕೆ ಹಚ್ಚುತ್ತಾರೆ ಗೊತ್ತಾ..?

 

ಅರಿಶಿಣವನ್ನು ನಾವು ನಿತ್ಯ ಅಡುಗೆಯಲ್ಲಿ ಹೆಚ್ಚಾಗಿ ಬಳಸುತ್ತೇವೆ. ಅವುಗಳಷ್ಟೇ ಅಲ್ಲ ಅರಿಶಿಣವನ್ನು ಶುಭಕಾರ್ಯಗಳಲ್ಲಿ ಹೆಚ್ಚಾಗಿ ಬಳಸುತ್ತೇವೆ. ಮುಖ್ಯವಾಗಿ ಮದುವೆ ವಿಚಾರಕ್ಕೆ ಬಂದರೆ ಅರಿಶಿಣ ಇಲ್ಲದೆ ಆ ಶುಭಕಾರ್ಯ ನಡೆಯಲ್ಲ. ಆ ಸಂಭ್ರಮದಲ್ಲಿ ಪ್ರತಿ ಸಂದರ್ಭದಲ್ಲೂ ಅರಿಶಿಣ ಬಳಕೆ ಜಾಸ್ತಿಯೇ ಇರುತ್ತದೆ. ಮುಖ್ಯವಾಗಿ ವಧುವರರಿಗೆ ಮಾಡುವ ಮಂಗಳಸ್ನಾನಕ್ಕೂ ಮೊದಲು ಅವರಿಗೆ ಅರಿಶಿಣ ಚೆನ್ನಾಗಿ ಹಚ್ಚುತ್ತಾರೆ. ಆದರೆ ಹಿರಿಯರು ಹೀಗೆ ಏಕೆ ಮಾಡುತ್ತಾರೆ ಗೊತ್ತಾ..? ಅದರ ಬಗ್ಗೆ ಈಗ ನೋಡೋಣ..!

1. ಮುಖದ ಮೇಲೆ ಉಂಟಾಗುವ ಮೊಡವೆಗಳು, ಮಚ್ಚಗಳಂತಹವನ್ನು ತೊಲಗಿಸಲು ಅರಿಶಿಣ ಚೆನ್ನಾಗಿ ಕೆಲಸ ಮಾಡುತ್ತದೆ. ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ವಧು ವರರು ಇನ್ನಷ್ಟು ಹೊಳಪಿನಿಂದ ಕಾಣಬೇಕೆಂಬ ಉದ್ದೇಶದಿಂದ ಅರಿಶಿಣವನ್ನು ಹಚ್ಚಿ ಸ್ನಾನ ಮಾಡಿಸುತ್ತಾರೆ.

2. ಅರಿಶಿಣದಲ್ಲಿ ಕರ್ಕ್ಯುಮಿನ್ ಎಂಬ ಒಂದು ಪವರ್‌ಫುಲ್ ಆಕ್ಸಿಡೆಂಟ್ ಇರುತ್ತದೆ. ಇದು ಆಂಟಿ ಡಿಪ್ರೆಸೆಂಟ್ ಆಗಿ ಕೆಲಸ ಮಾಡುತ್ತದೆ. ಎಂದರೆ ಮಾನಸಿಕ ಒತ್ತಡ, ಆತಂಕವನ್ನು ಕಡಿಮೆ ಮಾಡುತ್ತದೆ. ತಲೆನೋವನ್ನೂ ನಿವಾರಿಸುತ್ತದೆ. ಇವೆಲ್ಲಾ ಇಲ್ಲದಿದ್ದರೆ ಅಲ್ಲವೇ ಲವಲವಿಕೆಯಿಂದ ಇರಲು ಸಾಧ್ಯವಾಗುತ್ತದೆ. ಹಾಗಾಗಿಯೇ ವಧುವರರಿಗೆ ಅರಿಶಿಣ ಹಚ್ಚುತ್ತಾರೆ.

3. ಆಂಟಿ ಸೆಪ್ಟಿಕ್ ಗುಣಗಳು ಅರಿಶಿಣದಲ್ಲಿ ಹೇರಳವಾಗಿ ಇವೆ. ಇವು ದೇಹದ ಮೇಲೆ ಆದ ಗಾಯ, ಹೊಡೆತಗಳನ್ನು ಶೀಘ್ರವಾಗಿ ಗುಣವಾಗುವಂತೆ ಮಾಡುತ್ತೆ. ಅವುಗಳ ಸ್ಥಾನದಲ್ಲಿ ಏರ್ಪಡುವ ಮಚ್ಚೆಗಳನ್ನು ಸಹ ತೊಲಗಿಸುತ್ತದೆ. ಆದಕಾರಣ ವಧುವರರಿಗೆ ಹಚ್ಚಲು ಆದ್ಯತೆ ನೀಡುತ್ತಾರೆ.

4. ಹಿಂದೂ ಸಂಪ್ರದಾಯ ಪ್ರಕಾರ ಅರಿಶಿಣ ಎಂಬುದು ಶುಭಕಾರ್ಯಕ್ಕೆ ಚಿನ್ಹೆ. ಆರೋಗ್ಯವನ್ನು ಉಂಟು ಮಾಡುವ ಔಷಧಿ. ಸಂಪತ್ತನ್ನು ಕೊಡುವ ಕಲ್ಪವೃಕ್ಷ. ಹಾಗಾಗಿ ಇದನ್ನು ವಧೂವರರಿಗೆ ಹಚ್ಚುತ್ತಾರೆ.

5. ದೇಹದಲ್ಲಿ ಸೇರಿಕೊಂಡಿರುವ ದುಷ್ಟ ಶಕ್ತಿಗಳನ್ನು ಹೊರಗೆ ಓಡಿಸುವ ಪವರ್ ಅರಿಶಿಣಕ್ಕೆ ಇದೆಯಂತೆ. ಹಾಗಾಗಿ ವಧೂವರರ ಮೇಲೆ ಯಾವುದೇ ಗಾಳಿ, ಧೂಳು ಇಲ್ಲದಿರಲಿ ಎಂಬ ಉದ್ದೇಶದಿಂದ ಅರಿಶಿಣ ಹಚ್ಚುತ್ತಾರೆ.

6. ಅರಿಶಿಣದ ಜತೆಗೆ, ಚಂದನ, ರೋಜ್ ವಾಟರ್‌ನಂತಹ ಪದಾರ್ಥಗಳನ್ನು ಬೆರೆಸಿ ವಧೂವರರಿಗೆ ಹಚ್ಚಿ ಮಂಗಳ ಸ್ನಾನ ಮಾಡಿಸುತ್ತಾರೆ. ಇದರಿಂದ ಅವರಲ್ಲಿ ಮದುವೆ ಕಳೆ ಇನ್ನಷ್ಟು ಹೆಚ್ಚುತ್ತದೆ ಎಂದು ಹಲವರು ಭಾವಿಸುತ್ತಾರೆ.


Click Here To Download Kannada AP2TG App From PlayStore!