ರಾತ್ರಿ ವೇಳೆ ಮಕ್ಕಳು ಹಾಸಿಗೆಯಲ್ಲಿ ಮೂತ್ರ ವಿಸರ್ಜನೆ ಮಾಡದೇ ಇರಲು ಏನು ಮಾಡಬೇಕು!? ಇಲ್ಲಿದೆ ಪರಿಹಾರ.

ಹೆಚ್ಚಿನ ಮಕ್ಕಳು 10-12 ವರ್ಷ ವಯಸ್ಸಾದರೂ ರಾತ್ರಿ ವೇಳೆ ನಿದ್ದೆಯಲ್ಲಿ ತಮಗೇ ತಿಳಿಯದಂತೆ ಹಾಸಿಗೆಯಲ್ಲಿ ಮೂತ್ರವಿಸರ್ಜನೆ ಮಾಡುತ್ತಾರೆ. ಕೆಲವು ದೊಡ್ಡವರಲ್ಲೂ ಈ ಸಮಸ್ಯೆ ಕಾಣುತ್ತದೆ. ಬಿಜೀ ಜೀವನದಲ್ಲಿ ಮಕ್ಕಳು ಒದ್ದೆ ಮಾಡಿದ ಹಾಸಿಗೆಯನ್ನು ಒಗೆಯಲೂ ಸಮಯ ಇರುವುದಿಲ್ಲ. ಒಗೆಯದಿದ್ದರೆ ವಾಸನೆಯನ್ನು ತಡೆಯಲಾಗುವುದಿಲ್ಲ. ಇದಕ್ಕೆ ಏನು ಮಾಡಬೇಕೆಂಬ ತಲೆ ನೋವಾಗಿದೆಯೇ? ಈ ಉಪಾಯವನ್ನು ಕ್ರಮ ತಪ್ಪದೇ ಪಾಲಿಸುವುದರಿಂದ ಮಕ್ಕಳು ಹಾಸಿಗೆ ಒದ್ದೆ ಮಾಡುವುದನ್ನು ಹೋಗಲಾಡಿಸಬಹುದು.

ಮಾಡಬೇಕಾದದ್ದು :-
ರಾತ್ರಿ ಮಲಗುವ ಮುನ್ನ ಚಿಕ್ಕ ಚಿಕ್ಕ ತುಂಡು ಮಾಡಿದ ಒಣ ಖರ್ಜೂರವನ್ನು ಹಾಲಿನಲ್ಲಿ ಹಾಕಿ ಕುದಿಸಿ, ತಣ್ಣಗಾದ ನಂತರ ಮಕ್ಕಳಿಗೆ ಕುಡಿಸುವುದರಿಂದ ಖರ್ಜೂರದಲ್ಲಿರುವ ಆಕ್ಸಾಲಿಕ್ ಆಸಿಡ್, ಜೀರ್ಣಕ್ರಿಯೆಯನ್ನು ವೇಗಗೊಳಿಸುತ್ತದೆ. ಇದರಿಂದ ದೇಹದಲ್ಲಿ ದ್ರವರೂಪದಲ್ಲಿರುವ ಮಲಿನವನ್ನು ಶೀಘ್ರವಾಗಿ ಮೂತ್ರದ ಮೂಲಕ ಹೊರಹಾಕುತ್ತವೆ. ಮೊದಲೇ ದ್ರವರೂಪದ ಮಲಿನವನ್ನು ಹೊರಹಾಕಿರುವುದರಿಂದ ನಿದ್ದೆ ಮಾಡುವ ಸಮಯದಲ್ಲಿ ಮೂತ್ರ ವಿಸರ್ಜನೆ ಮಾಡುವುದನ್ನು ತಡೆಗಟ್ಟಬಹುದು.

ಹಾಸಿಗೆಯಲ್ಲಿ ಮೂತ್ರ ವಿಸರ್ಜನೆ ಮಾಡಲು ಮುಖ್ಯ ಕಾರಣಗಳು :-
ಮಕ್ಕಳಲ್ಲಿ ಭಯ, ಅಶಾಂತಿ, ಪ್ರೀತಿಯಿಂದ ವಂಚಿಸಲ್ಪಡುವುದು, ಭದ್ರತೆ ಇಲ್ಲದಿರುವಂತಹ ಭಾವನೆ, ನರಗಳ ಬಲಹೀನತೆ.

ಪೋಷಕರು ಮಾಡಬೇಕಾದ್ದು :-
ರಾತ್ರಿ ವೇಳೆ ಮಕ್ಕಳು ಮೂತ್ರ ವಿಸರ್ಜನೆಗೆ ಎಬ್ಬಿಸಿದಾಗ ಕೋಪಗೊಳ್ಳಬೇಡಿ. ನೀವು ಕೋಪಗೊಳ್ಳುತ್ತೀರಿ ಎಂಬ ಭಯದಿಂದ ಹಾಸಿಗೆಯಲ್ಲಿಯೇ ವಿಸರ್ಜಿಸುತ್ತಾರೆ.
ಮನೆಯಲ್ಲಿ ಪದೇ ಪದೇ ಜಗಳವಾಡುತ್ತಿದ್ದರೆ ಮಕ್ಕಳು ತಮಗೆ ಭದ್ರತೆ ಇಲ್ಲ ಎಂಬ ಭಾವನೆಗೊಳಗಾಗುತ್ತಾರೆ.
ಆಗಿಂದ್ದಾಗ್ಗೆ ಮಕ್ಕಳಲ್ಲಿ ಧೈರ್ಯವನ್ನು ತುಂಬಬೇಕು.
ರಾತ್ರಿ ಮಲಗುವ ಮುನ್ನ ಮೂತ್ರ ವಿಸರ್ಜನೆ ಮಾಡಿಸುವ ಪದ್ಧತಿಯನ್ನು ರೂಢಿ ಮಾಡಬೇಕು.
6 ವರ್ಷಗಳು ತುಂಬಿದರೂ ಮಗು ಹಾಸಿಗೆಯಲ್ಲಿ ಮೂತ್ರ ವಿಸರ್ಜಿಸುತ್ತಿದೆ ಎಂದರೆ ತಕ್ಷಣವೇ ಯುರಾಲಜಿಸ್ಟ್ ಅನ್ನು ಸಂಪರ್ಕಿಸಬೇಕು.

 


Click Here To Download Kannada AP2TG App From PlayStore!