ATMನಲ್ಲಿ ಹಣ ಡ್ರಾ ಮಾಡಿದಾಗ ನಕಲಿ ನೋಟು ಬಂದದ್ರೆ ಏನು ಮಾಡಬೇಕೆಂದು ತಿಳಿದುಕೊಳ್ಳಿ..!

ಒಂದು ಕಾಲ ಇತ್ತು, ಬ್ಯಾಂಕ್‌ನಲ್ಲಿರುವ ಹಣ ಡ್ರಾ ಮಾಡಬೇಕಾದರೆ ಬ್ಯಾಂಕಿಗೆ ಹೋಗಿ, ಫಾಂ ತುಂಬಿಸಿ ಕ್ಯಾಶಿಯರ್‌ಗೆ ಕೊಟ್ಟರೆ ಸ್ವಲ್ಪ ಸಮಯ ಕಾದ ಬಳಿಕ ಸಾಲಿನಲ್ಲಿ ನಿಂತು ಹಣ ಪಡೆದುಕೊಳ್ಳಬೇಕಾಗಿತ್ತು. ಆದರೆ ಈಗ ಆ ರೀತಿ ಇಲ್ಲ. ಅತ್ಯಾಧುನಿಕ ತಂತ್ರಜ್ಞಾನದಿಂದ ಕೂಡಿರುವ ಎಟಿಎಂಗಳು ಬಂದಿವೆ. ಅವು ಎಲ್ಲೆಂದರಲ್ಲಿ ಅಲ್ಲಿ ನಮಗೆ ಲಭ್ಯವಾಗುತ್ತಿವೆ. ಆದರೆ ಅವುಗಳಲ್ಲಿ ಹಣ ಡ್ರಾ ಮಾಡುವಾಗ ಹಣ ಬರದೆ, ಖಾತೆಯಿಂದ ಕಟ್ ಆಗಿ ಮೆಷಿನ್‌ನಿಂದ ಹೊರಗೆ ಬರದಿದ್ದರೆ ದೂರು ಕೊಟ್ಟು ನಮ್ಮ ಹಣವನ್ನು ಮರಳಿ ಪಡೆಯುವ ಅವಕಾಶವಿದೆ. ಇದರಿಂದ ಯಾವುದೇ ಸಮಸ್ಯೆ ಆಗಲ್ಲ. ಆದರೆ ಈ ನಡುವೆ ಎಟಿಎಂಗಲಲ್ಲಿ ನಕಲಿ ನೋಟು, ಪ್ರಿಂಟಿಂಗ್ ಸರಿಯಾಗಿಲ್ಲದ ನೋಟುಗಳು ಬರುತ್ತಿವೆ. ಅವುಗಳನ್ನು ಇಟ್ಟುಕೊಂಡು ಬ್ಯಾಂಕ್ ಅಧಿಕಾರಿಗಳನ್ನು ಸಂಪರ್ಕಿಸಿದರೆ ನಮಗೇನು ಗೊತ್ತಿಲ್ಲ ಎಂಬ ಹಾರಿಕೆಯ ಉತ್ತರ ಸಿಗುತ್ತಿದೆ. ಇದರಿಂದ ಗ್ರಾಹಕರು ಒದ್ದಾಡುವಂತಾಗಿದೆ. ಎಟಿಎಂನಲ್ಲಿ ನಕಲಿ ನೋಟು ಬಂದರೂ, ಪ್ರಿಂಟ್ ಸರಿಯಾಗಿ ಇಲ್ಲದ ನೋಟು ಬಂದರು… ಅವುಗಳನ್ನು ಹಿಂದಿರುಗಿಸಿ ಬ್ಯಾಂಕ್ ಮೂಲಕ ಅಸಲಿ ನೋಟುಗಳನ್ನು ಪಡೆಯಬಹುದು. ಹೌದು ಇದು ನಿಜ. ಈ ರೀತಿಯ ಸಮಸ್ಯೆ ಎದುರಾದರೆ ಏನು ಮಾಡಬೇಕೆಂದು ಈಗ ನೋಡೋಣ ಬನ್ನಿ.

Fake-Notes

ಎಟಿಎಂನಲಿ ನಕಲಿ ನೋಟು ಬಂದ ಕೂಡಲೆ ಗಾಬರಿ ಬೀಳಬಾರದು. ಕೂಡಲೆ ಜಾಗೃತರಾಗಿ ಅಲ್ಲೇ ಇರುವ ಸೆಕ್ಯುರಿಟಿ ಗಾರ್ಡ್ ಗಮನಕ್ಕೆ ಈ ವಿಷಯವನ್ನು ತರಬೇಕು. ಇತ್ತೀಚಿನ ದಿನಗಳಲ್ಲಿ ಎಲ್ಲಾ ಎಟಿಎಂಗಳ ಬಳಿ ಸೆಕ್ಯುರಿಟಿ ಗಾರ್ಡ್ ಇದ್ದೇ ಇರುತ್ತಾನೆ. ಈ ವಿಷಯವನ್ನು ಅವರಿಗೆ ತಿಳಿಸಿ ಅವರ ಬಳಿ ಇರುವ ರಿಜಿಸ್ಟರ್‌ನಲ್ಲಿ ನೀವು ಡ್ರಾ ಮಾಡಿದ ಮೊತ್ತ, ನಕಲಿ ನೋಟುಗಳು ಎಷ್ಟು ಬಂದವು, ಯಾವ ಯಾವ ನೋಟು ಬಂದಿವೆ, ಅವುಗಳ ಸಂಖ್ಯೆ, ನೀವು ವಹಿವಾಟು ನಟಿಸಿದ ಸಮಯ, ದಿನಾಂಕ, ಎಟಿಎಂ ಸ್ಲಿಪ್, ಅದರ ಟ್ರಾನ್ಸಾಕ್ಷನ್ ನಂಬರ್ ಎಲ್ಲಾ ವಿವರಗಳನ್ನೂ ಆ ರಿಜಿಸ್ಟರ್‌ನಲ್ಲಿ ದಾಖಲಿಸಿ ಗಾರ್ಡ್ ರುಜು ಹಾಕಿಸಬೇಕು. ಸಾಧ್ಯವಾದರೆ ಈಗ ಹೇಳಿದ ವಿವರಗಳನ್ನೆಲ್ಲಾ ಸ್ಮಾರ್ಟ್‌ಫೋನ್‍ನಲ್ಲಿ ಫೋಟೋ ತೆಗೆದುಕೊಂಡು ಇಟ್ಟುಕೊಳ್ಳಬೇಕು. ಆ ಬಳಿಕ ಮೇಲೆ ಹೇಳಿದ ವಿವರಗಳಿಗೆ ಸಂಬಂಧಿಸಿದ ಜೆರಾಕ್ಸ್ ಪ್ರತಿಗಳನ್ನು ತೆಗೆದು ಬ್ಯಾಂಕ್‌ಗೆ ಭೇಟಿ ನೀಡಿ ಮ್ಯಾನೇಜರ್‌‍ಗೆ ದೂರು ಸಲ್ಲಿಸಬೇಕು. ತಾನು ಮಾಡಿದ ವಹಿವಾಟಿನ ವಿವರಳುಳ್ಳ ಒಂದು ಪತ್ರವನ್ನು ಬರೆದು ಮ್ಯಾನೇಜರ್‌ಗೆ ಕೊಡಬೇಕು. ಇದರೊಂದಿಗೆ ಜೆರಾಕ್ಸ್ ಪ್ರತಿಗಳನ್ನು ಜೋಡಿಸಿ ಕೊಡಬೇಕು. ಬ್ಯಾಂಕ್‍ನವರು ನಿಮ್ಮ ಬಳಿಕ ನಕಲಿ ನೋಟುಗಳನ್ನು ತೆಗೆದುಕೊಂಡು ಅವುಗಳನ್ನು ತಮ್ಮ ಬಳಿಯ ಪರಿಕರಗಳಿಂದ ಸ್ಕ್ಯಾನ್ ಮಾಡಿ ಅವು ನಕಲಿ ನೋಟು ಎಂಬುದನ್ನು ನಿರ್ಧರಿಸುತ್ತಾರೆ. ಆ ಬಳಿಕ ಅಷ್ಟೇ ಮೊತ್ತದ ಅಸಲಿ ನೋಟು ನಿಮಗೆ ಸಿಗುತ್ತದೆ.

fake currency

ಆರ್‌ಬಿಐ ನಿಯಮಗಳ ಪ್ರಕಾರ ಪ್ರತಿ ಬ್ಯಾಂಕ್ ಮೇಲೆ ತಿಳಿಸಿದಂತೆ ಮಾಡಬೇಕಾಗುತ್ತದೆ. ಒಂದು ವೇಳೆ ಬ್ಯಾಂಕ್ ಸ್ಪಂದಿಸಲಿಲ್ಲ ಎಂದರೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ಕೊಡುವ ಹಕ್ಕು ಗ್ರಾಹಕನಿಗಿರುತ್ತದೆ. ಅಷ್ಟೇ ಅಲ್ಲದೆ ಮುಂದಿನ ಕ್ರಮವಾಗಿ ಗ್ರಾಹಕರು ಅರ್‌ಬಿಐ (www.rbi.org.in)ನಲ್ಲಿ ಇರುವ ಇ-ಮೇಲ್ ಐಡಿಗೆ ತಮ್ಮ ದೂರನ್ನು ಮೇಲ್ ಮಾಡಬಹುದು. ಇಲ್ಲದಿದ್ದರೆ ಸ್ಥಳೀಯ ಅಂಬುಡ್ಸ್‌ಮೆನ್‌ಗೆ ದೂರು ಸಲ್ಲಿಸಬಹುದು. ಹಾಗೆ ಸಲ್ಲಿಸಿದ ದೂರಿಗೆ ಆರ್‌ಬಿಐ ಅಥವಾ ಬ್ಯಾಂಕಿಂಗ್ ಅಂಬುಡ್ಸ್‌ಮನ್ ಅಧಿಕಾರಿಗಳು ಸ್ಪಂದಿಸಿ ಕೂಡಲೆ ಕ್ರಮಕೈಗೊಳ್ಳುತ್ತಾರೆ. ಸಂತ್ರಸ್ತನಿಗೆ ನ್ಯಾಯ ಸಿಗುವಂತೆ ಮಾಡುತ್ತಾರೆ. ಈಗ ತಿಳಿಯಿತಲ್ಲಾ, ಎಟಿಎಂನಲ್ಲಿ ನಕಲಿ ನೋಟು ಬಂದರೆ ಏನು ಮಾಡಬೇಕೆಂದು. ಈ ಮಾಹಿತಿಯನ್ನು ಇನ್ನಷ್ಟು ಮಂದಿಗೆ ಷೇರ್ ಮಾಡುವುದನ್ನು ಮರೆಯಬೇಡಿ. ಇದರಿಂದ ನಕಲಿ ನೋಟು ಸಂತ್ರಸ್ತರು ಯಾರಾದರೂ ಇದ್ದರೆ ಕೂಡಲೆ ತಮ್ಮ ಸಮಸ್ಯೆಯನ್ನು ಪರಿಷ್ಕರಿಸಿಕೊಳ್ಳುತ್ತಾರೆ.


Click Here To Download Kannada AP2TG App From PlayStore!

Share this post

scroll to top