ಆ ಮೆಸೇಜ್‌ಗಳನ್ನು ಹೆಚ್ಚು ಕಳುಹಿಸುವುರಿಂದ.. ಭಾರತದಲ್ಲಿ ವಾಟ್ಸಾಪ್ ಬಂದ್ ಆಗಲಿದೆಯಂತೆ..? ಯಾಕೆ ಗೊತ್ತಾ.?

ಬೆಳಗ್ಗೆ ನಿದ್ದೆಯಿದ ಎದ್ದಾಗಿನಿಂದ ಇಂದು ಬಹಳಷ್ಟು ಮಂದಿ ಮಾಡುತ್ತಿರುವ ಮೊದಲ ಕೆಲಸ.. ವಾಟ್ಸಾಪ್, ಫೇಸ್‌ಬುಕ್ ಮೆಸೆಂಜರ್‌ನಂತಹ ಆಪ್‌ಗಳಲ್ಲಿ ತಮಗೆ ಬಂದ ಮೆಸೇಜ್‌ಗಳೆಲ್ಲವನ್ನೂ ಒಮ್ಮೆ ಚೆಕ್ ಮಾಡಿ ಆ ಬಳಿಕ ಎಲ್ಲರಿಗೂ ಗುಡ್ ಮಾರ್ನಿಂಗ್ ಎಂದು ಮೆಸೇಜ್ ಹಾಕುವುದು. ಇನ್ನೂ ಕೆಲವರಿಗ್ ಅಂತಹ ಮೆಸೇಜ್‌ಗಳನ್ನು ಹುಡುವ ವ್ಯವಧಾನ ಇಲ್ಲದೆ ಅವನ್ನೇ ಇತರರಿಗೆ ಫಾರ್ವರ್ಡ್ ಮಾಡಿ ತಾವು ಕ್ರಿಯೇಟ್ ಮಾಡಿದಂತೆ ಬಿಲ್ಡಪ್ ಕೊಡುತ್ತಾರೆ. ಇನ್ನೂ ಕೆಲವರಾದರೆ ಗುಡ್ ಮಾರ್ನಿಂಗ್ ಮೆಸೇಜ್‌ಗಳನ್ನು ನೋಡಿ ಸೈಲೆಂಟ್ ಆಗಿ ಇರುತ್ತಾರೆ. ಕೆಲವರು ಅವನ್ನು ಯಾವುದೇ ಕಾರಣಕ್ಕೂ ಓಪನ್ ಮಾಡಲ್ಲ. ಆದರೆ ನಿಮಗೆ ಗೊತ್ತಾ..? ನಿಜವಾಗಿ ಬೆಳಗ್ಗೆಯೇ ಹಾಕುವ ಈ ಗುಡ್ ಮಾರ್ನಿಂಗ್ ಮೆಸೇಜ್‍ನಿಂದ ಫೇಸ್‌ಬುಕ್ ಮೆಸೆಂಜರ್ ಕಥೆ ಬಿಡಿ ವಾಟ್ಸಾಪ್ ಮಾತ್ರ ಸ್ಲೋ ಆಗಿ ಕೆಲಸ ಮಾಡುತ್ತಿದೆಯಂತೆ.

ನಾವು ನಿತ್ಯ ಬೆಳಗ್ಗೆ ಎದ್ದ ಕೂಡಲೆ ಸೂರ್ಯನನ್ನೋ, ಹಕ್ಕಿಯನ್ನೋ, ಹೂವನ್ನೂ ವಾಟ್ಸಾಪ್‌ನಲ್ಲಿ ಕಳುಹಿಸುತ್ತೇವೆ. ಅದರ ಜತೆಗೆ ಗುಡ್ ಮಾರ್ನಿಂಗ್ ಎಂದು ಒಂದು ಸಂದೇಶ ರವಾನಿಸುತ್ತೇವೆ. ಆದರೆ ಈ ರೀತಿ ನಾವು ನಮ್ಮ ದೇಶದಲ್ಲಿ ಇರುವ ವಾಟ್ಸಾಪ್ ಬಳಕೆದಾರರು ಬಹಳಷ್ಟು ಮಂದಿ ಬೆಳಗ್ಗೆ ಒಮ್ಮೆ ಗುಡ್ ಮಾರ್ನಿಂಗ್ ಮೆಸೆಜ್‌ಗಳನ್ನು ರವಾನಿಸುತ್ತಿರುವ ಕಾರಣ ವಾಟ್ಸಾಪ್ ಹ್ಯಾಂಗ್ ಆಗುತ್ತಿದೆಯಂತೆ. ಕೆಲವು ಕಡೆ ವಾಟ್ಸಾಪ್ ಆ ಸಮಯದಲ್ಲಿ ಕೆಲಸ ಮಾಡುತ್ತಿಲ್ಲವಂತೆ. ಹಾಗೆಂದು ಸಾಕ್ಷಾತ್ ವಾಟ್ಸಾಪ್ ಪ್ರತಿನಿಧಿಗಲೇ ಹೇಳುತ್ತಿದ್ದಾರೆ. ಬೆಳಗ್ಗೆ ಭಾರತೀಯರು ಕಳುಹಿಸುತ್ತಿರುವ ವಾಟ್ಸಾಪ್ ಗುಡ್ ಮಾರ್ನಿಂಗ್ ಮೆಸೇಜ್‌ಗಳಿಂದ ವಾಟ್ಸಾಪ್ ಸ್ಟಕ್ ಆಗುತ್ತಿದೆಯಂತೆ.

ಈ ರೀತಿ ಗುಡ್ ಮಾರ್ನಿಂಗ್ ಮೆಸೇಜ್‌ಗಳನ್ನು ಕಳುಹಿಸುವುದರಿಂದ ಕೇವಲ ವಾಟ್ಸಾಪ್ ಮೆಸೇಜ್‌ಗಳು ಸ್ಟಕ್ ಆಗುವುದಷ್ಟೆ ಅಲ್ಲ, ಆ ರೀತಿ ಮೆಸೇಜ್‌ಗಳನ್ನು ಸ್ವೀಕರಿಸುವ ಆಂಡ್ರಾಯ್ಡ್ ಫೋನ್‌ಗಳು ಸಹ ಹ್ಯಾಂಗ್ ಆಗುತ್ತಿವೆಯಂತೆ. ಯಾಕೆಂದರೆ ನಿತ್ಯ ರಾಶಿರಾಶಿ ಬಂದು ಬೀಳುವ ವಾಟ್ಸಾಪ್ ಫೋಟೋಗಳು, ವಿಡಿಯೋಗಳು ಫೋನ್ ಸ್ಟೋರೇಜ್‌ನಲ್ಲಿ ಸಂಗ್ರಹವಾಗುತ್ತವೆ ಅಲ್ಲವೇ. ಅಂತಹ ಪರಿಸ್ಥಿತಿಯಲ್ಲಿ ಸಹಜವಾಗಿಯೇ ಫೋನ್ ಸ್ಲೋ ಆಗುತ್ತದೆ. ಫೋನ್‌ಗಳಲ್ಲಿ ಈ ರೀತಿಯ ಮೆಸೇಜ್‌ಗಳು ತುಂಬಿಹೋಗುತ್ತಾ ಸ್ಲೋ ಆಗಿ ಕೆಲಸ ಮಾಡುತ್ತಾ ಕೆಟ್ಟುಹೋಗುತ್ತಿವೆಯಂತೆ. ಅದೇನೇ ಇರಲಿ ಸಮಸ್ಯೆ ಈಗಲೇ ಈ ರೀತಿ ಇದ್ದರೆ ಮುಂದೆ ಹೇಗೋ ಏನೋ..!


Click Here To Download Kannada AP2TG App From PlayStore!