ಆಂಡ್ರಾಯಿಡ್ ಫೋನ್ ‘ಸ್ಲೋ’ ಆಗಿದೆಯೇ…?’ಹ್ಯಾಂಗ್’ ಆಗುತ್ತಿದೆಯೇ…?ಹಾಗಾದರೆ ಏನು ಮಾಡಬೇಕೆಂಬುದನ್ನು ತಿಳಿದುಕೊಳ್ಳಿ…!

ಇತ್ತೀಚೆಗೆ ಆಂಡ್ರಾಯಿಡ್ ಸ್ಮಾರ್ಟ್ ಫೋನ್ ಗಳನ್ನು ಉಪಯೋಗಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ.ಅತ್ಯಂತ ಕಡಿಮೆ ಬೆಲೆಗೆ ದೊರಕುವ ಸ್ಮಾರ್ಟ್ ಫೋನು ಗಳನ್ನು ಕೊಳ್ಳದವರು ಯಾರಿದ್ದಾರೆ ಹೇಳಿ. ಯಾರ ಕೈಯಲ್ಲಿನೋಡಿದರೂ ಸ್ಮಾರ್ಟ್ ಫೋನ್ ಗಳು ಇದ್ದೇಇರುತ್ತವೆ. ಇತ್ತೀಚೆಗೆ ಅನೇಕ ಜನರಿಗೆ ಎದುರಾಗಿರುವ ಸಮಸ್ಯೆ ಏನೆಂದರೆ ಫೋನ್ ‘ಹ್ಯಾಂಗ್” ಆಗುವುದು. ಯಾರಿಗಾದರೂ ತುರ್ತಾಗಿ ಕರೆ ಮಾಡಬೇಕೆಂದುಕೊಳ್ಳುತ್ತಿರುವಾಗಲೇ ‘ಹ್ಯಾಂಗ್’ಆಗುವುದು. ಯಾವುದೇ ಬಟನ್ ಒತ್ತಿದರೂ ಪ್ರಯೋಜನವಾಗದಿರುವುದು ಹೀಗೆ ಹಲವಾರು ಸಮಸ್ಯೆಗಳು ತಲೆದೋರುತ್ತವೆ. ಇಂತಹ ಹಲವಾರು ಸಮಸ್ಯೆಗಳಿಗೆ ಅತ್ಯಂತ ಸುಲಭವಾಗಿ ಪರಿಹಾರಗಳನ್ನು ಕಂಡುಕೊಳ್ಳೋಣ.

1.ಆಂಡ್ರಾಯಿಡ್ ಫೋನ್ ಗಳು ‘ಹ್ಯಾಂಗ್’ ಆಗುವುದಕ್ಕೆ ಮುಖ್ಯ ಕಾರಣ ‘ಬ್ಯಾಗ್ರೌಂಡ್’ ನಲ್ಲಿ ಅಪ್ಲಿಕೇಷನ್ ಗಳು ರನ್ ಆಗುತ್ತಿರುವುದೇ. ಆದರೆ ಇವುಗಳನ್ನು ಬಹಳ ಸುಲಭವಾಗಿ ‘ಮೂವ್’ ಮಾಡಬಹುದು. ಹೇಗೆಂದರೆ,’ನ್ಯಾವಿಗೇಷನ್ ಸ್ಕ್ರೀನ್’ ಒತ್ತಿದರೆ ಒಂದು ‘ಲಿಸ್ಟ್’ ಬರುತ್ತದೆ. ಅದರಲ್ಲಿರುವ ಎಲ್ಲ ‘ಅಪ್ಲಿಕೇಶನ್'(APP) ‘ಕ್ಲೋಸ್’ ಮಾಡಿದರೆ ಸಾಕು. ಬ್ಯಾಗ್ರೌಂಡ್ ಆಪ್ಸ್ ತನ್ನಿಂದತಾನೇ ಕ್ಲೋಸ್ ಆಗುತ್ತವೆ. ಇದರಿಂದಾಗಿ ಫೋನಿನ ವೇಗ ಹೆಚ್ಚುತ್ತದೆ ಹಾಗು ಹ್ಯಾಂಗಿಂಗ್ ಸಮಸ್ಯೆ ತಪ್ಪುತ್ತದೆ.

2. ಆಂಡ್ರಾಯ್ಡ್ ಡಿವೈಸ್ ಸೆಟ್ಟಿಂಗ್ಸ್-ಪ್ರೈವೆಸಿ ಸೆಟ್ಟಿಂಗ್ಸ್ ಗೆ ಹೋಗಿ ಕ್ಲಿಯರ್ ಆಪ್ಷನನ್ನು ಓಕೆ(OK) ಮಾಡಬೇಕು. ಡಿವೈಸ್ನಲ್ಲಿರುವ ಟೆಂಪರರಿ ಫೈಲುಗಳು,ಕುಕೀಸ್,ಹಿಸ್ಟರೀ ಎಲ್ಲಾ ಅಳಸಿ ಹೋಗಿ ನಿಮ್ಮ ಫೋನ್ ಹ್ಯಾಂಗ್ ಆಗದೆ ಇರುತ್ತದೆ.

3. ಆಂಡ್ರಾಯ್ಡ್ ಫೋನ್ ನಲ್ಲಿ ಯಾವುದಾದರೂ ಕಿರು ತಂತ್ರಾಂಶ ಇನ್ಸ್ಟಾಲ್ ಮಾಡಬೇಕಾದರೆ ಕೇವಲ ಗೂಗಲ್ ಪ್ಲೇ ಸ್ಟೋರ್ ನಿಂದ ಮಾತ್ರ ಡೌನ್ ಲೋಡ್ ಮಾಡಿಕೊಂಡು ಇನ್ಸ್ಟಾಲ್ ಮಾಡಬೇಕು. ಇತರೆ ಸೈಟ್ ಗಳಿಂದ ಆಂಡ್ರಾಯ್ಡ್ ಆಪ್ ಗಳನ್ನು ಡೌನ್ ಲೋಡ್ ಮಾಡಿಕೊಂಡಲ್ಲಿ ಸಾಫ್ಟ್ ವೇರ್ ಪ್ರಾಬ್ಲಂ ಆಗಿ ನಿಮ್ಮ ಫೋನ್ ಹ್ಯಾಂಗ್ ಆಗುತ್ತದೆ.

4. ಪೋನಿನಲ್ಲಿ ಕೆಲವು ಆಪ್ಗಳ ಅವಶ್ಯಕತೆ ನಮಗಿಲ್ಲದಿದ್ದರೂ ತನ್ನಿಂದ ತಾನೇ ಇನ್ ಸ್ಟಾಲ್ ಆಗಿಬಿಡುತ್ತವೆ. ಇದರಿಂದಲೂ ಸಹ ಡಿವೈಸ್ ಹ್ಯಾಂಗ್ ಆಗುತ್ತದೆ. ಇದಕ್ಕೆ ಸುಲಭ ಪರಿಹಾರವೆಂದರೆ, ಆಂಟಿ ವೈರಸ್ ಇಲ್ಲವೆ ಕ್ಲೀನಿಂಗ್ ಆಪ್ ಇನ್ಸ್ಟಾಲ್ ಮಾಡಿ ಬೇಡದಿರುವ ಆಪ್ಗಳನ್ನು ಡಿಲೀಟ್ ಮಾಡಬೇಕು.

5.ಫೋನಿನ ಇಂಟರ್ನಲ್ ಮೆಮೊರಿ ಕಡಿಮೆಯಿದ್ದರೂ ಡಿವೈಸ್ ಸರಿಯಾಗಿ ಕೆಲಸಮಾಡುವುದಿಲ್ಲ. ಇಂತಹ ಸಮಯದಲ್ಲಿ ಕೆಲವು ಪೈಲುಗಳನ್ನು ಎಸ್ ಡಿ ಕಾರ್ಡ್ಗೆ ವರ್ಗಾಯಿಸಿದಲ್ಲಿ ,ಡಿವೈಸ್ ಮೆಮೊರಿ ಫ್ರೀ ಆಗಿ ಚೆನ್ನಾಗಿ ಕೆಲಸಮಾಡುತ್ತದೆ.

6. ಫೋನನ್ನು ವಾರಕ್ಕೆ ಒಮ್ಮೆಯಾದರೂ ರೀಸ್ಟಾರ್ಟ್ ಮಾಡಿದಲ್ಲಿ ಇಲ್ಲವೆ ಸ್ವಿಚ್ ಆಫ್ ಮಾಡಿ ಆನ್ ಮಾಡಿದರೆ ಫೊನ್ ಚೆನ್ನಾಗಿ ಕೆಲಸಮಾಡುತ್ತದೆ. ಆಗಲೂ ಸರಿಯಾಗದಿದ್ದಲ್ಲಿ, ಮೆಮೊರಿ ಕಾರ್ಡ್ ಬ್ಯಾಟರಿ ತೆಗೆದು ಮತ್ತೆ ಹಾಕಿ ಆನ್ ಮಾಡಬೇಕು.

7. ಜನರು ಹೆಚ್ಚಾಗಿ ಫೋನ್ ಚಾರ್ಜ್ ಮಾಡಲು ಯಾವ್ಯಾವುವೋ ಚಾರ್ಜರ್ ಗಳನ್ನು ಉಪಯೋಗಿಸುತ್ತಿರುತ್ತಾರೆ. ಹೀಗೆ ಮಾಡುವುದರಿಂದ ಫೊನ್ ಸರಿಯಾಗಿ ಕೆಲಸ ಮಾಡುವುದಿಲ್ಲ. ಆದುದರಿಂದ ಕೇವಲ ಕಂಪೆನಿ ಕೊಟ್ಟ ಚಾರ್ಜರ್ ಗಳನ್ನೇ ಉಪಯೋಗಿಸಬೇಕು.

8.ನಿಮಗೆ ಉಪಯೊಗಕ್ಕೆ ಬರುವ ಆಪ್ ಗಳನ್ನೇ ಫೋನಿನಲ್ಲಿರಿಸಿಕೊಳ್ಲಿ. ಅನವಶ್ಕಕವಾದ ಆಪ್ಗಳನ್ನು ಡಿಲೀಟ್ ಮಾಡುವುದರಿಂದ ಮೆಮೊರಿ ಹೆಚ್ಚಾಗಿ ಫೋನಿನ ವೇಗ ಹೆಚ್ಚುತ್ತದೆ.


Click Here To Download Kannada AP2TG App From PlayStore!

Share this post

scroll to top