ಈ ಲಕ್ಷಣಗಳಿರುವವನೇ ನಿಜವಾದ ಅದೃಷ್ಟವಂತ : ವಿದುರ.

ಈ ಪ್ರಪಂಚದಲ್ಲಿ ಅದೃಷ್ಟವಂತ ವ್ಯಕ್ತಿ ಯಾರು? ಎಂದು ಯಾರಾದರೂ ನಿಮ್ಮನ್ನು ಕೇಳಿದರೆ ನೀವು ಏನೆಂದು ಉತ್ತರಿಸುತ್ತೀರ? ಯಾರ ಬಳಿಹೆಚ್ಚು ಹಣವಿದ್ದು ಧನವಂತರಾಗಿರುತ್ತಾರೋ ಅವರೇ ಅದೃಷ್ಟವಂತರು ಎಂದು ನೀವು ಹೇಳಿದರೆ,ನೀವು ತಪ್ಪು ಮಾಡಿದ ಹಾಗೆ. ಹಣವಲ್ಲದೇ ಇನ್ನೂ ಅನೇಕ ವಿಷಯಗಳು ಒಬ್ಬ ಮನುಷ್ಯನನ್ನು ಅದೃಷ್ಟವಂತ ಎಂದು ನಿರ್ಧರಿಸುತ್ತವೆ.ನಿಮಗೆ ವಿದುರ ಗೊತ್ತಿರಬೇಕಲ್ಲವೇ ?ದೃತರಾಷ್ಟ್ರ ಹಾಗು ಪಾಂಡು ರಾಜರ ತಮ್ಮ. ಕೌರವ ಸಾಮ್ರಾಜ್ಯಕ್ಕೆ ಸಲಹೆಗಾರನಾಗಿದ್ದು, ರಾಜ್ಯದ ಏಳಿಗೆಗಾಗಿ ಬಹಳಷ್ಟು ಶ್ರಮಿಸಿದ ವಿದುರ ಧರ್ಮಸ್ಥಾಪನೆಯ ಪಂಡಿತ. ಧರ್ಮ,ಅಧರ್ಮ,ನೀತಿ,ಅವಿನೀತಿ ಗಳ ಬಗ್ಗೆ ವಿವರಿಸಿದ ವಿದುರ ಹೆಸರುವಾಸಿಯಾಗಿದ್ದಾನೆ.

ಒಬ್ಬ ವ್ಯಕ್ತಿ ಅದೃಷ್ಟವಂತ ಎನಿಸಿಕೊಳ್ಳಳು ಕೆಲವು ಲಕ್ಷಣಗಳಿರಬೇಕಂತೆ.ವಿದುರ ಹೇಳಿದ ಅಂತಹ ಲಕ್ಷಣಗಳೆಂದರೆ :

  • ಯಾವಾಗಲೂ ಅನಾರೋಗ್ಯದಿಂದ ನರಳುತ್ತಿರುವವರು ದುರದೃಷ್ಟರಂತೆ.ಅನಾರೋಗ್ಯದಿಂದಾಗಿ ಆಯುಷ್ಯ ಕ್ಷೀಣಿಸುತ್ತದೆ ಅಷ್ಟೇ ಅಲ್ಲದೆ ಹಣವನ್ನು ಸಹ ವ್ಯಯಿಸಬೇಕಾಗುತ್ತದೆ.ಆದುದರಿಂದ ಯಾರು ಆರೋಗ್ಯದಿಂದಿರುತ್ತಾರೋ ಅವರೇ ಅದೃಷ್ಟಶಾಲಿಗಳೆಂದು ವಿದುರ ಹೇಳುತ್ತಾನೆ.
  • ಮೃದು ಧೋರಣೆ,ಯಾವಾಗಲೂ ಪ್ರಶಾಂತ ವಾಗಿದ್ದು, ಮೆಲ್ಲಗೆ ಮಾತುಗಳನ್ನು ಆಡುವವರು ಬಹಳ ಅದೃಷ್ಟವಂತರಂತೆ.ಯಾವಾಗಲೂ ವಿನಯ ,ವಿಧೇಯತೆ,ಹಿರಿಯರನ್ನು ಗೌರವಿಸುವ ಮಕ್ಕಳನ್ನು ಹೊಂದಿರುವವರು ಅದೃಷ್ಟವಂತರು.ಇವರ ಮನೆಯಲ್ಲಿ ಒಳ್ಳೆಯ ಮಕ್ಕಳು ಜನಿಸಿರುವುದರಿಂದ ಅವರಿಗೆ ಎಲ್ಲ ಕಾರ್ಯಗಳಲ್ಲೂ ಒಳ್ಳೆಯದಾಗುತ್ತದೆ.ಆ ಮಕ್ಕಳು ಕುಟುಂಬಕ್ಕೆ ಒಳ್ಳೆಯ ಹೆಸರನ್ನು ಗಳಿಸಿಕೊಡುತ್ತಾರೆ.
  • ಯಾವುದೇ ಅಡೆ ತಡೆಗಳಿಲ್ಲದೆ,ನಿರಂತರವಾಗಿ ಧನಗಳಿಸುತ್ತಾ ಜೀವನದಲ್ಲಿ ಮುಂದೆ ಬರುತ್ತಿರುವವರು ಧನವಂತರೂ ಅದೃಷ್ಟವಂತರಂತೆ. ಕೈಯಲ್ಲಿ ಯಾವಾಗಲೂ ಹಣವಿದ್ದರೆ ಜೀವನ ಯಾವುದೇ ಅಡ್ಡಿ ಆತಂಕಗಳಿಲ್ಲದೆ ಸುಖಮಯವಾಗಿ ಸಾಗುತ್ತದಂತೆ.
  • ಉನ್ನತ ವಿದ್ಯಾಭ್ಯಾಸ,ಜ್ಞಾನ ಹೊಂದಿರುವವರು ಸಹ ಅದೃಷ್ಟವಂತರಂತೆ. ಅವರು ಗಳಿಸಿರುವ ಜ್ಞಾನದಿಂದ ಎಂತಹ ಸಮಸ್ಯೆಗಳನ್ನಾದರೂ ಪರಿಹರಿಸಿಕೊಳ್ಳುವ ಶಕ್ತಿ ಲಭಿಸುತ್ತದಂತೆ.
  • ದಂಪತಿಗಳು ಅನ್ಯೋನ್ಯವಾಗಿದ್ದು.ಪರಸ್ಪರ ಅರಿತುಕೊಂಡು, ಮನೆಯ ವಾತಾವರಣವನ್ನು ಚೆನ್ನಾಗಿಟ್ಟುಕೊಂಡು,ಯಾವುದಾದರೂ ಸಮಸ್ಯೆ ಕಂಡುಬಂದಲ್ಲಿ ತಮ್ಮಲ್ಲೇ ಪರಿಹರಿಸಿಕೊಳ್ಳುವವರು ಅದೃಷ್ಟವಂತರಂತೆ. ದಂಪತಿಗಳು ಪರಸ್ಪರ ಅರಿತುಕೊಂಡು ಜೀವನ ಮುನ್ನಡೆಸಿದರೆ ಅವರಷ್ಟು ಅದೃಷ್ಟವಂತರು ಬೇರೊಬ್ಬರಿಲ್ಲ.

Click Here To Download Kannada AP2TG App From PlayStore!

Share this post

scroll to top