ಫಿರಂಗಿ… ಬ್ಯಾರೆಲ್ (ನಳಿಗೆ) ಇಡುವ ಆಧಾರದ ಮೇಲೆ ಅದರ ವಿಶೇಷತೆಯನ್ನು ಹೇಳಬಹುದು, ಅದೇಗೆಂದು ತಿಳಿದುಕೊಳ್ಳಿ

ದೇಶವನ್ನು, ದೇಶ ಪ್ರಜೆಗಳನ್ನು ರಕ್ಷಿಸುವುದರಲ್ಲಿ ಸೈನ್ಯ ಪ್ರಮುಖ ಪಾತ್ರ ವಹಿಸುತ್ತದೆ. ಮಾತೃದೇಶವನ್ನು ರಕ್ಷಿಸಬೇಕೆಂಬ ಕನಸಿನೊಂದಿಗೆ ಎಷ್ಟೋ ಮಂದಿ ಯುವಕರು ಆರ್ಮಿಯಲ್ಲಿ ಸೇರುತ್ತಾರೆ ಸಹ. ಎಷ್ಟೋ ಕಷ್ಟಗಳನ್ನು ಗೆದ್ದು ಗಡಿಪ್ರದೇಶದಲ್ಲಿ ದೇಶಕ್ಕಾಗಿ ಕಾಯುತ್ತಾ ಸೈನಿಕರು ತಮ್ಮ ಕರ್ತವ್ಯ ನಿರ್ವಹಿಸುತ್ತಾರೆ. ತುರ್ತು ಪರಿಸ್ಥಿತಿ ಎದುರಾದರೆ ಎಷ್ಟೋ ಚಾಕಚಕ್ಯತೆಯಿಂದ ವ್ಯವಹರಿಸಿ ದೇಶವನ್ನು ಅಪಾಯದಿಂದ ಕಾಪಾಡುತ್ತಾರೆ. ಅದಕ್ಕಾಗಿ ಸಾಧ್ಯವಾದರೆ ತಮ್ಮ ಪ್ರಾಣವನ್ನೂ ಪಣವಾಗಿ ಇಡುತ್ತಾರೆ. ಆದರೆ ಸೈನಿಕರು ಅಷ್ಟೆಲ್ಲಾ ವಿರೋಚಿತವಾಗಿ ಹೋರಾಡಿದರೂ ಸೂಕ್ತವಾದ ಆಯುಧಗಳು ಇಲ್ಲದಿದ್ದರೆ ಅವರು ಶತ್ರು ದೇಶ ಸೈನಿಕರನ್ನು ಎದುರಿಸಲಾರರು. ಆ ರೀತಿಯ ಬಲವಾದ ಆಯುಧಗಳಲ್ಲಿ ಫಿರಂಗಿ ಸಹ ಒಂದು. ಎಷ್ಟೋ ಕಿ.ಮೀಗಳ ದೂರದಲ್ಲಿರುವ ಶತ್ರುಗಳನ್ನು ಸುಟ್ಟು ಬೂದಿ ಮಾಡುವ ಶಕ್ತಿ ಆ ಯುದ್ಧ ಟ್ಯಾಂಕುಗಳಿಗಿದೆ. ಆದರೆ ನೀವು ಯಾವತ್ತಾದರೂ ಆ ರೀತಿಯ ಶಕ್ತಿಯುತವಾದ ಫಿರಂಗಿಯನ್ನು ನೋಡಿದ್ದೀರಾ? ಎಲ್ಲೋ ಬಹಿರಂಗ ಪ್ರದೇಶದಲ್ಲೋ, ಯಾವುದಾದರೂ ಪಾರ್ಕ್ ಬಳಿಯೋ, ಆರ್ಮಿ ಇರುವ ಪ್ರದೇಶದಲ್ಲಿ ಫಿರಂಗಿಗಳನ್ನು ನೋಡಿರುತ್ತೀರ ಬಿಡಿ. ಆದರೆ ಅವುಗಳ ಉದ್ದವಾದ ಬ್ಯಾರೆಲ್ (ನಳಿಗೆ)ಯನ್ನು ಸೂಕ್ಷ್ಮವಾಗಿ ಗಮನಿಸಿದ್ದೀರಾ? ನೋಡಿರುತ್ತೀರಾ ಆದರೂ, ಅದರ ಬಗೆಗಿನ ವಿಷಯವೊಂದು ನಿಮಗೆ ಗೊತ್ತಿರಲ್ಲ. ಅದೇನೆಂದರೆ…

Army tanks

  • ಮೇಲೆ ಹೇಳಿದಂತೆ ಜನರು ಹೆಚ್ಚಾಗಿ ಓಡಾಡುವ ಪ್ರದೇಶದಲ್ಲಿ ಫಿರಂಗಿಯನ್ನು ಇಟ್ಟರೆ ಸಾಧಾರಣವಾಗಿ ಅವುಗಳ ಬ್ಯಾರೆಲ್ಸ್ ಮೇಲ್ಮುಖವಾಗಿ ಇಡುವುದೋ, ಸಮಾನಂತರವಾಗಿ ಇಡುವುದು, ಕೆಳಮುಖವಾಗಿ ಇಡುವುದು ಮಾಡುತ್ತಾರೆ. ಆ ತೆರನಾಗಿ ಬ್ಯಾರೆಲ್ಲನ್ನು ಯಾಕೆ ಇಡುತ್ತಾರೆ ಗೊತ್ತಾ?

army-tanks

  • ಫಿರಂಗಿ ಬ್ಯಾರೆಲ್ ಮೇಲ್ಮುಖವಾಗಿ ಇಟ್ಟರೆ ಆ ಫಿರಂಗಿ ಯಾವುದೋ ಒಂದು ಯುದ್ಧದಲ್ಲಿ ಗೆದ್ದಿದೆ ಎಂದು ಅರ್ಥ ಮಾಡಿಕೊಳ್ಳಬೇಕು. ಸೈನಿಕರು ತಮ್ಮ ವಿಜಯದ ಸಂಕೇತವಾಗಿ ಫಿರಂಗಿ ಬ್ಯಾರೆಲನ್ನು ಹಾಗೆ ಮೇಲ್ಮುಖವಾಗಿ ಇಡುತ್ತಾರೆ.
  • ಅದೇ ಬ್ಯಾರೆಲನ್ನು ಸಮಾನಂತರವಾಗಿ ಇಟ್ಟರೆ ಶಾಂತಿಯುತ ವಾತಾವರಣ ಇದ್ದಾಗ ಆ ಫಿರಂಗಿಯನ್ನು ಬಳಸಿದ್ದರು ಎಂದರ್ಥ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಆ ಫಿರಂಗಿ ಯಾವುದಾದರೂ ನೈಜ ಯುದ್ಧ ಟ್ಯಾಂಕಿನ ಪ್ರತಿಕೃತಿ ಆಗಿರುತ್ತದೆ.

army-tanks

  • ಫಿರಂಗಿ ಬ್ಯಾರೆಲನ್ನು ಕೆಳಮುಖವಾಗಿ ಇಟ್ಟರೆ ಅದನ್ನು ಯುದ್ಧದಲ್ಲಿ ಶತ್ರುಗಳಿಂದ ವಶಪಡಿಸಿಕೊಂಡಿರುವುದು ಎಂದು ತಿಳಿದುಕೊಳ್ಳಬೇಕು. ಆ ರೀತಿಯ ಫಿರಂಗಿಗಳ ಬ್ಯಾರೆಲ್‌ಳನ್ನು ಕೆಳಮುಖವಾಗಿ ಇಡುತ್ತಾರೆ. ಈಗ ತಿಳಿಯಿತಲ್ಲವೇ? ಯುದ್ಧ ಟ್ಯಾಂಕ್‌ಗಳ ಬ್ಯಾರೆಲ್‌ ಹಾಗೇಕೆ ಇಡುತ್ತಾರೆಂದು!

Click Here To Download Kannada AP2TG App From PlayStore!

Share this post

scroll to top