ಸತ್ತ ವ್ಯಕ್ತಿಯ ಕಾಲಿನ ಹೆಬ್ಬೆರಳುಗಳನ್ನು ಕಟ್ಟುತ್ತಾರೆ…! ಯಾಕೆ ಅಂತ ಗೊತ್ತಾ..?

ಭೂಮಿ ಮೇಲೆ ಜನಿಸಿದ ಜೀವಿ ಯಾವುದೇ ಆಗಲಿ ಒಂದಲ್ಲಾ ಒಂದು ದಿನ ಮರಣಿಸಲೇ ಬೇಕು. ಯಾವುದೇ ಜೀವಿಗೂ ಮೃತ್ಯು ಅನಿವಾರ್ಯ. ಇದಕ್ಕೆ ಮಾನವರೂ ಅತೀತರಲ್ಲ. ಆದರೆ ಮನುಷ್ಯರು ಸತ್ತ ಬಳಿಕ ಆಯಾ ವರ್ಗಕ್ಕೆ ಸೇರಿದ ಜನರು ತಮ್ಮ ಆಚಾರ, ವಿಶ್ವಾಸಕ್ಕೆ ತಕ್ಕಂತೆ ಮೃತದೇಹವನ್ನು ಖನನ ಮಾಡುತ್ತಾರೆ. ಮುಖ್ಯವಾಗಿ ಹಿಂದೂಗಳು ಸತ್ತ ಬಳಿಕ ವ್ಯಕ್ತಿಗೆ ಅಂತಿಮ ಸಂಸ್ಕಾರ ಮಾಡಿ ಬಳಿಕ ದಹನ ಕ್ರಿಯೆ ನಡೆಸುತ್ತಾರೆ. ಈ ಅಂತಿಮ ಸಂಸ್ಕಾರವನ್ನೇ ಅಂತ್ಯೇಷ್ಟಿ ಎಂದೂ ಕರೆಯುತ್ತಾರೆ. ಅದಕ್ಕೆ ಅಂತ ಕೆಲವು ಕಾರ್ಯಕ್ರಮಗಳಿರುತ್ತವೆ. ಮೃತದೇಹಕ್ಕೆ ಸ್ನಾನ ಮಾಡಿಸುವುದು, ಅಲಂಕರಿಸುವುದು, ಶವಯಾತ್ರೆ ಮಾಡುವುದು, ದಹನ ಮಾಡುವ ಕ್ರಿಯೆಗಳು ನಡೆಯುತ್ತವೆ. ಆದರೆ ಇವೆಲ್ಲಕ್ಕಿಂತಲೂ ಮೊದಲು ವ್ಯಕ್ತಿ ಸತ್ತ ಕೂಡಲೆ ಆತನ ಕಾಲಿನ ಹೆಬ್ಬೆರಳುಗಳೆರಡನ್ನು ಸೇರಿಸಿ ಚಿಕ್ಕ ಹಗ್ಗದಿಂದ ಕಟ್ಟುತ್ತಾರೆ. ಆ ಬಳಿಕ ದಹನ ನಡೆಯುವವರೆಗೂ ಆ ದಾರ ಹಾಗೆಯೇ ಇರುತ್ತದೆ. ದಹನ ಕ್ರಿಯೆಯಲ್ಲಿ ಮೃತದೇಹದ ಜತೆಗೆ ಸುಟ್ಟುಹೋಗುತ್ತದೆ. ಆದರೆ ಆ ರೀತಿ ಹಗ್ಗ ಅಥವಾ ಬಳ್ಳಿಯಿಂದ ಕಾಲಿನ ಹೆಬ್ಬೆರಳುಗಳನ್ನು ಯಾಕೆ ಕಟ್ಟುತ್ತಾರೆ ಗೊತ್ತೇ..?

ಮನುಷ ಸತ್ತ ಬಳಿಕ ಆತನಿಗೆ ಶ್ರಾದ್ಧ ಕರ್ಮಗಳನ್ನು ಮಾಡುವವರೆಗೂ ಆತನ ಆತ್ಮ ಈ ಲೋಕದಲ್ಲೇ ಸುತ್ತುತ್ತಿರುತ್ತದೆಂದು ಹಿಂದೂ ಪುರಾಣಗಳು ಹೇಳುತ್ತವೆ. ಇದರ ಬಗ್ಗೆ ಸುಮಾರಾಗಿ ಎಲ್ಲರಿಗೂ ಗೊತ್ತು. ಆದರೆ ಆ ಆತ್ಮ ಮತ್ತೆ ಮನೆಗೆ ಮರಳಬಾರದು ಎಂಬ ಉದ್ದೇಶದಿಂದ ವ್ಯಕ್ತಿ ಮರಣಿಸಿದ ಬಳಿಕ ಆತನ ಕಾಲಿನ ಹೆಬ್ಬೆರಳುಗಳನ್ನು ಸೇರಿಸಿ ಕಟ್ಟುತ್ತಾರೆ. ಇದರಿಂದ ಕಾಲುಗಳು ಕದಲುವುದಿಲ್ಲ. ಆದಕಾರಣ ಆತ್ಮ ಮತ್ತೆ ಪ್ರವೇಶಿಸುವ ಅವಕಾಶ ಇರಲ್ಲ. ಹಾಗೆಯೇ ಸತ್ತ ವ್ಯಕ್ತಿಯ ಕಾಲುಗಳು ದೂರ ಸರಿಯದಂತೆ ಒಂದೇ ಕಡೆ ಇರುವಂತೆ ಬಿಗಿಯಾಗಿ ಇರಲು ಸಲುವಾಗಿಯೂ ಕಾಲಿನ ಹೆಬ್ಬೆರಳುಗಳನ್ನು ಕಟ್ಟಿಹಾಕುತ್ತಾರೆ. ಇದು ನಿಜವಾದ ಸಂಗತಿ!

#ಲಾಜಿಕ್
ಸತ್ತ ಬಳಿಕ ಮನುಷ್ಯನ ದೇಹ ಬಿಗಿಯಾಗುತ್ತದೆ. ಈ ಕ್ರಿಯೆಯಲ್ಲಿ ಕಾಲುಗಳು ಬೇರೆಬೇರೆಯಾಗುವ ಸಾಧ್ಯತೆಗಳಿರುತ್ತವೆ. ಹಾಗಾಗಿ ಮೊದಲೇ..ಕಾಲಿನ ಹೆಬ್ಬೆರಳುಗಳನ್ನು ಆ ರೀತಿ ಹಗ್ಗದಿಂದ ಕಟ್ಟಿಹಾಕುತ್ತಾರೆ!

 


Click Here To Download Kannada AP2TG App From PlayStore!