ಅಮೆರಿಕದಲ್ಲಿ ವಾಹನಗಳ ಸ್ಟೀರಿಂಗ್ ಎಡಗಡೆಗೆ, ನಮ್ಮ ದೇಶದಲ್ಲಿ ಬಲಗಡೆಗೆ ಇರುವುದು ಏಕೆಂದು ನಿಮಗೆ ಗೊತ್ತೇ?

ಪ್ರತಿಯೊಂದು ದೇಶದಲ್ಲೂ ವಿಭಿನ್ನ ವರ್ಗಗಳಿಗೆ ಸೇರಿದ ಜನರು ವಾಸಿಸುತ್ತಿರುತ್ತಾರೆ.ಅವರೆಲ್ಲರೂ ತಮ್ಮದೇ ಆದ ಆಚಾರ ,ವಿಚಾರ,ವಿಶ್ವಾಸಗಳಿಗೆ ಅನುಗುಣವಾಗಿ ಜೀವನ ಸಾಗಿಸುತ್ತಿರುತ್ತಾರೆ.ಆದರೆ,ಜನರಲ್ಲದೆ ಪ್ರಪಂಚದಲ್ಲಿರುವ ದೇಶಗಳು,ದೇಶದಲ್ಲಿರುವ ವಿವಿಧ ಭಾಗಗಳೂ ಸಹ ತಮ್ಮದೇ ಆದ ರೀತಿ ನೀತಿಗಳನ್ನು ಹೊಂದಿರುತ್ತವೆ.ಆಯಾ ಪ್ರದೇಶಗಳಲ್ಲಿ ವಾಸಮಾಡಬೇಕೆಂದರೆ ಅಲ್ಲಿಯ ನಿಯಮಗಳನ್ನು ಪ್ರತಿಯೊಬ್ಬರೂ ತಪ್ಪದೆ ಪಾಲಿಸಲೇ ಬೇಕು.ಅಂತಹ ನಿಯಮಗಳಲ್ಲಿ ವಾಹನ ಚಾಲನೆಯೂ ಒಳಗೊಂಡಿದೆ.

ನೀವೆಂದಾದರೂ ಗಮನಿಸಿದ್ದೀರಾ? ಕೆಲವು ದೇಶಗಳಲ್ಲಿ ರಸ್ತೆಯ ಬಲಬದಿಯಲ್ಲಿ ವಾಹನಗಳನ್ನು ಚಲಾಯಿಸುತ್ತಾರೆ.ಆದರೆ,ನಮ್ಮ ದೇಶದಲ್ಲಿ ವಾಹನಗಳನ್ನು ರಸ್ತೆಯ ಎಡ ಬದಿಯಲ್ಲಿ ಚಲಾಯಿಸುತ್ತಾರೆ.ಏಕೆ ಈ ವ್ಯತ್ಯಾಸ.ಎಲ್ಲ ಪ್ರದೇಶಗಳಲ್ಲೂ ವಾಹನ ಚಲಾವಣೆ ಒಂದೇ ರೀತಿ ಇರುವುದಿಲ್ಲ ಏಕೆ ಎಂದು ನಿಮಗೆ ಗೊತ್ತೇ? ಏಕೆಂದು ನೋಡೋಣ ಬನ್ನಿ.
ಇದು ಈಗಿನ ಸಂಗತಿಯಲ್ಲ.1700 ನೇ ಇಸವಿಯ ಮಾತು. ಈಗಿದ್ದಂತೆ ಆಗ ವಾಹನಗಳಿರಲಿಲ್ಲ.ಕೇವಲ ಕುದುರೆಗಳನ್ನು ಮಾತ್ರ ರಸ್ತೆ ಸಾರಿಗೆಗಾಗಿ ಉಪಯೋಗಿಸುತ್ತಿದ್ದರು.ಕುದುರೆಯನ್ನು ಎಡಗಡೆಯಿಂದ ಏರುತ್ತಿದ್ದರು. ಇದೇಕೆಂದರೆ,ಬಹಳಷ್ಟು ಮಂದಿ ಎಲ್ಲಾ ಕೆಲಸಗಳನ್ನು ಬಲಗೈಯಿಂದಲೇ ಮಾಡುತ್ತಾರೆ.ಆ ಕಾಲದಲ್ಲಿ ಹೆಚ್ಚಾಗಿ ಕತ್ತಿಗಳನ್ನು ಉಪಯೋಗಿಸುತ್ತಿದ್ದರು. ಕತ್ತಿಗಳನ್ನು ತಮ್ಮ ಎಡ ಭಾಗಕ್ಕಿರುವ ಒರೆಯಲ್ಲಿ ಇಡುತ್ತಿದ್ದರು. ಹೀಗಾಗಿ, ಕುದುರೆಯನ್ನು ಎಡಗಡೆಯಿಂದ ಏರಿದರೆ,ಕತ್ತಿ ತಗುಲುವ ಸಮಸ್ಯೆ ಇರುವುದಿಲ್ಲ,ಹಾಗಾಗಿ ಕುದುರೆಯನ್ನು ಎಡಗಡೆಯಿಂದ ಏರುತ್ತಿದ್ದರು. ಕುದುರೆಯನ್ನೇರಿದ ನಂತರ ರಸ್ತೆಯ ಎಡಗಡೆಯೇ ಪ್ರಯಾಣವನ್ನು ಪ್ರಾರಂಭಿಸುತ್ತಿದ್ದರು. ಅಂದಿನ ಜನರಿಗೆ ಇದು ಅನುಕೂಲಕರವಾಗಿತ್ತು.ತದನಂತರ 1756,1773 ರಲ್ಲಿ ಕುದುರೆ ಗಾಡಿಗಳನ್ನು ಉಪಯೋಗಿಸತೊಡಗಿದರು.ಆಗಲೂ ಸಹ ರಸ್ತೆಯ ಎಡಬದಿಯಲ್ಲೇ ಪ್ರಯಾಣಿಸುತ್ತಿದ್ದರು. ಇದಕ್ಕೂ ಮುಂಚೆ 1300 ನೇ ಸಂವತ್ಸರದಲ್ಲಿ ಅಮದಿನ ಪೋಪ್ ಬೋನಿಫಸ್ VIII ಪ್ರಜೆಗಳು ರಸ್ತೆಯ ಎಡಬದಿಯಲ್ಲೇ ಪ್ರಯಾಣಿಸಬೇಕೆಂದು ಅಪ್ಪಣೆ ಹೊರಡಿಸಿದ್ದರಂತೆ.ಇದೇ ರೀತಿ ಗ್ರೀಕರು,ರೋಮನ್ನರು,ಇಜಿಪ್ಷಿಯನ್ನರು ರಸ್ತೆಯ ಎಡಬದಿಯಲ್ಲೇ ಪ್ರಯಾಣಿಸುತ್ತಿದ್ದರು.1756 ರಲ್ಲಿ ಲಂಡನ್ ಬ್ರಿಡ್ಜ್ ಮೇಲೆಯೂ ಎಡಬದಿಯಲ್ಲೇ ಪ್ರಯಾಣಿಸಬೇಕೆಂದು ಅಂದಿನ ಸರಕಾರ ಆದೇಶ ಹೊರಡಿಸಿತ್ತಂತೆ. ಈ ಪದ್ಧತಿ ಅನುಕೂಲಕರವಾಗಿರುವುದರಿಂದ ಅಲ್ಲಿಯೂ ಸಹ ರಸ್ತೆಯ ಎಡಬದಿಯಲ್ಲೇ ಪ್ರಯಾಣಿಸಲು ಪ್ರಾರಂಭಿಸಿದರಂತೆ.

ಆದರೆ,ಅಮೆರಿಕದಂತಹ ರಾಷ್ಟ್ರಗಳಲ್ಲಿ ಮಾತ್ರ ರಸ್ತೆಯ ಬಲ ಬದಿಯಲ್ಲಿ ಪ್ರಯಾಣಿಸುವುದಕ್ಕೆ ಹೊಂದಿಕೊಂಡಿದ್ದರಂತೆ. ಹಾಗಾಗಿ 1915 ರಲ್ಲಿ ಹೆನ್ರಿ ಫೋರ್ಡ್ ತನ್ನ ಕಾರುಗಳಿಗೆ ಚಾಲಕನ ಆಸನವನ್ನು ಎಡಬದಿಗೆ ಇರಿಸಿದನಂತೆ.ಇದರಿಂದ ಅಂತಹ ಕಾರುಗಳು ರಸ್ತೆಯ ಬಲಬದಿಗೆ ಪ್ರಯಾಣಿಸಲು ಅನುಕೂಲಕರವಾಗಿದ್ದುವಂತೆ.ಹೀಗೆ ಮುಂದುವರಿದು ಅಮೆರಿಕನ್ನರ ಈ ಪದ್ಧತಿ ಚೆನ್ನಾಗಿದೆಯೆಂದು ಇತರೆ ಎಲ್ಲಾ ದೇಶಗಳಲ್ಲೂ ಇದೇ ರೀತಿಯ ವಾಹನ ಚಾಲನೆಯನ್ನು ಅನುಕರಿಸತೊಡಗಿದರಂತೆ.ಇದಕ್ಕೆ ಭಿನ್ನವಾಗಿ ಭಾರತದಲ್ಲಿ ಮಾತ್ರ ರಸ್ತೆಯ ಎಡಬದಿಯಲ್ಲೇ ವಾಹನ ಚಾಲನೆ ಮಾಡುತ್ತಿದ್ದಾರೆ.ಏಕೆಂದರೆ ಬ್ರಿಟಿಷರು ನಮ್ಮ ದೇಶವನ್ನು ಆಳಿದ್ದರು ಹೀಗಾಗಿ ಅವರು ಅನುಸರಿಸುತ್ತಿದ್ದ ಪದ್ಧತಿಯನ್ನೇ ನಾವು ಮುಂದುವರಿಸಿದ್ದೇವೆ.
ಈಗ ನಿಮಗೆ ತಿಳಿಯಿತೇ ಲೆಫ್ಟ್,ರೈಟ್ ಡ್ರೈವಿಂಗ್ ಕುರಿತಾದ ಸತ್ಯಾಂಶ.


Click Here To Download Kannada AP2TG App From PlayStore!

Share this post

scroll to top