ಇಂಡೋನೇಷಿಯಾ ಕರೆನ್ಸಿ ನೋಟುಗಳ ಮೇಲೆ ಗಣೇಶನ ಚಿತ್ರ ಯಾಕೆ ಇರುತ್ತದೆ ಗೊತ್ತಾ…?

ಪ್ರಪಂಚದಾದ್ಯಂತ ಇರುವ ಅನೇಕ ದೇಶಗಳಲ್ಲಿ ಹಿಂದೂಗಳು ಇದ್ದರೂ ಭಾರತದಲ್ಲೇ ಅವರ ಸಂಖ್ಯೆ ಅಧಿಕವಿದೆ. ಯಾಕೆಂದರೆ, ಹಿಂದೂ ಮತ ಹುಟ್ಟಿದ್ದು ಬಾರತದಲ್ಲೇ. ಕೇವಲ ನಮ್ಮ ದೇಶದ ಅನೇಕ ಪ್ರದೇಶಗಳಲ್ಲಿ ಮಾತ್ರ ಹಲವು ದೇವಸ್ಥಾನಗಳು, ಹಿಂದೂ ಮತದ ಹಿಂದಿನ ಚಾರಿತ್ರಾತ್ಮಕ ಸಾಕ್ಷ್ಯಗಳು ಕಾಣುತ್ತವೆ. ನಮ್ಮ ದೇಶದ ಸುತ್ತಮುತ್ತಲಿರುವ ಶ್ರೀಲಂಕ, ಪಾಕ್ ನಂತಹ ದೇಶಗಳಲ್ಲಿ ಹಿಂದೂ ದೇವಸ್ಥಾನಗಳು, ಅಂದಿನ ಗುರುತುಗಳು ಇವೆ ಅಂದರೆ ಕೇವಲ ಸ್ವಲ್ಪ ಮಾತ್ರ. ಈ ದೇಶಗಳನ್ನು ಹೊರತುಪಡಿಸಿದರೆ ಇಂಡೋನೇಷಿಯಾದಲ್ಲಿ ಕಾಣುತ್ತವೆ. ಮುಸ್ಲಿಂ ದೇಶವಾದರೂ ಹಿಂದುಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುತ್ತಾರೆ. ಅಷ್ಟೇ ಅಲ್ಲದೆ ಕರೆನ್ಸಿ ನೋಟುಗಳ ಮೇಲೆ ಗಣೇಶನ ಚಿತ್ರದ ಹಿಂದಿನ ಆಸಕ್ತಿದಾಯಕ ವಿಷಯಗಳನ್ನು ತಿಳಿಯೋಣ.

indonesian-currency

ಇಂಡೋನೇಷಿಯಾದ ಒಟ್ಟು ಜನಸಂಖ್ಯೆಯಲ್ಲಿ ಶೇ.87.5 ರಷ್ಟು ಮುಸ್ಲಿಮರೇ ಇದ್ದು, ಉಳಿದ ಶೇ.3 ರಷ್ಟು ಮಂದಿ ಹಿಂದೂಗಳಿದ್ದರೂ ಕೂಡಾ ಅಲ್ಲಿ ಎಲ್ಲಿ ನೋಡಿದರೂ ಹಿಂದೂ ಸಾಂಪ್ರದಾಯದ ಕುರುಹುಗಳೇ ಹೆಚ್ಚಾಗಿ ಕಾಣುತ್ತವೆ. ಹಲವು ಕಡೆ ಹಿಂದೂ ದೇವಾಲಯಗಳಿದ್ದು, ಜಕಾರ್ತಾ ನಗರದಲ್ಲಿ ಶ್ರೀಕೃಷ್ಣ ಹಾಗೂ ಅರ್ಜುನನ ವಿಗ್ರಹ ಒಂದಿದೆ. 20 ಸಾವಿರ ಕರೆನ್ಸಿ ನೋಟಿನ ಮೇಲೆ ಗಣೇಶನ ಚಿತ್ರ ಇರುತ್ತದೆ. ಇಂಡೋನೇಷಿಯಾವನ್ನು ಡಚ್ಚರು ಆಳುತ್ತಿದ್ದ ಸಮಯದಲ್ಲಿ ‘ಕಿ ಹಾಜರ್ ದೇವಂತರ’ ಎಂಬ ಮಹಾನ್ ಸ್ವಾತಂತ್ರ್ಯ ಸಮರ ಯೋಧ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸುತ್ತಿದ್ದ ಸಮಯದಲ್ಲಿ ಜ್ಞಾನಕ್ಕೆ ಅಧಿಪತಿಯಾದ ಗಣೇಶನ ಬಗ್ಗೆ ತಿಳಿದು, ಆ ಚಿತ್ರವನ್ನು ಕರೆನ್ಸಿ ನೋಟುಗಳ ಮೇಲೆ ಮುದ್ರಿಸಿದರೆ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಎಷ್ಟು ಮುಖ್ಯವಾದದ್ದೆಂದು ತಿಳಿಯುತ್ತದೆ, ನಂತರ ದೇಶವು ಅಭಿವೃದ್ಧಿ ಹೊಂದುತ್ತದೆ ಎಂದು ಭಾವಿಸಿ ನೋಟುಗಳ ಮೇಲೆ ಮುದ್ರಿಸುವ ಕ್ರಮ ಕೈಗೊಂಡಿದ್ದಾರೆ.

jakartha-statue

ಇದರ ಹಿಂದೆ ಮತ್ತೊಂದು ಕತೆ ಇದೆ ಎಂದು ಹೇಳುತ್ತಾರೆ. 1997 ರಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಆಸಿಯಾ ದೇಶಗಳ ಕರೆನ್ಸಿ ದರ ಕುಸಿದಿದ್ದ ಕಾರಣ ಗಣೇಶನ ಚಿತ್ರವನ್ನು ನೋಟುಗಳ ಮೇಲೆ ಮುದ್ರಿಸಿದರೆ ಒಳ್ಳೆಯದಾಗುತ್ತದೆಂದು ಅಂದಿನ ಅಧಿಕಾರಿಗಳು ಈ ರೀತಿ ಮಾಡಿದ್ದರಿಂದ ಕರೆನ್ಸಿ ದರ ಹೆಚ್ಚಾಯಿತಂತೆ. ಅಂದಿನಿಂದ ಅದನ್ನೇ ಮುಂದುವರೆಸಿಕೊಂಡು ಬಂದಿದ್ದಾರೆ.. ವಿದ್ಯೆಗೆ ಅಧಿಪತಿಯಾದ್ದರಿಂದ ಬಾಂಡುಂಗ್ ಇನ್ಸಿಟಿಟ್ಯೂಟ್ ಆಫ್ ಟೆಕ್ನಾಲಜಿ ಚಿನ್ಹೆಯಲ್ಲೂ ಗಣೇಶನ ಚಿತ್ರವಿರುತ್ತದೆ. 2010 ರಲ್ಲಿ ಎಲ್ ಕೆ ಅದ್ವಾನಿ ಇಂಡೋನೇಷಿಯಾಗೆ ಬೇಟಿ ನೀಡಿದಾಗ ಅಲ್ಲಿ ನೆಲೆಸಿರುವ ಹಿಂದೂಗಳಿಗೆ ಅವರು ನೀಡುತ್ತಿರುವ ಗೌರವವನ್ನು ಪ್ರತ್ಯಕ್ಷವಾಗಿ ಕಂಡು ಹರ್ಷ ವ್ಯಕ್ತಪಡಿಸಿದ್ದರಂತೆ. ಪ್ರಪಂಚವೆಲ್ಲಾ ಹೀಗೇ ಆದರೆ, ಒಂದು ಮತಕ್ಕೆ ಸೇರಿದವರು ಇನ್ನೊಂದು ಮತಕ್ಕೆ ಸೇರಿದವರಿಗೆ ಬೆಲೆ ನೀಡಿದಲ್ಲಿ ಅಸಮಾನತೆ, ಭೇದ ಭಾವಗಳು, ಇವುಗಳಿಂದಾಗುವ ಯುದ್ಧಗಳು ಉಂಟಾಗುವುದಿಲ್ಲ ಅಲ್ಲವೆ….?

 


Click Here To Download Kannada AP2TG App From PlayStore!