ಭಾರತೀಯರು ರತಿಕ್ರೀಡೆಯಲ್ಲಿ ಕಾಂಡೋಮ್ ಯಾಕೆ ಬಳಸಲ್ಲ ಗೊತ್ತಾ..? ಅಸಲಿ ಕಾರಣ ಇದೇ..!

ನಿರೋಧ್ ಅಥವಾ ಕಾಂಡೋಮ್ ಶೃಂಗಾರ ಸಮಯದಲ್ಲಿ ಪುರುಷರು ಧರಿಸುವ ಕುಟುಂಬ ನಿಯಂತ್ರಣ ಸಾಧನ. ಇವು 6-8 ಇಂಚು ಉದ್ದ, 1-2 ಇಂಚು ಅಗಲ ಇರುವ ರಬ್ಬರ್ ಕವಚ. ಸಂಭೋಗಕ್ಕೂ ಮೊದಲು ಪುರುಷಾಂಗಕ್ಕೆ ಇದನ್ನು ಹಾಕಿಕೊಳ್ಳುತ್ತಾರೆ. ಸಂಭೋಗದ ಬಳಿಕ ಪುರುಷನ ವೀರ್ಯ ಇದರಲ್ಲಿ ಸಂಗ್ರಹವಾಗುತ್ತವೆ. ವೀರ್ಯ ಕಣಗಳು ಮಹಿಳೆಯ ಗರ್ಭಾಶಯ ಪ್ರವೇಶಿಸುವ ಅವಕಾಶ ಇರಲ್ಲ.

ಕಳೆದ ಮೂರು ದಶಕಗಳಲ್ಲಿ, ಭಾರತದಲ್ಲಿ ಲೈಂಗಿಕ ಕಾಯಿಲೆಗಳು ಶೇ.400ರಷ್ಟು ಹೆಚ್ಚಾಗಿವೆ ಎಂದರೆ ನಂಬುತ್ತೀರಾ.. ಆದರೆ ಇದು ವಾಸ್ತವ. ಕಾಂಡೋಮ್ ಬಳಸದೆ ಇರುವ ಕಾರಣ ಭಾರತದಲ್ಲಿ ಈ ತರಹ ರೋಗಗಳ ಹೆಚ್ಚಾಗುತ್ತಿವೆ. ಕಾಂಡೋಮ್ ಬ್ರ್ಯಾಂಡ್ ಒಂದು ಇತ್ತೀಚೆಗೆ ನಡೆಸಿದ ಸಮೀಕ್ಷೆಯಲ್ಲಿ ಶೇ.95ರಷ್ಟು ಮಂದಿ ಭಾರತೀಯ ಪುರುಷರು ಕಾಂಡೋಮ್ ಬಳಸಲ್ಲ ಎಂದು ಗೊತ್ತಾಗಿದೆ. ಈ ಸಮೀಕ್ಷೆ ಫಲಿತಾಂಶವನ್ನು ಆ ಕಂಪನಿ ಬಹಿರಂಗಪಡಿಸುತ್ತಿದ್ದಂತೆ, ’ಇಂಡಿಯಾ ಹೇಟ್ಸ್ ಕಾಂಡೋಮ್’ ಎಂಬ ಹ್ಯಾಶ್ ಟ್ಯಾಗ್ ಟ್ವಿಟರ್‌ನಲ್ಲಿ ಫುಲ್ ಟ್ರೆಂಡಿಂಗ್ ಆಯಿತು. ಮೆಮೆಗಳು, ಜೋಕ್‌ಗಳನ್ನು ಹಾಕುತ್ತಾ ನೇಟಿಜನ್ಸ್ ಹಬ್ಬದ ರೀತಿ ಸಂಭ್ರಮಿಸಿದರು.

ಇಷ್ಟಕ್ಕೂ ಭಾರತೀಯರು ಯಾಕೆ ಕಾಂಡೋಮ್ ಇಷ್ಟಪಡಲ್ಲ…? ಸಮೀಕ್ಷೆಯಲ್ಲಿ ಬಹಳಷ್ಟು ಮಂದಿ ತಿಳಿಸಿದ್ದೇನೆಂದರೆ, ಕಾಂಡೋಮ್ ಬಳಸಿದರೆ ಮೂಡ್ ಕಡಿಮೆಯಾಗುತ್ತದೆ ಎಂದು. ಕೇವಲ ಪುರುಷರಷ್ಟೇ ಅಲ್ಲದೆ, ಮಹಿಳೆಯರು ಸಹ ಕಾಂಡೋಮ್ ಬಳಸಿದರೆ ಆ ಫೀಲ್ ಸಿಗುತ್ತಿಲ್ಲ ಎಂದಿರುವುದು ಗಮನಾರ್ಹ. ಕೆಲವರು ಕಾಂಡೋಮ್‍ನಿಂದ ಬರುವ ರಬ್ಬರ್ ವಾಸನೆಯಿಂದ ತಮಗೆ ಮೂಡ್ ಆಫ್ ಆಗುತ್ತದೆಂದು ಸಮೀಕ್ಷೆಯಲ್ಲಿ ಹೇಳಿದ್ದಾರೆ. ಮುಖ್ಯವಾಗಿ ಮೊಟ್ಟಮೊದಲ ಸಲ ಕಾಂಡೋಮ್ ಧರಿಸುವವರಾದರೆ, ಕನಿಷ್ಠ ಶೃಂಗಾರದಲ್ಲಿ ಮುಂದೆ ಹೋಗುವ ಧೈರ್ಯ ಸಹ ಬರುತ್ತಿಲ್ಲವಂತೆ. ವಿಚಿತ್ರ ಅನ್ನಿಸಿದರೂ, ಭಾರತದಲ್ಲಿ ಕಾಂಡೋಮ್ ಬಳಕೆ ಕಡಿಮೆಯಾಗಲೂ ಇವೂ ಸಹ ಕಾರಣಗಳು.

ಇನ್ನು ಎಲ್ಲದಕ್ಕಿಂತ ಮುಖ್ಯವಾದ ಕಾರಣ, ಅಂಗಡಿಗೆ ಹೋಗಿ ಕಾಂಡೋಮ್ ಕೊಳ್ಳಲು ನಾಚಿಕೆ. ರಸ್ತೆ ಪಕ್ಕ ಟ್ಯಾಂಕ್ ಖಾಲಿ ಮಾಡಲು ಎಳ್ಳಷ್ಟೂ ನಾಚಿಕೆ ಪಡದ ಭಾರತೀಯ ಪುರುಷರು, ಅಂಗಡಿಗೆ ಹೋಗಿ ಕಾಂಡೋಮ್ಸ್ ಕೊಳ್ಳಬೇಕೆಂದರೆ ಮಾತ್ರ ತುಂಬಾ ನಾಚಿಕೆ ಪಡುತ್ತಾರಂತೆ. ಹಾಗಿದ್ದರೆ ಇದಕ್ಕೆ ಪರಿಹಾರ ಎಂದರೆ, ಎಟಿಎಂ ರೀತಿ ಕಾಂಡೋಮ್ಸ್‌ಗೂ ಮೆಷಿನ್ಸ್ ಇಡಬೇಕೆಂದು ಸೂಚಿಸುತ್ತಿದ್ದಾರೆ ಕೆಲವು ನೆಟಿಜನ್ಸ್. ಆ ಮೂಲಕ, ಅಂಗಡಿಗೆ ಹೋಗಿ ಕೊಂಡು ಕಿರಿಕಿರಿ ಅನುಭವಿಸುವ ಬದಲು ಎಟಿಎಂನಲ್ಲಿ ಹಣ ತೆಗೆದುಕೊಳ್ಳುವಂತೆ ಕಾಂಡೋಮ್ ತೆಗೆದುಕೊಳ್ಳಬಹುದು ಅಲ್ಲವೇ ಎನ್ನುತ್ತಿದ್ದಾರೆ.

ಆದರೂ ಅಸಲಿ ಸಮಸ್ಯೆ ಕಾಂಡೋಮ್ ಕೊಳ್ಳುವಲ್ಲಿ ಇಲ್ಲ, ಬಳಸುವಲ್ಲಿ ಇದೆ. ಬಯಕೆ ತೀರುವುದರ ಜತೆಗೆ, ಅನೇಕ ಲೈಂಗಿಕ ಕಾಯಿಲೆಗಳನ್ನು ತಡೆಯಬಹುದು.


Click Here To Download Kannada AP2TG App From PlayStore!

Share this post

scroll to top